ಎಲ್‌ಎಲ್‌ಆರ್‌, ಡಿಎಲ್‌ ಲೈಸೆನ್ಸ್‌ ಅವಧಿ ಫೆ.29ರವರೆಗೆ ವಿಸ್ತರಣೆ

KannadaprabhaNewsNetwork |  
Published : Feb 21, 2024, 02:03 AM ISTUpdated : Feb 21, 2024, 08:56 AM IST
DLR

ಸಾರಾಂಶ

ಸಾರಥಿ ಪೋರ್ಟಲ್‌ನಲ್ಲಿ ಸಮಸ್ಯೆಯಾದ ಕಾರಣ ಡಿಎಲ್‌ ವಿಸ್ತರಣೆ ಆಗುತ್ತಿಲ್ಲ. ಹೀಗಾಗಿ ಅವಧಿ ಮುಗಿದ ಡಿಎಲ್‌ ಮಾಸಾಂತ್ಯದವರೆಗೆ ವಿಸ್ತರಣೆ ಮಾಡಿ ಸಾರಿಗೆ ಸಚಿವಾಲಯ ಆದೇಶಿಸಿದೆ.

ನವದೆಹಲಿ: ಸಾರಥಿ ಪೋರ್ಟಲ್‌ನಲ್ಲಿ ಮೂಲಸೌಕರ್ಯ ಸಂಬಂಧಿತ ಸಮಸ್ಯೆ ತಲೆದೋರಿರುವ ಕಾರಣ ವಾಹನ ಕಲಿಕಾ ಪರವಾನಗಿ, ಚಾಲನಾ ಪರವಾನಗಿ ಮತ್ತು ಕಂಡಕ್ಟರ್ ಪರವಾನಗಿಯ ಮಾನ್ಯತೆಯನ್ನು 2024ರ ಫೆ.29ರವರೆಗೆ ವಿಸ್ತರಿಸಿ ಕೇಂದ್ರ ರಸ್ತೆ ಸಚಿವಾಲಯ ಮಂಗಳವಾರ ಆದೇಶ ಹೊರಡಿಸಿದೆ.

ಜ.31, 2024 ರಿಂದ ಫೆಬ್ರವರಿ 12ರವರೆಗೆ ಸಾರಥಿ ಪೋರ್ಟಲ್‌ನಲ್ಲಿ ಮೂಲಸೌಕರ್ಯ ಸಂಬಂಧಿತ ಸಮಸ್ಯೆಗಳಿಂದಾಗಿ, ಅರ್ಜಿದಾರರು ಪರವಾನಗಿ ಸಂಬಂಧಿತ ಸೇವೆಗಳನ್ನು ಪಡೆಯುವಲ್ಲಿ ಅಡೆತಡೆ ಎದುರಿಸಿದ್ದಾರೆ. 

ಹೀಗಾಗಿ ಜ.31, 2024 ಮತ್ತು ಫೆ.15, 2024 ರ ನಡುವೆ ಮುಕ್ತಾಯಗೊಂಡ ಕಲಿಕಾ ಪರವಾನಗಿ, ಚಾಲನಾ ಪರವಾನಗಿ ಮತ್ತು ಕಂಡಕ್ಟರ್ ಪರವಾನಗಿಯ ಸಿಂಧುತ್ವವನ್ನು ಫೆ. 29, 2024 ರವರೆಗೆ ಯಾವುದೇ ದಂಡ ವಿಧಿಸದೆ ಮಾನ್ಯವೆಂದು ಪರಿಗಣಿಸಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸುತ್ತೋಲೆಯಲ್ಲಿ ತಿಳಿಸಿದೆ. 

ಆನ್‌ಲೈನ್‌ ಸೇವೆಗಳ ಭಾಗಶಃ ಸ್ಥಗಿತ / ನಿಷ್ಕ್ರಿಯತೆಯಿಂದಾಗಿ, ಅರ್ಜಿದಾರರು ಶುಲ್ಕ ಪಾವತಿ, ಚಾಲನಾ ಪರವಾನಗಿ ನವೀಕರಣ, ಕಲಿಕಾ ಪರವಾನಗಿಗಾಗಿ ಸ್ಲಾಟ್ ಬುಕಿಂಗ್, ಚಾಲನಾ ಕೌಶಲ್ಯ ಪರೀಕ್ಷೆ ಮುಂತಾದ ಸೇವೆಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ಸಚಿವಾಲಯ ತಿಳಿಸಿದೆ.

PREV

Latest Stories

ನಿಮಿಷಪ್ರಿಯಾಗೆ ಕ್ಷಮಾದಾನ ಬೇಡ, ಗಲ್ಲಾಗಲಿ
ಅಕ್ಬರ್‌ ಕ್ರೂರ, ಆದರೆ ಸಹಿಷ್ಣು, ಬಾಬರ್‌ ನಿರ್ದಯಿ: ಕೇಂದ್ರೀಯ ಪಠ್ಯ
ದೇಶದಲ್ಲಿ 9 ಲಕ್ಷ ಮಕ್ಕಳು ಒಂದೂ ಲಸಿಕೆ ಪಡೆದಿಲ್ಲ: ವರದಿ