32403 ಕೋಟಿ ಜಿಎಸ್‌ಟಿ ನೋಟಿಸ್‌ನಿಂದ ಇನ್ಫಿ ಪಾರು

KannadaprabhaNewsNetwork |  
Published : Jun 08, 2025, 02:33 AM ISTUpdated : Jun 08, 2025, 04:26 AM IST
ಇನ್ಫೋಸಿಸ್‌ | Kannada Prabha

ಸಾರಾಂಶ

ದೇಶದ 2ನೇ ಅತಿದೊಡ್ಡ ಸಾಫ್ಟ್‌ವೇರ್‌ ಕಂಪನಿಯಾದ ಇನ್ಫೋಸಿಸ್‌ಗೆ ತೆರಿಗೆ ಇಲಾಖೆಯಿಂದ ನೆಮ್ಮದಿಯ ಸುದ್ದಿ ಹೊರಬಿದ್ದಿದೆ. ಕಂಪನಿಗೆ 32,403 ಕೋಟಿ ರು. ತೆರಿಗೆಗೆ ಸಂಬಂಧಿಸಿ ನೀಡಲಾಗಿದ್ದ ಪೂರ್ವ ಶೋಕಾಸ್‌ ನೋಟಿಸ್‌ ಅನ್ನು ಜಿಎಸ್‌ಟಿ ಗುಪ್ತಚರ ಮಹಾ ನಿರ್ದೇಶಕರು (ಡಿಜಿಜಿಐ) ಇದೀಗ ರದ್ದು ಮಾಡಿದ್ದಾರೆ.

 ನವದೆಹಲಿ : ದೇಶದ 2ನೇ ಅತಿದೊಡ್ಡ ಸಾಫ್ಟ್‌ವೇರ್‌ ಕಂಪನಿಯಾದ ಇನ್ಫೋಸಿಸ್‌ಗೆ ತೆರಿಗೆ ಇಲಾಖೆಯಿಂದ ನೆಮ್ಮದಿಯ ಸುದ್ದಿ ಹೊರಬಿದ್ದಿದೆ. ಕಂಪನಿಗೆ 32,403 ಕೋಟಿ ರು. ತೆರಿಗೆಗೆ ಸಂಬಂಧಿಸಿ ನೀಡಲಾಗಿದ್ದ ಪೂರ್ವ ಶೋಕಾಸ್‌ ನೋಟಿಸ್‌ ಅನ್ನು ಜಿಎಸ್‌ಟಿ ಗುಪ್ತಚರ ಮಹಾ ನಿರ್ದೇಶಕರು (ಡಿಜಿಜಿಐ) ಇದೀಗ ರದ್ದು ಮಾಡಿದ್ದಾರೆ.

ಇನ್ಫೋಸಿಸ್‌ಗೆ ಜುಲೈ 2024ರಲ್ಲಿ ಕರ್ನಾಟಕ ರಾಜ್ಯ ಜಿಎಸ್‌ಟಿ ಪ್ರಾಧಿಕಾರ ಮತ್ತು ಡಿಜಿಜಿಐನಿಂದ 32,403 ಕೋಟಿ ರು. ಜಿಎಸ್‌ಟಿ ಬಾಕಿಗೆ ಸಂಬಂಧಿಸಿ ಪೂರ್ವ ಶೋಕಾಸ್‌ ನೋಟಿಸ್‌ ನೀಡಲಾಗಿತ್ತು. ಜುಲೈ 2017ರಿಂದ ಮಾರ್ಚ್‌ 2022ರ ನಡುವೆ ಸಂಸ್ಥೆಯ ವಿದೇಶಿ ಶಾಖೆಗಳಿಂದ ಕಂಪನಿಗೆ ನೀಡಲಾದ ಸೇವೆಗಳಿಗೆ ಸಂಬಂಧಿಸಿದಂತೆ ಜಿಎಸ್‌ಟಿ ಪಾವತಿಸುವಂತೆ ಸೂಚಿಸಲಾಗಿತ್ತು.

ಈ ಕುರಿತು ವಿವರವಾದ ವಿವರಣೆ ನೀಡಿದ್ದ ಕಂಪನಿಯು, ‘ನಿಯಮಾನುಸಾರ ವಿದೇಶಿ ಶಾಖೆಗಳಿಂದ ಭಾರತದ ಕಂಪನಿಗೆ ನೀಡಲಾದ ಸೇವೆಗಳು ಜಿಎಸ್‌ಟಿ ವ್ಯಾಪ್ತಿಗೆ ಬರುವುದಿಲ್ಲ’ ಎಂದು ವಾದಿಸಿತ್ತು. ಕಂಪನಿಯ ವಿವರವಾದ ವಿವರಣೆ ಬಳಿಕ ಡಿಜಿಜಿಐ ಪೂರ್ವ ಶೋಕಾಸ್‌ ನೋಟಿಸ್‌ ಅನ್ನು ರದ್ದು ಮಾಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇರಾನ್‌ನಲ್ಲೀಗ ಸರ್ಕಾರದ ಬೆಂಬಲಿಗರ ಬಲಪ್ರದರ್ಶನ!
ಒಂದೇ ದಿನ 2 ಬಾರಿ ಪ್ರಜ್ಞೆ ತಪ್ಪಿದ ಧನಕರ್‌ : ದಿಲ್ಲಿ ಏಮ್ಸ್‌ಗೆ ದಾಖಲು