ವಾಹನಗಳಿಗೆ ನಿತ್ಯ ಗರಿಷ್ಠ200 ಲೀ. ಡೀಸೆಲ್‌ ಖರೀದಿ ಮಿತಿ : ಕೇಂದ್ರದ ಆದೇಶ

KannadaprabhaNewsNetwork |  
Published : Jun 13, 2026, 01:45 AM IST
Diesel

ಸಾರಾಂಶ

ಪ್ರತಿ ವಾಹನಕ್ಕೆ ಒಂದು ದಿನಕ್ಕೆ ಗರಿಷ್ಠ 200 ಲೀ ಡೀಸೆಲ್‌ ಖರೀದಿ ಮಿತಿ ಹೇರಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಸಂಸ್ಥೆಗಳು ಪೆಟ್ರೋಲ್‌ ಬಂಕ್‌ಗಳಲ್ಲಿ ಸಗಟು ಪ್ರಮಾಣದಲ್ಲಿ ಪೆಟ್ರೋಲ್‌, ಡೀಸೆಲ್‌ ಖರೀದಿ ಮಾಡುವಂತಿಲ್ಲ ಎಂದು ನಿರ್ಬಂಧ ಹೇರಿದೆ.

ನವದೆಹಲಿ: ಪ್ರತಿ ವಾಹನಕ್ಕೆ ಒಂದು ದಿನಕ್ಕೆ ಗರಿಷ್ಠ 200 ಲೀ ಡೀಸೆಲ್‌ ಖರೀದಿ ಮಿತಿ ಹೇರಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಸಂಸ್ಥೆಗಳು ಪೆಟ್ರೋಲ್‌ ಬಂಕ್‌ಗಳಲ್ಲಿ ಸಗಟು ಪ್ರಮಾಣದಲ್ಲಿ ಪೆಟ್ರೋಲ್‌, ಡೀಸೆಲ್‌ ಖರೀದಿ ಮಾಡುವಂತಿಲ್ಲ ಎಂದು ನಿರ್ಬಂಧ ಹೇರಿದೆ.

ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಪೂರೈಕೆಯ ಸರಣಿಯಲ್ಲಿ ವ್ಯತ್ಯಯ

ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಪೂರೈಕೆಯ ಸರಣಿಯಲ್ಲಿ ಉಂಟಾಗಿರುವ ವ್ಯತ್ಯಯವು ಸ್ಥಳೀಯವಾಗಿ ಕೊರತೆ ಸೃಷ್ಟಿಸದಂತೆ ತಡೆಯಲು ಈ ಕ್ರಮ ಕೈಗೊಂಡಿದ್ದಾಗಿ ಸರ್ಕಾರ ಹೇಳಿದೆ.

ಸಗಟಿನಲ್ಲಿ ತೆಗೆದುಕೊಂಡರೆ 134.50 ರು.

ಬಂಕ್‌ಗಳಲ್ಲಿ 95.20 ರು.ಗೆ ಸಿಗುವ ಡೀಸೆಲ್‌ ಅನ್ನು ಸಗಟಿನಲ್ಲಿ ತೆಗೆದುಕೊಂಡರೆ 134.50 ರು. ಪಾವತಿಸಬೇಕಾಗುವುದು. ಹೀಗಿರುವಾಗ ಸಗಟಿಗೆ ಹೆಚ್ಚು ಹಣ ಪಾವತಿಸುವುದನ್ನು ತಪ್ಪಿಸಲು ಕಾರ್ಖಾನೆಗಳು ಬಂಕ್‌ಗಳತ್ತ ಮುಖ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ಮಿತಿ ನಿಗದಿ ಮಾಡಲಾಗಿದೆ.

ಡೀಸೆಲ್‌ಗೆ ಸಾಮಾನ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಬೇಡಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಮುಂದಿನ 90 ದಿನಗಳವರೆಗೆ ಈ ನೀತಿ ಅನ್ವಯವಾಗುವಂತೆ ಆದೇಶಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಆರ್‌ಎಸ್‌ಎಸ್‌ ಮುಖ್ಯಸ್ಥ ಭಾಗ್ವತ್‌ ಸಂಚರಿಸುತ್ತಿದ್ದ ರೈಲಿನ ಮೇಲೆ ಕಲ್ಲೆಸೆತ
ಟಿಎಂಸಿಯಿಂದ ಮಮತಾ ಔಟ್‌?