ಸಮಸ್ತ ಟಾಟಾ ಸಮೂಹವನ್ನು ನಿರ್ವಹಿಸುವ ಟಾಟಾ ಟ್ರಸ್ಟ್‌ನ ನೂತನ ಅಧ್ಯಕ್ಷರನ್ನಾಗಿ ನೊಯೆಲ್‌ ಟಾಟಾ

KannadaprabhaNewsNetwork |  
Published : Oct 13, 2024, 01:08 AM ISTUpdated : Oct 13, 2024, 04:25 AM IST
ನೊಯೆಲ್‌ ಟಾಟಾ | Kannada Prabha

ಸಾರಾಂಶ

 ಸಮಸ್ತ ಟಾಟಾ ಸಮೂಹವನ್ನು ನಿರ್ವಹಿಸುವ ಟಾಟಾ ಟ್ರಸ್ಟ್‌ನ ನೂತನ ಅಧ್ಯಕ್ಷರನ್ನಾಗಿ ನೊಯೆಲ್‌ ಟಾಟಾ (67) ಅವರನ್ನು ಆಯ್ಕೆ ಮಾಡಲಾಗಿದೆ.

ಮುಂಬೈ: ಸಮಸ್ತ ಟಾಟಾ ಸಮೂಹವನ್ನು ನಿರ್ವಹಿಸುವ ಟಾಟಾ ಟ್ರಸ್ಟ್‌ನ ನೂತನ ಅಧ್ಯಕ್ಷರನ್ನಾಗಿ ನೊಯೆಲ್‌ ಟಾಟಾ (67) ಅವರನ್ನು ಆಯ್ಕೆ ಮಾಡಲಾಗಿದೆ.

ಇದುವರೆಗೂ ಈ ಸ್ಥಾನದಲ್ಲಿದ್ದ ರತನ್‌ ಟಾಟಾ ಅವರ ನಿಧನದ ಹಿನ್ನೆಲೆಯಲ್ಲಿ ಸಭೆ ಸೇರಿದ್ದ ಟಾಟಾ ಟ್ರಸ್ಟ್‌ನ ಆಡಳಿತ ಮಂಡಳಿ, ರತನ್‌ ಅವರ ಮಲಸೋದರ ನೊಯೆಲ್‌ ಅವರನ್ನು ನೂತನ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ನೊಯೆಲ್ ಟಾಟಾ, ‘ರತನ್‌ ಟಾಟಾ ಮತ್ತು ಟಾಟಾ ಗ್ರೂಪ್‌ನ ಸಂಸ್ಥಾಪಕರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ನಾನು ಬಯಸುತ್ತೇನೆ. ಶತಮಾನಗಳ ಹಿಂದೆ ಸ್ಥಾಪಿಸಿದ ಟಾಟಾ ಟ್ರಸ್ಟ್‌ ಸಮಾಜ ಕಲ್ಯಾಣದ ಒಂದು ಸಾಧನ. ಈ ಗಂಭೀರ ಸನ್ನಿವೇಶದಲ್ಲಿ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ನಮ್ಮ ಅಭಿವೃದ್ಧಿ ಮತ್ತು ದಾನದ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡುವ ವಚನವನ್ನು ನಾವು ಪುನರುಚ್ಚರಿಸುತ್ತೇವೆ’ ಎಂದು ಹೇಳಿದ್ದಾರೆ.

ನೊಯೆಲ್‌ ಟಾಟಾ 1999ರಿಂದಲೂ ಟಾಟಾ ಗ್ರೂಪ್‌ನಲ್ಲಿ ಸಕ್ರಿಯಾಗಿದ್ದು, ರತನ್‌ ಟಾಟಾ ಜೊತೆಗೆ ತೆರೆಮರೆಯಲ್ಲೇ ಕಾರ್ಯನಿರ್ವಹಿಸುತ್ತಿದ್ದರು. ರತನ್‌ ಟಾಟಾರ ತಂದೆಯ ಮೊದಲ ಪತ್ನಿಯ ಮಗ ರತನ್‌ ಟಾಟಾ ಆಗಿದ್ದರೆ, ಎರಡನೇ ಪತ್ನಿಯ ಪುತ್ರ ನೊಯೆಲ್‌ ಟಾಟಾ.

ಟಾಟಾ ಸಮೂಹದ ಮಾತೃ ಸಂಸ್ಥೆ:

14 ಲಕ್ಷ ಕೋಟಿ ರು. ಆಸ್ತಿ ಹೊಂದಿರುವ ಟಾಟಾ ಸಮೂಹದ ಮಾತೃ ಸಂಸ್ಥೆಯಾಗಿ ಟಾಟಾ ಸನ್ಸ್‌ ಕಾರ್ಯನಿರ್ವಹಿಸುತ್ತಿದೆ. ಟಾಟಾ ಟ್ರಸ್ಟ್‌ ದಾನ ಧರ್ಮದಲ್ಲಿ ತೊಡಗಿಸಿಕೊಂಡಿರುವ ವಿಭಾಗವಾಗಿದ್ದು, ಟಾಟಾ ಸನ್ಸ್‌ನಲ್ಲಿ ಶೇ.66ರಷ್ಟು ಷೇರುಪಾಲು ಹೊಂದಿದೆ. ಈ ಷೇರಿಗೆ ಬರುವ ಡಿವಿಡೆಂಡ್‌ ಮತ್ತು ಇತರೆ ಲಾಭವನ್ನು ಟಾಟಾ ಟ್ರಸ್ಟ್‌ ಆರೋಗ್ಯ, ವೈದ್ಯಕೀಯ, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸುತ್ತಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಷ್ಯಾದ ಯಾಕುಟಿಯಾದಲ್ಲಿ- 56 ಡಿ.ಸೆ. ತಾಪ ದಾಖಲು
ಹಾರುವ ಮೊದಲೇ ಕೇರಳದ ವಿಮಾನ ಸಂಸ್ಥೆ ಸಂಕಷ್ಟದಲ್ಲಿ