ನವದೆಹಲಿ: ವಿಮಾನ ನಿಲ್ದಾಣ, ಅಣು ವಿದ್ಯುತ್ ಕೇಂದ್ರ ಸೇರಿದಂತೆ ಪ್ರಮುಖ ಪ್ರದೇಶಗಳ ಭದ್ರತೆ ನೋಡಿಕೊಳ್ಳುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಗೆ 2000 ಸಿಬ್ಬಂದಿಯನ್ನೊಳಗೊಂಡ 2 ಹೊಸ ಬೆಟಾಲಿಯನ್‌ಗಳನ್ನು ಸೃಷ್ಟಿಸಲು ಸರ್ಕಾರ ಅನುಮತಿ ನೀಡಿದೆ. ಇದರೊಂದಿಗೆ, ಸಿಐಎಸ್‌ಎಫ್ ಸಿಬ್ಬಂದಿಯ ಸಂಖ್ಯೆ 2 ಲಕ್ಷಕ್ಕೆ ಏರಿಕೆಯಾಗಲಿದೆ.
ಹೊಸ ಬೆಟಾಲಿಯನ್‌ಗಳಿಂದಾಗಿ ಪಡೆಯ ತುರ್ತಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯ ಹೆಚ್ಚಲಿದ್ದು, ಈಗಿರುವ ಸಿಬ್ಬಂದಿ ಮೇಲಿನ ಒತ್ತಡವನ್ನು ತಗ್ಗಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ 1,025 ಜನರ 12 ಬೆಟಾಲಿಯನ್‌ಗಳಿದ್ದು, ಇವು 68 ನಾಗರಿಕ ವಿಮಾನ ನಿಲ್ದಾಣಗಳು ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಭದ್ರತೆ ನೀಡುತ್ತಿವೆ.ಕಾಶ್ಮೀರದಲ್ಲಿ ನಿಗೂಢ ವ್ಯಾಧಿಗೆ 14 ಬಲಿರಜೌರಿ/ಜಮ್ಮು: ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಿಗೂಢ ವ್ಯಾಧಿಯೊಂದು ಕಾಣಿಸಿಕೊಂಡಿದ್ದು, 14 ಮಂದಿ ಬಲಿಯಾಗಿದ್ದಾರೆ. ಕಳೆದ 30 ದಿನಗಳಲ್ಲಿ ಕೋಟೇರಂಕಾ ಉಪವಿಭಾಗದ ಬದಾಲ್ ಗ್ರಾಮದಲ್ಲಿ ಮೂರು ಕುಟುಂಬಗಳಲ್ಲಿ 11 ಮಕ್ಕಳು ಮತ್ತು ಮೂವರು ಹಿರಿಯರು ಸೇರಿದಂತೆ 14 ಮಂದಿ ಸಾವನ್ನಪ್ಪಿದ್ದು, ಇದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಆರಂಭದಲ್ಲಿ ವಿಷಪ್ರಾಶನವಾಗಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಹೆಚ್ಚಿನವರಲ್ಲಿ ಇದೇ ರೀತಿ ರೋಗ ಲಕ್ಷಣ ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆ ಕಾರಣ ಪತ್ತೆಗೆ ತನಿಖೆ ನಡೆಸುತ್ತಿದೆ.