ಹರ್ಯಾಣ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಉಚಿತ ಕೊಡುಗೆಗಳ ಸುರಿಮಳೆ

KannadaprabhaNewsNetwork |  
Published : Sep 19, 2024, 01:52 AM ISTUpdated : Sep 19, 2024, 05:02 AM IST
ಕಾಂಗ್ರೆಸ್‌ | Kannada Prabha

ಸಾರಾಂಶ

ಕರ್ನಾಟಕ ಮತ್ತು ತೆಲಂಗಾಣದ ಮಾದರಿಯಲ್ಲಿ ಹರ್ಯಾಣದಲ್ಲೂ ಉಚಿತ ಕೊಡುಗೆಗಳನ್ನು ಘೋಷಿಸಿರುವ ಕಾಂಗ್ರೆಸ್, ಬಡವರಿಗೆ ಉಚಿತ ನಿವೇಶನ, ಮನೆ ನಿರ್ಮಾಣ, ಮಹಿಳೆಯರಿಗೆ ಮಾಸಿಕ 2000 ರೂ. ನೆರವು ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ.

ನವದೆಹಲಿ: ಕರ್ನಾಟಕ ಮತ್ತು ತೆಲಂಗಾಣದಲ್ಲಿ ಭರ್ಜರಿಯಾಗಿ ಫಲ ಕೊಟ್ಟಿರುವ ಉಚಿತ ಕೊಡುಗೆಗಳ ಸರಣಿಯನ್ನು ಮುಂಬರುವ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲೂ ಮುಂದುವರೆಸಲು ಕಾಂಗ್ರೆಸ್‌ ನಿರ್ಧರಿಸಿದೆ. ಈ ಸಂಬಂಧ ಹಲವು ಉಚಿತ ಕೊಡುಗೆಗಳನ್ನು ಒಳಗೊಂಡ ಚುನಾವಣಾ ಪ್ರಣಾಳಿಕೆಯನ್ನು ಪಕ್ಷ ಬುಧವಾರ ಬಿಡುಗಡೆ ಮಾಡಿದೆ.

ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ 7 ಪ್ರಮುಖ ಗ್ಯಾರಂಟಿಗಳನ್ನು ಪ್ರಸ್ತಾಪಿಸಲಾಗಿದೆ. ಅದರಲ್ಲಿ ಬಡವರಿಗೆ ಉಚಿತ ಸೈಟ್‌, ಮನೆ ನಿರ್ಮಾಣ, ಜಾತಿ ಗಣತಿ, ಕರ್ನಾಟಕದ ಗೃಹ ಲಕ್ಷ್ಮೀ ಮಾದರಿ ಮಹಿಳೆಯರಿಗೆ ಮಾಸಿಕ 2000 ರು. ನೆರವಿನ ಅಂಶಗಳು ಸೇರಿವೆ.

ಏನೇನು ಕೊಡುಗೆ?:

ಬಡವರು: ಬಡವರಿಗೆ ಉಚಿತವಾಗಿ 900 ಚದರಡಿ ಜಾಗ, 2 ಕೊಠಡಿಯ 3.5 ಲಕ್ಷ ರು.ವೆಚ್ಚದ ಮನೆ ನಿರ್ಮಾಣ

ಕುಟುಂಬಕ್ಕೆ: ಮಾಸಿಕ 300 ಯುನಿಟ್‌ ಉಚಿತ ವಿದ್ಯುತ್‌, 25 ಲಕ್ಷ ರು.ವರೆಗೆ ಉಚಿತ ಆರೋಗ್ಯ ವಿಮೆ.

ಮಹಿಳಾ ಸಬಲೀಕರಣ: ಮಹಿಳೆಯರಿಗೆ ಮಾಸಿಕ 2000 ರು.; 500 ರು.ಗೆ ಎಲ್‌ಪಿಜಿ ಸಿಲಿಂಡರ್‌.

ಯುವಸಮೂಹ: 2 ಲಕ್ಷ ನೇಮಕಾತಿ; ಡ್ರಗ್‌ ಮುಕ್ತ ರಾಜ್ಯ ನಿರ್ಮಾಣ.

ಸಾಮಾಜಿಕ ಭದ್ರತೆ: ವೃದ್ದರಿಗೆ, ಅಂಗವಿಕಲರಿಗೆ, ವಿಧವೆಯರಿಗೆ ಮಾಸಿಕ 6000 ರು.ಪಿಂಚಣಿ. ಹಳೆ ಪಿಂಚಣಿ ಮರು ಜಾರಿ.

ಹಿಂದುಳಿದ ಸಮುದಾಯ: ಜಾತಿ ಗಣತಿ; ಮೀಸಲಿಗೆ ಇರುವ ಕೆನೆಪದರ ಮಿತಿ 10 ಲಕ್ಷರು.ಗೆ ಏರಿಕೆ

ರೈತರು: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ತಕ್ಷಣ ಬೆಳೆ ಪರಿಹಾರ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೊಜ್ತಬಾ ಪತ್ತೆಗಾಗಿ ಅಮೆರಿಕ,ಇಸ್ರೇಲ್‌ ಗುಪ್ತಚರ ಹುಡುಕಾಟ
ಟ್ರಂಪ್‌ ಬಳಿ ಇಲ್ಲ ಯುದ್ಧದ ಸೂಕ್ತ ಎಕ್ಸಿಟ್‌ ಪ್ಲ್ಯಾನ್‌!