ನಾನು ಸತ್ತರೂ ಹಿಂದುತ್ವ ಬಿಡಲ್ಲ, ಆದರೆ ಬಿಜೆಪಿ ಹಿಂದುತ್ವ ಒಪ್ಪಲ್ಲ : ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ

KannadaprabhaNewsNetwork | Updated : Apr 17 2025, 06:23 AM IST

ಸಾರಾಂಶ

‘ನಾನು ಹಿಂದುತ್ವ ಸಿದ್ಧಾಂತಕ್ಕೆ ಬೆನ್ನು ಹಾಕಿಲ್ಲ. ಬಿಜೆಪಿಯಿಂದ ದೂರವಿದ್ದೆನೇ ಹೊರತು ಹಿಂದುತ್ವದಿಂದಲ್ಲ. ನಾನು ಸತ್ತರೂ ಹಿಂದುತ್ವವನ್ನು ಬಿಡುವುದಿಲ್ಲ’ ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.

ನಾಸಿಕ್: ‘ನಾನು ಹಿಂದುತ್ವ ಸಿದ್ಧಾಂತಕ್ಕೆ ಬೆನ್ನು ಹಾಕಿಲ್ಲ. ಬಿಜೆಪಿಯಿಂದ ದೂರವಿದ್ದೆನೇ ಹೊರತು ಹಿಂದುತ್ವದಿಂದಲ್ಲ. ನಾನು ಸತ್ತರೂ ಹಿಂದುತ್ವವನ್ನು ಬಿಡುವುದಿಲ್ಲ’ ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಶಿವಸೇನೆ ಹಿಂದುತ್ವವನ್ನು ತ್ಯಜಿಸಿದೆ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಅವಿಭಜಿತ ಶಿವಸೇನೆ ಇಲ್ಲದೇ ಹೋಗಿದ್ದರೆ ಬಿಜೆಪಿ ಇವತ್ತು ಇರುವ ಸ್ಥಾನವನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲ. ಬಿಜೆಪಿಗೆ ನಿಜವಾಗಿಯೂ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಗೌರವವಿದ್ದರೆ, ಅವರ ಜಯಂತಿಯನ್ನು ದೇಶಾದ್ಯಂತ ಸರ್ಕಾರಿ ರಜೆಯನ್ನಾಗಿ ಘೋಷಿಸಲಿ’ ಎಂದರು.

ಔರಂಗಜೇಬನ ಸಮಾಧಿ ರಕ್ಷಿಸಿ: ವಿಶ್ವಸಂಸ್ಥೆಗೆ ಮೊಘಲ್‌ ವಂಶಸ್ಥ ಮೊರೆ

ಹೈದರಾಬಾದ್: ಮೊಘಲರ ಕೊನೆ ದೊರೆ ಬಹದ್ದೂರ್ ಶಾ ಜಾಫರ್ ಅವರ ವಂಶಸ್ಥರೆಂದು ಹೇಳಿಕೊಳ್ಳುವ ಯಾಕೂಬ್ ಹಬೀಬುದ್ದೀನ್ ಟೂಸಿ, ಮಹಾರಾಷ್ಟ್ರದ ಸಂಭಾಜಿ ನಗರದಲ್ಲಿರುವ ಔರಂಗಜೇಬನ ಸಮಾಧಿಯ ರಕ್ಷಣೆಯನ್ನು ಕೋರಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟಾನಿಯೋ ಗ್ಯುಟೆರ್ರೆಸ್‌ ಅವರಿಗೆ ಪತ್ರ ಬರೆದಿದ್ದಾರೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ (ಹಿಂದೆ ಔರಂಗಾಬಾದ್) ಕುಲದಾಬಾದ್‌ನಲ್ಲಿರುವ ಔರಂಗಜೇಬನ ಸಮಾಧಿ ವಿಚಾರವಾಗಿ ಮಾ.17ರಂದು ಹಿಂಸಾಚಾರ ಭುಗಿಲೆದ್ದ ಸುಮಾರು 1 ತಿಂಗಳ ನಂತರ ಈ ಬೇಡಿಕೆ ಸಲ್ಲಿಕೆಯಾಗಿದೆ. ಸಮಾಧಿಯನ್ನು ರಾಷ್ಟ್ರೀಯ ಮಹತ್ವದ ಸ್ಮಾರಕ ಎಂದು ಘೋಷಿಸಲಾಗಿದೆ. ಸದ್ಯ ಸಮಾಧಿ ದುಃಸ್ಥಿತಿಯಲ್ಲಿದೆ. ಅದನ್ನು ರಕ್ಷಿಸಬೇಕು’ ಎಂದು ಅವರು ಕೋರಿದ್ದಾರೆ.

ಮಹಾದೇವ್‌ ಆ್ಯಪ್‌ ಕೇಸ್‌: ಈಸ್‌ಮೈಟ್ರಿಪ್ ಸ್ಥಾಪಕ ಪಿಟ್ಟಿ ಮೇಲೆ ಇ.ಡಿ ದಾಳಿ

ನವದೆಹಲಿ: ಮಹಾದೇವ್‌ ಬೆಟ್ಟಿಂಗ್‌ ಆ್ಯಪ್‌ನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬುಧವಾರ ಬುಕಿಂಗ್‌ ಆ್ಯಪ್‍ ‘ಈಸ್ ಮೈ ಟ್ರಿಪ್‌’ನ ಸಹ ಸಂಸ್ಥಾಪಕ ನಿಶಾಂತ್‌ ಪಿಟ್ಟಿ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಬೆಟ್ಟಿಂಗ್‌ ಆ್ಯಪ್‌ನಿಂದ ಬಂದಂತಹ ಆದಾಯವನ್ನು ಈಸ್‌ಮೈಟ್ರಿಪ್‌ಗೂ ಬಳಸಲಾಗಿದೆ ಎಂಬ ಆರೋಪದ ಮೇರೆಗೆ ಇ.ಡಿ. ದಾಳಿ ನಡೆಸಿದೆ. ಇದರ ಜೊತೆಗೆ ದೆಹಲಿ ಸೇರಿದಂತೆ ದೇಶದ 8 ನಗರಗಳ 55 ಸ್ಥಳಗಳ ಮೇಲೆ ಇ.ಡಿ. ಹುಡುಕಾಟ ನಡೆಸಿದೆ. ಛತ್ತೀಸ್‌ಗಢ ಮಾಜಿ ಸಿಎಂ ಭೂಪೇಶ್‌ ಬಘೇಲ್ ಅವರು ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.

ಸೈಫ್‌ಗೆ ಇರಿತ: 20 ಬೆರಳಚ್ಚಲ್ಲಿ 1 ಮಾತ್ರ ಆರೋಪಿ ಜೊತೆ ತಾಳೆ

ಮುಂಬೈ: ನಟ ಸೈಫ್‌ ಅಲಿ ಖಾನ್ ಅವರಿಗೆ ಚಾಕು ಇರಿತ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದ್ದು, ಮುಂಬೈ ಪೊಲೀಸರು ಸಲ್ಲಿಸಿರುವ 1600 ಪುಟಗಳ ಚಾರ್ಜ್‌ಶೀಟ್‌ನಲ್ಲಿ ನಟನ ನಿವಾಸದಲ್ಲಿ ಸಂಗ್ರಹಿಸಲಾದ 20 ಬೆರಳಚ್ಚುಗಳಲ್ಲಿ ಕೇವಲ ಒಂದೇ ಒಂದು ಬೆರಳಚ್ಚು ಆರೋಪಿಗೆ ತಾಳೆಯಾಗುತ್ತದೆ ಎಂದು ಉಲ್ಲೇಖಿಸಿದ್ದಾರೆ. ಜ.16ರಂದು ನಟನ ಮನೆ ಮೇಲೆ ನಡೆದ ದಾಳಿ ಸಂಬಂಧ ಪೊಲೀಸರು ಶರೀಫುಲ್ ಇಸ್ಲಾಂ ಎಂಬಾತನನ್ನು ಬಂಧಿಸಿದ್ದರು. ದಾಳಿ ನಡೆದ ಬಳಿಕ ನಟನ ಮನೆಯಿಂದ ಪೊಲೀಸರು ಸ್ನಾನಗೃಹ, ಬೆಡ್‌ರೂಂ, ಕಪಾಟು, ಬಾಗಿಲು ಸೇರಿದಂತೆ 20 ಬೆರಳಚ್ಚುಗಳನ್ನು ಸಂಗ್ರಹಿಸಿದ್ದರು. ಆದರೆ ಈ ಪೈಕಿ 19 ಬೆರಳಚ್ಚುಗಳು ಆರೋಪಿ ಶರೀಫುಲ್ ಇಸ್ಲಾಂಗೆ ತಾಳೆಯಾಗುತ್ತಿಲ್ಲ. ಅಪಾರ್ಟ್‌ಮೆಂಟ್‌ನ 8ನೇ ಮಹಡಿಯಲ್ಲಿ ಸಿಕ್ಕಿರುವ ಫಿಂಗರ್‌ ಫ್ರಿಂಟ್‌ ಮಾತ್ರ ಹೋಲಿಕೆಯಾಗುತ್ತಿದೆ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ.

ಧರ್ಮದ ಆಧಾರದಲ್ಲಿ ಭದ್ರತಾ ಮಂಡಳಿ ಸದಸ್ಯತ್ವ ಬೇಡ: ಭಾರತ

ನ್ಯೂಯಾರ್ಕ್: ಸುಧಾರಿತ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಪ್ರಾತಿನಿಧ್ಯಕ್ಕೆ ಧರ್ಮ ಮತ್ತು ನಂಬಿಕೆ ಸೇರಿದಂತೆ ಹೊಸ ಆಧಾರವಾಗಿ ಪರಿಚಯಿಸುವ ಪ್ರಯತ್ನಗಳನ್ನು ಭಾರತ ವಿರೋಧಿಸಿದೆ. ಈ ಪ್ರಯತ್ನ ಪ್ರಾದೇಶಿಕತೆ ಆಧರಿತ ಪ್ರಾತಿನಿಧ್ಯ ನಿರ್ಣಯಕ್ಕೆ ವಿರುದ್ಧವಾಗಿವೆ ಎಂದು ಪ್ರತಿಪಾದಿಸಿದೆ. ಇದುವರೆಗೆ ಪ್ರಾದೇಶಿಕತೆ ಆಧಾರದ ಮೇಲೆ ದೇಶಗಳಿಗೆ ಭದ್ರತಾ ಮಂಡಳಿಯ ಸದಸ್ಯತ್ವ ನೀಡುವ ಪದ್ಧತಿ ಜಾರಿಯಲ್ಲಿದೆ. ಈ ಕುರಿತು ಅಂತರ-ಸರ್ಕಾರಿ ಮಾತುಕತೆಗಳ ಸಭೆ (ಐಜಿನ್)ಯಲ್ಲಿ ಭಾಗವಹಿಸಿದ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ಪಿ. ಹರೀಶ್, ‘ಧರ್ಮ, ನಂಬಿಕೆಯಂತಹ ಹೊಸ ನಿಯತಾಂಕಗಳನ್ನು ಪರಿಚಯಿಸುವ ಪ್ರಸ್ತಾಪಗಳು ಸ್ಥಾಪಿತ ವಿಶ್ವಸಂಸ್ಥೆಯ ಪದ್ಧತಿಗೆ ವಿರುದ್ಧವಾಗಿವೆ. ಈಗಾಗಲೇ ಕ್ಲಿಷ್ಟಕರವಾದ ಚರ್ಚೆಗೆ ಇವು ಇನ್ನಷ್ಟು ಸಂಕೀರ್ಣತೆಯನ್ನು ತಂದೊಡ್ಡುತ್ತವೆ’ ಎಂದಿದೆ. ಭಾರತ, ಬ್ರೆಜಿಲ್, ಜರ್ಮನಿ ಹಾಗೂ ಜಪಾನ್ ದೇಶಗಳನ್ನೊಂಡ ಜಿ4 ಸಂಘಟನೆ ಸಹ ಈ ಪ್ರಸ್ತಾಪವನ್ನು ವಿರೋಧಿಸಿದ್ದು,

Share this article