ಪ್ರಿಯಕರನ ಕೊಂದು ಗೋಡೆಯಲ್ಲಿಟ್ಟು ಪ್ಲಾಸ್ಟರ್!

KannadaprabhaNewsNetwork |  
Published : Jun 04, 2025, 02:43 AM IST
ಕೊಲೆ | Kannada Prabha

ಸಾರಾಂಶ

ಗಂಡನ ಕೊಂದು ಡ್ರಮ್‌ನಲ್ಲಿ ಸಿಮೆಂಟ್‌ ಹಾಕಿ ಸೀಲ್ ಮಾಡಿದ ಮುಸ್ಕಾನ್‌ ಎಂಬಾಕೆಯ ಭಯಾನಕ ಕೃತ್ಯ ಮಾಸುವ ಮುನ್ನವೇ, ಮಹಿಳೆಯೊಬ್ಬಳು ತನ್ನ ಪ್ರಿಯಕರನನ್ನು ಹತ್ಯೆಗೈದು ಗೋಡೆಯಲ್ಲಿಟ್ಟು ಸಿಮೆಂಟ್‌ನಿಂದ ಪ್ಲಾಸ್ಟರ್‌ ಮಾಡಿದ ಘಟನೆ ಬೆಳಕಿಗೆ ಬಂದಿದೆ.

- ಪ್ರಿಯಕರನ ಹಿಂಸೆ ತಾಳಲಾಗದೇ ಪ್ರಿಯತಮೆ ಕೃತ್ಯ । ಕೋಲ್ಕತಾದಲ್ಲಿ ಘಟನೆ

ಮಾಲ್ಡಾ: ಗಂಡನ ಕೊಂದು ಡ್ರಮ್‌ನಲ್ಲಿ ಸಿಮೆಂಟ್‌ ಹಾಕಿ ಸೀಲ್ ಮಾಡಿದ ಮುಸ್ಕಾನ್‌ ಎಂಬಾಕೆಯ ಭಯಾನಕ ಕೃತ್ಯ ಮಾಸುವ ಮುನ್ನವೇ, ಮಹಿಳೆಯೊಬ್ಬಳು ತನ್ನ ಪ್ರಿಯಕರನನ್ನು ಹತ್ಯೆಗೈದು ಗೋಡೆಯಲ್ಲಿಟ್ಟು ಸಿಮೆಂಟ್‌ನಿಂದ ಪ್ಲಾಸ್ಟರ್‌ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಕನ್ನಡದ ‘ದೃಶ್ಯ’ ಚಿತ್ರ ನೆನಪಿಸುವ ಈ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದಿದೆ.ದೂರು:

ಈ ನಡುವೆ ಸದ್ದಾಂ ನದಾಫ್‌ ಮೇ 18ರಂದು ಮನೆಯಿಂದ ಹೋಗಿದ್ದವನು ಹಿಂದಿರುಗಿ ಬಂದಿರಲಿಲ್ಲ. ಈ ಸಂಬಂಧ ಆತನ ಪತ್ನಿ ನಾಸ್ರಿನ್ ಖಾತುನ್ ಮೇ 23ರಂದು ದೂರು ದಾಖಲಿಸಿದ್ದರು. ಜತೆಗೆ ತಮಗೆ ತಮ್ಮ ಸಂಬಂಧಿಯೇ ಆಗಿದ್ದ ರೆಹಮಾನ್ ನದಾಫ್‌ ಮತ್ತು ಮೌಮಿತಾ ಹಸನ್ ವಿರುದ್ಧ ಅನುಮಾನ ಇರುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮೌಮಿತಾಳನ್ನು ವಿಚಾರಣೆ ಮಾಡಿದಾಗ ಮೊದಲಿಗೆ ಒಪ್ಪಿಕೊಳ್ಳದೇ ಇದ್ದರೂ ಕೊನೆಗೆ ಪ್ರಿಯಕರನ ಕಾಟ ತಾಳಲಾಗದೇ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.ಆಗಿದ್ದೇನು?:ಸದ್ದಾಂ ನದಾಫ್‌ ಎಂಬಾತ ನಾಸ್ರಿನ್ ಎಂಬಾಕೆಯನ್ನು ಮದುವೆಯಾಗಿದ್ದ. ಆದರೆ ಇದರ ನಡುವೆ ತನ್ನ ಸಂಬಂಧಿಯೇ ಆಗಿದ್ದ ಮೌಮಿತಾ ಎಂಬಾಕೆಯ ಜೊತೆಗೂ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಹಲವು ವರ್ಷಗಳಿಂದ ಈ ಅಕ್ರಮ ಸಂಬಂಧ ಮುಂದುವರೆದುಕೊಂಡು ಬಂದಿತ್ತು. ಆದರೆ ಇತ್ತೀಚೆಗೆ ಇಬ್ಬರ ನಡುವೆ ಪದೇ ಪದೇ ಜಗಳ ಆಗುತ್ತಿತ್ತು. ಈ ವೇಳೆ ನಮ್ಮಿಬ್ಬರ ಸಂಬಂಧದ ಬಗ್ಗೆ ನಿನ್ನ ಪತಿಗೆ ಹೇಳುತ್ತೇನೆ ಎಂದು ಸದ್ದಾಂ ನಾಸ್ರಿನ್‌ಗೆ ಬೆದರಿಕೆ ಹಾಕಿದ್ದ. ಇದರಿಂದ ಬೇಸತ್ತ ಆಕೆ ಇತ್ತೀಚೆಗೆ ಕೆಲ ಆಪ್ತರ ಜೊತೆಗೆ ಸೇರಿಕೊಂಡು ಸದ್ದಾಂನನ್ನು ಹತ್ಯೆಗೈದು, ಬಳಿಕ ಮನೆಯ ಗೋಡೆಯೊಂದರಲ್ಲಿ ಆತನ ಶವ ಇಟ್ಟು ಹೊರಗಿನಿಂದ ಪ್ಲಾಸ್ಟರ್‌ ಮಾಡಿದ್ದಳು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ