ಕಾವಡ ಯಾತ್ರೆ : ಹರಿದ್ವಾರದಲ್ಲಿ ಮೂತ್ರ ಬಾಟಲಿ, 7000 ಟನ್‌ ಕಸದ ರಾಶಿ!

KannadaprabhaNewsNetwork |  
Published : Aug 13, 2026, 04:15 AM IST
Haridwar

ಸಾರಾಂಶ

ಶ್ರಾವಣ ಮಾಸದ ನಿಮಿತ್ತ ಉತ್ತರಾಖಂಡದ ಪವಿತ್ರ ಕ್ಷೇತ್ರ ಹರಿದ್ವಾರದಲ್ಲಿ ನಡೆದ ಕಾವಡ ಯಾತ್ರೆ ಬಳಿಕ ಮೂತ್ರದ ಬಾಟಲುಗಳ ರಾಶಿ ಮತ್ತು 7000 ಟನ್‌ ಕಸ ಸಂಗ್ರಹವಾಗಿದೆ.ಈ ವರ್ಷ ಸರಿಸುಮಾರು 4.8 ಕೋಟಿ ಕಾವಡ ಯಾತ್ರಿಕರು ಗಂಗಾ ನದಿ ನೀರನ್ನು ಸಂಗ್ರಹಿಸಿದ್ದಾರೆ.

ಹರಿದ್ವಾರ: ಶ್ರಾವಣ ಮಾಸದ ನಿಮಿತ್ತ ಉತ್ತರಾಖಂಡದ ಪವಿತ್ರ ಕ್ಷೇತ್ರ ಹರಿದ್ವಾರದಲ್ಲಿ ನಡೆದ ಕಾವಡ ಯಾತ್ರೆ ಬಳಿಕ ಮೂತ್ರದ ಬಾಟಲುಗಳ ರಾಶಿ ಮತ್ತು 7000 ಟನ್‌ ಕಸ ಸಂಗ್ರಹವಾಗಿದೆ.

4.8 ಕೋಟಿ ಕಾವಡ ಯಾತ್ರಿಕರು ಗಂಗಾ ನದಿ ನೀರನ್ನು ಸಂಗ್ರಹಿಸಿದ್ದಾರೆ

ಈ ವರ್ಷ ಸರಿಸುಮಾರು 4.8 ಕೋಟಿ ಕಾವಡ ಯಾತ್ರಿಕರು ಗಂಗಾ ನದಿ ನೀರನ್ನು ಸಂಗ್ರಹಿಸಿದ್ದಾರೆ. ಆದರೆ ಈ ವೇಳೆ ಅಪಾರ ಪ್ರಮಾಣದ ತ್ಯಾಜ್ಯಗಳು ಘಾಟ್‌, ಮೇಳಗಳ ಮೈದಾನಗಳು, ಪಾರ್ಕಿಂಗ್‌ ಪ್ರದೇಶ ಸ್ಥಳಗಳಲ್ಲಿ ಹಾಗೆಯೇ ಉಳಿದುಕೊಂಡಿವೆ.

ಪ್ಲಾಸ್ಟಿಕ್‌ ತಟ್ಟೆಗಳು, ಬಳಸಿ ಎಸೆದ ಬಟ್ಟೆಗಳು, ಮೂತ್ರ ಮಾಡಿ ಬಿಸಾಕಿದ ಬಾಟಲಿ

ಪ್ಲಾಸ್ಟಿಕ್‌ ತಟ್ಟೆಗಳು, ಬಳಸಿ ಎಸೆದ ಬಟ್ಟೆಗಳು, ಮೂತ್ರ ಮಾಡಿ ಬಿಸಾಕಿದ ಬಾಟಲಿ, ಇನ್ನಿತರ ವಸ್ತುಗಳು ಸೇರಿದಂತೆ ಪುರಸಭೆಯ ನೈರ್ಮಲ್ಯ ಸಿಬ್ಬಂದಿ 7000 ಟನ್‌ ಕಸವನ್ನು ಸಂಗ್ರಹಿಸಿದ್ದಾರೆ. ಇದರ ಜತೆಗೆ ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ಮೂತ್ರದ ಬಾಟಲಿಗಳು ಪತ್ತೆಯಾಗಿದ್ದು, ಯಾತ್ರಿಕರು ಸ್ಚಚ್ಛತೆ ಕಾಯ್ದುಕೊಳ್ಳದರ ಬಗ್ಗೆ ಚರ್ಚೆ ಶುರುವಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಜೆನ್‌ಝೀ ವಿರುದ್ಧ ಹಿಂಸೆ: ರಾಹುಲ್‌ ವರ್ಸಸ್ ಅಮಿತ್‌ ಶಾ
ಜೈಲಲ್ಲೇ ಇಮ್ರಾನ್‌ ಸಾವು ಎಂದ ಪತ್ರಕರ್ತ: ಪಾಕ್‌ನಲ್ಲಿ ಸಂಚಲನ