ಲೋಕಸಭೆ, ವಿಧಾನಸಭೆ ಸೀಟು 50% ಹೆಚ್ಚಿಸಿಮಹಿಳಾ ಮೀಸಲು ಕಲ್ಪಿಸುವ ಬಿಲ್‌ಗೆ ಕ್ಷಣಗಣನೆ

KannadaprabhaNewsNetwork |  
Published : Nov 30, 2026, 03:00 AM IST
ಲೋಕಸಭೆ  | Kannada Prabha

ಸಾರಾಂಶ

ಸೋಮವಾರದಿಂದ ಸಂಸತ್ತಿನ 4 ದಿನಗಳ ವಿಶೇಷ ಅಧಿವೇಶನ ಆರಂಭವಾಗಲಿದೆ. ಈ ವೇಳೆ ಮೊದಲಿಗೆ ಲೋಕಸಭೆಯಲ್ಲಿ ಸೋಮವಾರ ಮಹಿಳೆಯರಿಗೆ ಶಾಸನಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿ ಕಲ್ಪಿಸಲು ದಾರಿ ಮಾಡಿಕೊಡುವ ‘ಕ್ಷೇತ್ರ ಮರುವಿಂಗಡಣೆ ಸಂವಿಧಾನ ತಿದ್ದುಪಡಿ ವಿಧೇಯಕ’ ಸೇರಿ 3 ಮಹತ್ವದ ಮಸೂದೆಗಳನ್ನು ಸರ್ಕಾರ ಮಂಡಿಸಲಿದೆ.

ಮೋದಿ ಮಿಷನ್‌ 360!- ಇಂದಿನಿಂದ ನಾಲ್ಕು ದಿನಗಳ ಐತಿಹಾಸಿಕ ಸಂಸತ್‌ ವಿಶೇಷ ಅಧಿವೇಶನ- ಕ್ಷೇತ್ರ ಮರುವಿಂಗಡಣೆ ವಿಧೇಯಕ ಲೋಕಸಭೆಯಲ್ಲಿ ಇಂದೇ ಮಂಡನೆ- 2/3 ಬಹುಮತಕ್ಕೆ ಬೇಕು 360 । ಮ್ಯಾಜಿಕ್‌ ಸಂಖ್ಯೆ ಸನಿಹದಲ್ಲಿ ಎನ್‌ಡಿಎ- ದೇವೇಗೌಡರ ಸರ್ಕಾರದ ಕನಸು ಮೋದಿ ಸರ್ಕಾರದಲ್ಲಿ ಸಾಕಾರದತ್ತ

ಎನ್‌ಡಿಎ ಬಲ

ಎನ್‌ಡಿಎ 299

ಬಂಡಾಯ ಟಿಎಂಸಿ 20

ಡಿಎಂಕೆ 22

ಎನ್‌ಸಿಪಿ-ಎಸ್ಪಿ 8

ವೈಎಸ್‌ಆರ್‌ಸಿಪಿ 4

ಜೆಎಂಎಂ 3

ಸ್ವತಂತ್ರರು 7

---ಏನಿದು ಮಸೂದೆ?- ಶಾಸನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲು ನೀಡಬೇಕೆಂಬುದು ಬಹಳ ಹಳೆಯ ಬೇಡಿಕೆ- ಈಗಾಗಲೇ ಮಹಿಳಾ ಮೀಸಲು ಮಸೂದೆಯನ್ನು ಅಂಗೀಕರಿಸಿರುವ ಕೇಂದ್ರದ ಮೋದಿ ಸರ್ಕಾರ- ಅದರ ಜಾರಿಗೆ ಲೋಕಸಭೆ, ವಿಧಾನಸಭಾ ಕ್ಷೇತ್ರಗಳನ್ನು ಶೇ.50ರಷ್ಟು ಹೆಚ್ಚಿಸಲು ಸರ್ಕಾರ ಯತ್ನ- ಇದಕ್ಕಾಗಿ ಲೋಕಸಭೆ, ರಾಜ್ಯಸಭೆಯಲ್ಲಿ 3 ಮಸೂದೆಗಳನ್ನು ಮಂಡನೆ ಮಾಡಲು ಸರ್ಕಾರ ಸಿದ್ಧತೆ- ಇದರಲ್ಲಿ 2 ವಿಧೇಯಕ ಸಂವಿಧಾನ ತಿದ್ದುಪಡಿಗೆ ಸಂಬಂಧಿಸಿದ್ದಾಗಿರುವುದರಿಂದ 2/3 ಬಹುಮತ ಬೇಕು- ಆ ಸಂಖ್ಯೆಯನ್ನು ಗಳಿಸುವ ವಿಶ್ವಾಸದಲ್ಲಿ ಎನ್‌ಡಿಎ ಸರ್ಕಾರ. ವಿಧೇಯಕ ಅಂಗೀಕರಿಸಿದರೆ ದೊಡ್ಡ ಯಶ--ಬಿಲ್‌ ಪಾಸಾದರೆಏನಾಗಲಿದೆ?- ಲೋಕಸಭೆ ಸ್ಥಾನಗಳ ಸಂಖ್ಯೆ ಹಾಲಿ 543ರಿಂದ 850ರವರೆಗೆ ಏರಿಕೆ ಆಗಲಿದೆ- ರಾಜ್ಯಗಳ ವಿಧಾನಸಭೆ ಸ್ಥಾನಗಳ ಸಂಖ್ಯೆಯೂ ಶೇ.50ರಷ್ಟು ಹೆಚ್ಚಾಗಲಿದೆ- ವಿಧಾನಸಭೆಗಳ ಗರಿಷ್ಠ ಮಿತಿ ಹಾಲಿ 500ರಿಂದ 650ಕ್ಕೆ ಏರಿಕೆಯಾಗಲಿದೆ- ಮಹಿಳೆಯರಿಗೆ ಶಾಸನಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿ ಸಿಗಲಿದೆ- 2029ರ ಲೋಕಸಭಾ ಚುನಾವಣೆಯಲ್ಲೇ ಮೀಸಲಾತಿ ಜಾರಿ ಸಾಧ್ಯತೆ ಇದೆ---

ನಾರಿಶಕ್ತಿ ಸಬಲೀಕರಣಕ್ಕೆಎನ್‌ಡಿಎ, ಬಿಜೆಪಿ ಬದ್ಧನಾರಿಶಕ್ತಿಯ ಸಬಲೀಕರಣದ ಸಂಕಲ್ಪಕ್ಕೆ ಎನ್‌ಡಿಎ ಹಾಗೂ ಬಿಜೆಪಿ ಬದ್ಧವಾಗಿದೆ. ನಮಗೆ ರಾಷ್ಟ್ರೀಯ ಹಿತಾಸಕ್ತಿಯೇ ಪರಮೋಚ್ಚ. ಕೆಲ ವ್ಯಕ್ತಿಗಳಿಗೆ ರಾಷ್ಟ್ರೀಯ ಹಿತಾಸಕ್ತಿಗಿಂತ ಪಕ್ಷದ ಹಿತಾಸಕ್ತಿಯೇ ಎಲ್ಲಕ್ಕಿಂತ ಮುಖ್ಯವಾದಾಗ ನಾರಿಶಕ್ತಿ ಮತ್ತು ರಾಷ್ಟ್ರೀಯ ಹಿತಾಸಕ್ತಿಯು ತಕ್ಕ ಬೆಲೆ ತೆರಬೇಕಾಗುತ್ತದೆ.- ನರೇಂದ್ರ ಮೋದಿ ಪ್ರಧಾನಿ---

ಪಿಟಿಐ ನವದೆಹಲಿಸೋಮವಾರದಿಂದ ಸಂಸತ್ತಿನ 4 ದಿನಗಳ ವಿಶೇಷ ಅಧಿವೇಶನ ಆರಂಭವಾಗಲಿದೆ. ಈ ವೇಳೆ ಮೊದಲಿಗೆ ಲೋಕಸಭೆಯಲ್ಲಿ ಸೋಮವಾರ ಮಹಿಳೆಯರಿಗೆ ಶಾಸನಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿ ಕಲ್ಪಿಸಲು ದಾರಿ ಮಾಡಿಕೊಡುವ ‘ಕ್ಷೇತ್ರ ಮರುವಿಂಗಡಣೆ ಸಂವಿಧಾನ ತಿದ್ದುಪಡಿ ವಿಧೇಯಕ’ ಸೇರಿ 3 ಮಹತ್ವದ ಮಸೂದೆಗಳನ್ನು ಸರ್ಕಾರ ಮಂಡಿಸಲಿದೆ. ಅಭೂತಪೂರ್ವ ಎಂಬಂತೆ ಹಲವು ವಿಪಕ್ಷಗಳ ಬೆಂಬಲದಿಂದ 3ನೇ 2ರಷ್ಟು ಬಹುಮತ ತನಗೆ ಸಿಗಲಿದೆ ಎಂಬ ವಿಶ್ವಾಸ ಎನ್‌ಡಿಎಗೆ ಇದೆ. ಹೀಗಾಗಿ ಈ ಮ್ಯಾಜಿಕ್‌ ಸಂಖ್ಯೆ 360 ಮೀರಿ ಲೋಕಸಭೆಯಲ್ಲಿ 371ರಷ್ಟು ಸದಸ್ಯರ ಬೆಂಬಲ ತನಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಸಂವಿಧಾನದ 132ನೇ ತಿದ್ದುಪಡಿ ವಿಧೇಯಕ, ಕ್ಷೇತ್ರ ಮರು ವಿಂಗಡಣೆ ವಿಧೇಯಕ-2026 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು ತಿದ್ದುಪಡಿ ವಿಧೇಯಕ -2026. ಇವು ಮಂಡನೆ ಆಗಲಿರುವ 3 ವಿಧೇಯಕಗಳು. ಇವು ಅಂಗೀಕಾರವಾದರೆ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹಾಲಿ 543ರಿಂದ 850ರವರೆಗೆ ಏರಿ, 30 ವರ್ಷದ ಹಿಂದೆ ಆರಂಭವಾದ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಸ್ಥಾನ ಕಲ್ಪಿಸುವ ಯತ್ನ ಕೊನೆಗೂ ಫಲಿಸಲಿದೆ. ಅಂದರೆ 850 ಸಂಖ್ಯೆಗೆ ಅನುಗುಣವಾಗಿ ಮಹಿಳೆಯರಿಗೆ ಲೋಕಸಭೆಯಲ್ಲಿ ಮೀಸಲು ಸಿಗಲಿದೆ. ರಾಜ್ಯ ವಿಧಾನಸಭೆಗಳಲ್ಲೂ ಇದೇ ರೀತಿಯ ಮಹಿಳಾ ಮೀಸಲು ಸಿಗಲಿದೆ.1996ರಲ್ಲಿ ಮೊದಲ ಬಾರಿ ಅಂದಿನ ಎಚ್‌.ಡಿ. ದೇವೇಗೌಡ ಸರ್ಕಾರ ಮಹಿಳಾ ಮೀಸಲು ಯತ್ನ ಆರಂಭಿಸಿತ್ತು. ನಂತರ ವಿವಿಧ ಕಾರಣಗಳಿಂದ ಅದು ಈಡೇರಿರಲಿಲ್ಲ.ವಿಫಲವಾಗಿದ್ದ ಮೋದಿ ಸರ್ಕಾರ:

ಕಳೆದ ಏಪ್ರಿಲ್‌ನಲ್ಲಿ ಮೋದಿ ಸರ್ಕಾರ ಮೊದಲ ಬಾರಿ ಈ ಯತ್ನಕ್ಕೆ ಕೈ ಹಾಕಿದಾಗ ಮಂಡನೆಯಾಗಿದ್ದ ಈ ವಿಧೇಯಕಗಳಿಗೆ ಪ್ರತಿಪಕ್ಷಗಳ ವಿರೋಧದಿಂದಾಗಿ ಸೋಲಾಗಿತ್ತು. ಆದರೆ ಇದೀಗ ಎಲ್ಲಾ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸುವ ಪ್ರಸ್ತಾಪದೊಂದಿಗೆ ಮಂಡನೆಯಾಗುತ್ತಿರುವ ಪರಿಷ್ಕೃತ ಕ್ಷೇತ್ರಮರುವಿಂಗಡಣೆ ವಿಧೇಯಕಕ್ಕೆ ಈಗಾಗಲೇ ಪ್ರಮುಖ ವಿಪಕ್ಷ ಡಿಎಂಕೆ ಹಾಗೂ ಎನ್‌ಸಿಪಿ ಬೆಂಬಲ ಘೋಷಿಸಿದ್ದು, ಮತ್ತಷ್ಟು ಪಕ್ಷಗಳ ಬೆಂಬಲದ ಸುಳಿವೂ ಸಿಕ್ಕಿರುವುದು ಕೇಂದ್ರದ ಆತ್ಮವಿಶ್ವಾಸ ಹೆಚ್ಚಿಸಿದೆ. ಆದರೆ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಕೂಟ ಮಸೂದೆಯನ್ನು ವಿರೋಧಿಸುತ್ತಿದೆ.

371 ಬೆಂಬಲದ ವಿಶ್ವಾಸ:

ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಎನ್‌ಡಿಎ 3ನೇ 2ರಷ್ಟು ಬಹುಮತ ಪಡೆವ ವಿಶ್ವಾಸದಲ್ಲಿದೆ ಎಂದು ಹೇಳಲಾಗಿದೆ. ಬಿಜೆಪಿ ಮುಖಂಡರೊಬ್ಬರು ‘3ನೇ 2ರಷ್ಟು ಬಹುಮತಕ್ಕೆ ಲೋಕಸಭೆಯಲ್ಲಿ 360 ಸೀಟು ಬೇಕು. ಆದರೆ 371 ಸಂಸದರ ಬೆಂಬಲ ನಮಗಿದೆ’ ಎಂದಿದ್ದಾರೆ.

371ರ ಲೆಕ್ಕಾಚಾರ ಹೇಗೆ?:

ಇತ್ತೀಚೆಗೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಅಕಾಲಿ ದಳದ ಹರ್ಸಿಮ್ರತ್ ಕೌರ್ ಬಾದಲ್ ಸೇರಿದಂತೆ ಎನ್‌ಡಿಎ 299 ಸಂಸದರನ್ನು ಹೊಂದಿದೆ. ಅದರಲ್ಲಿ ಬಿಜೆಪಿ 240 ಸಂಸದರನ್ನು ಹೊಂದಿದ್ದರೆ, ತೆಲುಗು ದೇಶಂ ಪಕ್ಷ 16, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 13 ಮತ್ತು ಜೆಡಿಯು 12 ಸಂಸದರನ್ನು ಹೊಂದಿವೆ. ಕೆಲವು ಸಣ್ಣ ಪಕ್ಷಗಳೂ ಇವೆ.

ಮಸೂದೆ ಬೆಂಬಲಿಸಿರುವ ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣವಾದ ಎನ್‌ಸಿಪಿಐ 20 ಸಂಸದರನ್ನು ಹೊಂದಿದೆ. ಪ್ರತಿಪಕ್ಷಗಳಾದ ಡಿಎಂಕೆ (22), ಎನ್‌ಸಿಪಿ-ಎಸ್‌ಪಿ (8), ಮತ್ತು ವೈಎಸ್‌ಆರ್‌ಸಿಪಿ (4) ಬೆಂಬಲದೊಂದಿಗೆ, ಮಸೂದೆಯನ್ನು ಬೆಂಬಲಿಸುವ ಸಂಸದರ ಸಂಖ್ಯೆ 353ಕ್ಕೆ ಏರುತ್ತದೆ. ಜೆಎಂಎಂ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ತಲಾ 3 ಸ್ಥಾನ ಹೊಂದಿದೆ. ಜೆಎಂಎಂ ಮಸೂದೆಗೆ ಬೆಂಬಲಿಸುವ ಇರಾದೆ ಹೊಂದಿದೆ ಎನ್ನಲಾಗಿದೆ. ಹೀಗಾದರೆ ಬಲ 356ಕ್ಕೇರಲಿದೆ. 7 ಸ್ವತಂತ್ರ ಸಂಸದರೂ ಇದ್ದಾರೆ. ಅವರು ಬಿಜೆಪಿ ಬೆಂಬಲಿಗರು ಎನ್ನಲಾಗಿದೆ. ಹೀಗಾದರೆ ಬಲ 363ಕ್ಕೇರಲಿದೆ. ಇನ್ನು ಬಿಜೆಪಿ ಹೇಳುವಂತೆ 371ರ ಸಂಖ್ಯೆ ತಲುಪಬೇಕಾದರೆ ಉಳಿದ 8 ಸಂಸದರಾರು ಎಂಬ ಮಾಹಿತಿ ಲಭ್ಯವಿಲ್ಲ.--

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಎನ್‌ಡಿಎ ವಿರುದ್ಧ ವಿಪಕ್ಷಗಳಿಗೆ ಹಿನ್ನಡೆ
ಕಡುವಿರೋಧಿ ಡಿಎಂಕೆ, ಎನ್‌ಸಿಪಿಗೆ ಗಾಳ