2027ರ ಮಾ.1ರಿಂದ ಜನಗಣತಿ

KannadaprabhaNewsNetwork |  
Published : Jun 05, 2025, 12:52 AM ISTUpdated : Jun 05, 2025, 04:58 AM IST
ಜನಗಣತಿ | Kannada Prabha

ಸಾರಾಂಶ

2021ರಲ್ಲಿ ಕೋವಿಡ್‌ ಕಾರಣದಿಂದ ಮುಂದೂಡಿಕೆಯಾಗಿದ್ದ ಜನಗಣತಿ-2027 ಹಾಗೂ ಅದರ ಜತೆಗಿನ ಜಾತಿ ಗಣತಿ ಆರಂಭದ ದಿನಾಂಕವನ್ನು ಕೇಂದ್ರ ಸರ್ಕಾರ ಘೋಷಿಸಿದೆ 

 ನವದೆಹಲಿ: 2021ರಲ್ಲಿ ಕೋವಿಡ್‌ ಕಾರಣದಿಂದ ಮುಂದೂಡಿಕೆಯಾಗಿದ್ದ ಜನಗಣತಿ-2027 ಹಾಗೂ ಅದರ ಜತೆಗಿನ ಜಾತಿ ಗಣತಿ ಆರಂಭದ ದಿನಾಂಕವನ್ನು ಕೇಂದ್ರ ಸರ್ಕಾರ ಘೋಷಿಸಿದೆ. 2026ರ ಅಕ್ಟೋಬರ್‌ 1ರಿಂದ ಜನಗಣತಿ ಜಮ್ಮು-ಕಾಶ್ಮೀರ, ಲಡಾಖ್‌, ಉತ್ತರಾಖಂಡ, ಹಿಮಾಚಲ ಪ್ರದೇಶದಲ್ಲಿ ಗಣತಿ ಆರಂಭವಾಗಲಿದೆ. ಕರ್ನಾಟಕ ಸೇರಿದಂತೆ ದೇಶದ ಉಳಿದ ಭಾಗಗಳಲ್ಲಿ ಗಣತಿಯು 2027ರ ಮಾ.1ರಿಂದ ಆರಂಭವಾಗಲಿದೆ.

16 ವರ್ಷಗಳ ನಂತರ 2027ರ ಜನಗಣತಿ ನಡೆಯಲಿದ್ದು, ಇದರ ಜೊತೆಗೆ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಘೋಷಿಸಿದ್ದ ಜಾತಿ ಗಣತಿಯೂ ನಡೆಯಲಿದೆ. ಈಗಾಗಲೇ ಇದಕ್ಕೆ ತಾತ್ಕಾಲಿಕ ವೇಳಾಪಟ್ಟಿ ಸಿದ್ಧಗೊಂಡಿದೆ. ದೇಶಾದ್ಯಂತ ಎರಡು ಹಂತದಲ್ಲಿ ಇದು ನಡೆಯಲಿದೆ.

ಈ ಬಗ್ಗೆ ಕೇಂದ್ರ ಗೃಹ ಇಲಾಖೆ ಪ್ರಕಟಣೆ ಹೊರಡಿಸಿದ್ದು, ‘ಕೇಂದ್ರಾಡಳಿತ ಪ್ರದೇಶಗಳಾದ ಲಡಾಖ್, ಜಮ್ಮು ಕಾಶ್ಮೀರ, ಗುಡ್ಡಗಾಡು ರಾಜ್ಯಗಳಾದ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ 2026ರ ಆಕ್ಟೋಬರ್ 1ರಿಂದ ಜನಗಣತಿ ಆರಂಭವಾಗಲಿದೆ. ಇದಾದ ಬಳಿಕ ದೇಶದ ಉಳಿದ ಭಾಗಗಳಲ್ಲಿ ಜನಸಂಖ್ಯಾ ಜಾತಿಗಣತಿ 2027ರ ಮಾ.1ರಿಂದ ಆರಂಭವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ಅಧಿಸೂಚನೆಯನ್ನು ಜೂನ್ 16 ರಂದು ಪ್ರಕಟಿಸಲಾಗುವುದು’ ಎಂದಿದೆ.

1ನೇ ಹಂತದಲ್ಲಿ ಗಣತಿ ನಡೆಯಲಿರುವ ಪ್ರದೇಶಗಳು ವರ್ಷಾಂತ್ಯಕ್ಕೆ ಹಿಮಪಾತ ಎದುರಿಸಲಿವೆ. ಹೀಗಾಗಿ ಅಲ್ಲಿ ಮೊದಲೇ ಗಣತಿ ಆರಂಭಿಸುವ ಉದ್ದೇಶವಿದೆ. ಉಳಿದ ಭಾಗಗಳಲ್ಲಿ ಬೇಸಗೆಯಲ್ಲಿ ನಡೆಯಲಿದೆ.ಪ್ರತಿ 10 ವರ್ಷಕ್ಕೊಮ್ಮೆ ನಡೆಯುವ ಜಾತಿಗಣತಿಯನ್ನು 2011ರಲ್ಲಿ ಕೊನೆಯದಾಗಿ ನಡೆಸಲಾಗಿತ್ತು. 2021ರಲ್ಲಿಯೂ ಎರಡು ಹಂತದಲ್ಲಿ ನಡೆಸಲು ಕೇಂದ್ರ ಸರ್ಕಾರ ವೇಳಾಪಟ್ಟಿ ಸಿದ್ಧಪಡಿಸಿತ್ತು. ಮೊದಲ ಹಂತ 2020ರ ಏಪ್ರಿಲ್‌- ಸೆಪ್ಟೆಂಬರ್‌ನಲ್ಲಿ ಮತ್ತು ಎರಡನೇಯ ಹಂತ 2021ರ ಫೆಬ್ರವರಿಯಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದ ಮುಂದೂಡಲ್ಪಟ್ಟಿತ್ತು.

PREV
Read more Articles on

Recommended Stories

ಇನ್ನೂ 20 ವರ್ಷ ನೀವು ವಿಪಕ್ಷದಲ್ಲಿ: ಕಾಂಗ್ರೆಸ್‌ಗೆ ಶಾ ಟಾಂಗ್
ಭಾರತಕ್ಕೆ ಸೇನೆಯೇ ಬೇಡ ಎಂದು ನೆಹರು ಹೇಳಿದ್ದರು : ಸಂಸದ ತೇಜಸ್ವಿ ಸೂರ್ಯ