2.37 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ : ಹೊಸ ದಾಖಲೆ ನಿರ್ಮಾಣ

KannadaprabhaNewsNetwork |  
Published : May 02, 2025, 12:15 AM ISTUpdated : May 02, 2025, 04:14 AM IST
ಜಿಎಸ್‌ಟಿ | Kannada Prabha

ಸಾರಾಂಶ

ಸೇವಾ ಮತ್ತು ಸರಕು ತೆರಿಗೆ (ಜಿಎಸ್ಟಿ) ಸಂಗ್ರಹದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಏಪ್ರಿಲ್‌ ತಿಂಗಳಿನಲ್ಲಿ ಭರ್ಜರಿ 2.37 ಲಕ್ಷ ಕೋಟಿ ರು. ಜಿಎಸ್ಟಿ ಸಂಗ್ರಹ

 ನವದೆಹಲಿ: ಸೇವಾ ಮತ್ತು ಸರಕು ತೆರಿಗೆ (ಜಿಎಸ್ಟಿ) ಸಂಗ್ರಹದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಏಪ್ರಿಲ್‌ ತಿಂಗಳಿನಲ್ಲಿ ಭರ್ಜರಿ 2.37 ಲಕ್ಷ ಕೋಟಿ ರು. ಜಿಎಸ್ಟಿ ಸಂಗ್ರಹವಾಗಿದ್ದು ಇದು 2017ರಲ್ಲಿ ಜಿಎಸ್ಟಿ ನಿಯಮ ಜಾರಿ ಬಂದ ಬಳಿಕದ ಅತ್ಯಂತ ಗರಿಷ್ಠ ಪ್ರಮಾಣವಾಗಿದೆ. 2024ರ ಏಪ್ರಿಲ್‌ನಲ್ಲಿ ಸಂಗ್ರಹವಾಗಿದ್ದ 2.10 ಲಕ್ಷ ಕೋಟಿ ರು. ಇದುವರೆಗಿನ ಗರಿಷ್ಠವಾಗಿತ್ತು.

ಇನ್ನು 41645 ಕೋಟಿ ರು. ಜಿಎಸ್ಟಿ ಸಂಗ್ರಹದೊಂದಿಗೆ ಮಹಾರಾಷ್ಟ್ರ ಮೊದಲ ಸ್ಥಾನ, 17815 ಕೋಟಿ ರು.ನೊಂದಿಗೆ ಕರ್ನಾಟಕ 2ನೇ ಸ್ಥಾನ ಮತ್ತು 14970 ಕೋಟಿ ರು.ನೊಂದಿಗೆ ಗುಜರಾತ್‌ 3ನೇ ಸ್ಥಾನ ಪಡೆದುಕೊಂಡಿದೆ.

ಕೇಂದ್ರ ಸರ್ಕಾರ ಗುರುವಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಅನ್ವಯ ಏಪ್ರಿಲ್‌ ತಿಂಗಳಲ್ಲಿ 2.37 ಲಕ್ಷ ಕೋಟಿ ರು. ಜಿಎಸ್ಟಿ ಸಂಗ್ರಹವಾಗಿದೆ. ಇದು ಕಳೆದ ವರ್ಷದ ಇದೇ ಅವಧಿಗಿಂತ ಶೇ.12.6ರಷ್ಟು ಹೆಚ್ಚಳವಾಗಿದೆ. 2025ರ ಮಾರ್ಚ್‌ನಲ್ಲಿ ಜಿಎಸ್ಟಿ ಸಂಗ್ರಹ ಪ್ರಮಾಣ 1.96 ಲಕ್ಷ ಕೋಟಿ ರು.ನಷ್ಟಿತ್ತು. ಇನ್ನು ಒಟ್ಟು ಜಿಎಸ್ಟಿ ಸಂಗ್ರಹದಲ್ಲಿ 27341 ಕೋಟಿ ರು. ರೀಫಂಡ್‌ ಬಳಿಕ ಸರ್ಕಾರದ ಬೊಕ್ಕಸಕ್ಕೆ 2.09 ಲಕ್ಷ ಕೋಟಿ ರು.ಜಿಎಸ್ಟಿ ಉಳಿಯಲಿದೆ.

ಒಟ್ಟು ತೆರಿಗೆ ಸಂಗ್ರಹದಲ್ಲಿ ಕೇಂದ್ರ ಜಿಎಸ್ಟಿ ಪಾಲು 48634 ಕೋಟಿ ರು., ರಾಜ್ಯ ಜಿಎಸ್ಟಿ 59372 ಕೋಟಿ ರು., ಸಂಯೋಜಿತ ಜಿಎಸ್ಟಿಯಡಿ 69504 ಕೋಟಿ ರು. ಮತ್ತು ಸೆಸ್‌ ಮೂಲಕ 12293 ಕೋಟಿ ರು.ಸಂಗ್ರಹವಾಗಿದೆ.

8 ವರ್ಷಗಳ ಗರಿಷ್ಠ । ಸಾರ್ವಕಾಲಿಕ ದಾಖಲೆ

₹17815 ಕೋಟಿಯೊಂದಿಗೆ ಕರ್ನಾಟಕ ನಂ.2

ಟಾಪ್‌ 3 ಜಿಎಸ್ಟಿ ಸಂಗ್ರಹದ ರಾಜ್ಯಗಳು

ಮಹಾರಾಷ್ಟ್ರ₹41645 ಕೋಟಿ

ಕರ್ನಾಟಕ17815 ಕೋಟಿ

ಗುಜರಾತ್‌14970 ಕೋಟಿ

ಟಾಪ್‌ 3 ಅತ್ಯಧಿಕ ಜಿಎಸ್ಟಿ ಸಂಗ್ರಹ

2025 ಏಪ್ರಿಲ್‌ ₹2.37 ಲಕ್ಷ ಕೋಟಿ

2024 ಏಪ್ರಿಲ್‌ ₹2.10 ಲಕ್ಷ ಕೋಟಿ

2024 ಮಾರ್ಚ್‌ ₹1.96 ಲಕ್ಷ ಕೋಟಿ

PREV

Recommended Stories

ಟ್ರಿಪಲ್‌ ಏರ್‌ಡಿಫೆನ್ಸ್‌ ಪರೀಕ್ಷೆ ಯಶಸ್ವಿ
ಗಗನಯಾನದ ಏರ್‌ಡ್ರಾಪ್‌ ಪರೀಕ್ಷೆ ಯಶಸ್ವಿ - ಸಿಬ್ಬಂದಿಯ ಸುರಕ್ಷಿತ ಮರಳುವಿಕೆಗೆ ಇದು ಅಗತ್ಯ