ದೇಶಾದ್ಯಂತ ಪೆಟ್ರೋಲ್‌, ಡೀಸೆಲ್‌ ದರ ₹2 ಇಳಿಕೆ

KannadaprabhaNewsNetwork | Updated : Mar 15 2024, 07:40 AM IST

ಸಾರಾಂಶ

ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆ ಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳನ್ನು ತಲಾ 2 ರು. ಇಳಿಕೆ ಮಾಡಿದೆ.

ನವದೆಹಲಿ: ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆ ಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳನ್ನು ತಲಾ 2 ರು. ಇಳಿಕೆ ಮಾಡಿದೆ. 

ಶುಕ್ರವಾರ ದೇಶಾದ್ಯತ ಬೆಳಗ್ಗೆ 6ರಿಂದ ಇದು ಜಾರಿಗೆ ಬರಲಿದೆ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ ಘೋಷಿಸಿದ್ದಾರೆ. 

ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ತುಸು ಇಳಿಕೆಯಾದ ಕಾರಣ ಇಂಧನ ದರಗಳನ್ನು ಇಳಿಕೆ ಮಾಡಲಾಗಿದೆ. ಇದಕ್ಕೂ ಮೊದಲು ಗ್ಯಾಸ್‌ ಸಿಲಿಂಡರ್‌ ದರವನ್ನೂ ಸಹ ಕೇಂದ್ರ ಸರ್ಕಾರ 100 ರು. ಕಡಿಮೆ ಮಾಡಿತ್ತು. 

ಈ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಹೊಸ ಪೆಟ್ರೋಲ್‌ ದರ 94.72 ರು.ಗಳಿಗೆ ಇಳಿದಿದೆ, ಮುಂಬೈನಲ್ಲಿ 104.21ರು.ಗಳಷ್ಟಿದೆ. ಈ ಆದೇಶವು ಮಾ.15ರ ಬೆಳಗ್ಗೆ 6 ಗಂಟೆಯಿಂದ ಜಾರಿಗೆ ಬರಲಿದೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.

ರಾಜಸ್ಥಾನದಲ್ಲೂ 5 ರು. ಇಳಿಕೆ: ಈ ನಡುವೆ ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ಪೆಟ್ರೋಲ್‌, ಡೀಸೆಲ್‌ ವ್ಯಾಟ್‌ ದರಗಳನ್ನು ಇಳಿಕೆ ಮಾಡಿದೆ. ಹೀಗಾಗಿ ಅಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು 5 ರು.ಗಳಷ್ಟು ಕಡಿಮೆಯಾಗಿದೆ.

ಬೆಂಗಳೂರಿನ ದರ (ಲೀ.ಗೆ)

ಪೆಟ್ರೋಲ್‌: ಹಳೇ ದರ 101.94 ರು ಹೊಸ ಅಂದಾಜು ದರ 99.94 ರು.

ಡೀಸೆಲ್‌:  ಹಳೇ ದರ 87.89 ರು ಹೊಸ ಅಂದಾಜು ದರ 85.89 ರು.

Share this article