ಮಗಳ ಮೇಲೆ ತಂದೆಯೇ ರೇಪ್‌,ತಾಯಿಯಿಂದ ವಿಡಿಯೂ ಶೂಟ್‌!

KannadaprabhaNewsNetwork |  
Published : Oct 06, 2026, 02:45 AM IST
ರೇಪ್ | Kannada Prabha

ಸಾರಾಂಶ

14 ವರ್ಷದ ಮಗಳು ಗೆಳೆಯನೊಂದಿಗೆ ಮಾತನಾಡುತ್ತಿದ್ದಳು ಎಂಬ ಕಾರಣಕ್ಕೆ ತಂದೆಯೇ ಆಕೆಯ ಮೇಲೆ ಅತ್ಯಾಚಾರ ನಡೆಸಿದ ಹಾಗೂ ಹೆತ್ತ ತಾಯಿ ಅದನ್ನು ಚಿತ್ರೀಕರಿಸಿದ ಘಟನೆ ಗುಜರಾತ್‌ನ ಕಛ್‌ ಜಿಲ್ಲೆಯ ಅಂಜರ್‌ ಎಂಬಲ್ಲಿ ನಡೆದಿದೆ. ಬಾಲಕಿ ನೀಡಿದ ದೂರಿನ ಆಧಾರದಲ್ಲಿ ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- ಗೆಳೆಯನೊಂದಿಗೆ ಮಾತಾಡಿದ್ದಕ್ಕೆ ಪೋಷಕರ ಶಿಕ್ಷೆ

ಕಛ್‌: 14 ವರ್ಷದ ಮಗಳು ಗೆಳೆಯನೊಂದಿಗೆ ಮಾತನಾಡುತ್ತಿದ್ದಳು ಎಂಬ ಕಾರಣಕ್ಕೆ ತಂದೆಯೇ ಆಕೆಯ ಮೇಲೆ ಅತ್ಯಾಚಾರ ನಡೆಸಿದ ಹಾಗೂ ಹೆತ್ತ ತಾಯಿ ಅದನ್ನು ಚಿತ್ರೀಕರಿಸಿದ ಘಟನೆ ಗುಜರಾತ್‌ನ ಕಛ್‌ ಜಿಲ್ಲೆಯ ಅಂಜರ್‌ ಎಂಬಲ್ಲಿ ನಡೆದಿದೆ. ಬಾಲಕಿ ನೀಡಿದ ದೂರಿನ ಆಧಾರದಲ್ಲಿ ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಗಿದ್ದೇನು?:

ಬಾಲಕಿ ನೀಡಿರುವ ದೂರಿನ ಪ್ರಕಾರ, ಸೆ.14ರಂದು ಆಕೆ ಫೋನ್‌ನಲ್ಲಿ ಆಗ್ರಾದ ಗೆಳೆಯನೊಂದಿಗೆ ಮಾತನಾಡುತ್ತಿದ್ದುದನ್ನು ಗಮನಿಸಿದ ತಾಯಿ ಅದನ್ನು ಪ್ರಶ್ನಿಸಿದ್ದಳು ಹಾಗೂ ಬಳಿಕ ತಂದೆಗೆ ತಿಳಿಸಿದ್ದಳು. ಇದರಿಂದ ಕೋಪಗೊಂಡ ತಂದೆ, ಮಗಳನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ ಅನ್ನ, ನೀರು ಕೊಡದೆ ಹಿಂಸಿಸಿದ್ದ. ಬಳಿಕ ತಾಯಿಯ ಉಪಸ್ಥಿತಿಯಲ್ಲೇ ಹಲವು ದಿನ ಲೈಂಗಿಕವಾಗಿ ಶೋಷಿಸಿದ್ದ. ಸೆ.29ರಂದು ಬಾಲಕಿ ತನ್ನ ಚಿಕ್ಕಮ್ಮನ ಮನೆಗೆ ಹೋಗಿ 112ಗೆ ಕರೆ ಮಾಡಲು ಯತ್ನಿಸಿದಾಗ ಬೆನ್ನಟ್ಟಿ ಬಂದ ಪೋಷಕರು ಮತ್ತೆ ಆಕೆಯನ್ನು ಕೂಡಿಹಾಕಿದ್ದಾರೆ. ಅ.1ರಂದು ತಂದೆ ಶೋಷಿಸತೊಡಗಿದಾಗ ತಾಯಿ ಅದನ್ನು ಚಿತ್ರೀಕರಿಸಿಕೊಂಡಿದ್ದಾಳೆ. ಆ ದಿನ ಮತ್ತೆ ಚಿಕ್ಕಮ್ಮನ ಮನೆಗೆ ಹೋದ ಬಾಲಕಿ, ಆಕೆಯೆದುರು ಎಲ್ಲವನ್ನೂ ಹೇಳಿದ್ದಾಳೆ. ಚಿಕ್ಕಮ್ಮ ಕೂಡಲೇ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಸದ್ಯ ಪೋಷಕರನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಯುತ್ತಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅಮೆರಿಕಕ್ಕೆ ಹೊರಟಿದ್ದಬ್ರಿಟನ್‌ ವಿಮಾನ ದಿಢೀರ್‌23000 ಅಡಿ ಕುಸಿದು ಆತಂಕ
ರಷ್ಯಾ ಸಂಶೋಧಕಿ ಸಾವು: ಪ್ಲೇಗ್‌ ಆತಂಕ