ಗೂಡ್ಸ್‌ ರೈಲಿಗೆ ಬೆಂಕಿ ಬಿದ್ದು 13 ಲಕ್ಷ ಲೀ. ಡೀಸೆಲ್‌ ಭಸ್ಮ

Published : Jul 14, 2025, 06:30 AM IST
Chennai Bengaluru Oil Train Fire

ಸಾರಾಂಶ

ಇಂಧನ ಸಾಗಿಸುತ್ತಿದ್ದ ರೈಲ್ವೆ ಗೂಡ್ಸ್ ಟ್ಯಾಂಕರ್‌ವೊಂದಕ್ಕೆ ಇಂದು ಬೆಳಿಗ್ಗೆ ತಿರುವಳ್ಳೂರು ರೈಲು ನಿಲ್ದಾಣದ ಬಳಿ ಬೆಂಕಿ ತಗುಲಿದೆ. ಈ ಘಟನೆ ರೈಲು ಸಂಚಾರದಲ್ಲಿ ಭಾರೀ ಅಡಚಣೆಯನ್ನುಂಟು ಮಾಡಿದ್ದು, ಕಚೇರಿ ವ್ಯವಹಾರಗಳು, ವ್ಯಾಪಾರೋದ್ಯಮ ಹಾಗೂ ಸಾಮಾನ್ಯ ಪ್ರಯಾಣಿಕರು ಪರದಾಡುತ್ತಿದ್ದಾರೆ.

ತಿರುವಳ್ಳೂರು : ಇಂಧನ ಸಾಗಿಸುತ್ತಿದ್ದ ರೈಲ್ವೆ ಗೂಡ್ಸ್ ಟ್ಯಾಂಕರ್‌ವೊಂದಕ್ಕೆ ಇಂದು ಬೆಳಿಗ್ಗೆ ತಿರುವಳ್ಳೂರು ರೈಲು ನಿಲ್ದಾಣದ ಬಳಿ ಬೆಂಕಿ ತಗುಲಿದೆ. ಈ ಘಟನೆ ರೈಲು ಸಂಚಾರದಲ್ಲಿ ಭಾರೀ ಅಡಚಣೆಯನ್ನುಂಟು ಮಾಡಿದ್ದು, ಕಚೇರಿ ವ್ಯವಹಾರಗಳು, ವ್ಯಾಪಾರೋದ್ಯಮ ಹಾಗೂ ಸಾಮಾನ್ಯ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಚೆನ್ನೈನಿಂದ ಬೆಂಗಳೂರಿಗೆ ಇಂಧನವನ್ನು ಸಾಗಿಸುತ್ತಿದ್ದ ರೈಲು ಈ ಅಪಘಾತಕ್ಕೆ ಒಳಗಾಗಿದೆ. ಬೆಳಿಗ್ಗೆ ಜಾವ ಈ ಘಟನೆ ಬೆಳಕಿಗೆ ಬಂದಿದ್ದು, ಟ್ಯಾಂಕರ್‌ಗೂ ರೈಲು ಹಳಿಗಳಿಗೂ ದಟ್ಟ ಹೊಗೆ ಹರಡುತ್ತಿರುವ ದೃಶ್ಯಗಳು ಕಂಡುಬಂದಿವೆ.  18 ತೈಲ ಟ್ಯಾಂಕರ್‌ ಅಗ್ನಿಗೆ ಆಹುತಿಯಾಗಿವೆ. ಈ ವೇಳೆ ಟ್ಯಾಂಕರ್‌ನಲ್ಲಿದ್ದ 12.6 ಲಕ್ಷ ಲೀಟರ್ ಡೀಸೆಲ್ ಸುಟ್ಟು ಭಸ್ಮವಾಗಿದ್ದು, 12 ಕೋಟಿ ರು.ನಷ್ಟವಾಗಿದೆ. ಘಟನೆಯಲ್ಲಿ ಯಾವುದೇ ಸಾವು ನೋವಾಗಿಲ್ಲ.

ಬೆಂಕಿಯ ಮೂಲ ಕಾರಣ ಇನ್ನೂ ಸ್ಪಷ್ಟವಾಗಿಲ್ಲವಾದರೂ, ಭದ್ರತಾ ಕ್ರಮವಾಗಿ ದಕ್ಷಿಣ ರೈಲ್ವೆ ಕೆಲ ಪ್ರಮುಖ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ.

PREV
Read more Articles on

Recommended Stories

ಮಾಜಿ ಶಾಸಕ ಕೋಟಾದಡಿ ಪಿಂಚಣಿಗೆ ಧನಕರ್‌ ಅರ್ಜಿ! ತಿಂಗಳಿಗೆ 42 ಸಾವಿರ ರು.
ಉಗ್ರರ ‘ಮಾನವ ಜಿಪಿಎಸ್‌’ ಅಂತಲೇ ಕುಖ್ಯಾತಿ ಪಡೆದಿದ್ದ ಪಾಕಿಸ್ತಾನಿ ಬಾಗು ಖಾನ್ ಫಿನಿಶ್‌