ಪಿಟಿಐ ನವದೆಹಲಿ
ಮಾ.8ರಂದು ನ್ಯಾಯಮಂಡಳಿ ನೀಡಿರುವ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾರಣವಿಲ್ಲ ಎಂದು ಬುಧವಾರ ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
2018-19ನೇ ಸಾಲಿಗೆ ಸಂಬಂಧಿಸಿದಂತೆ 100 ಕೋಟಿ ರು. ತೆರಿಗೆ ಬಾಕಿ ಪಾವತಿಸಬೇಕೆಂದು ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪಕ್ಷಕ್ಕೆ ನೋಟಿಸ್ ನೀಡಿತ್ತು. ಅದನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ತೆರಿಗೆ ನ್ಯಾಯಮಂಡಳಿಗೆ ಹೋಗಿತ್ತು. ತೆರಿಗೆ ನ್ಯಾಯಮಂಡಳಿ ಕೂಡ 100 ಕೋಟಿ ರು. ಬಾಕಿ ಪಾವತಿಸಲು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಹೈಕೋರ್ಟ್‌ಗೆ ಹೋಗಿತ್ತು.ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದ ಕಾಂಗ್ರೆಸ್, ‘ಆದಾಯ ತೆರಿಗೆ ಇಲಾಖೆಯ ಲೆಕ್ಕಾಚಾರ ತಪ್ಪಾಗಿದೆ. ಇಷ್ಟು ತೆರಿಗೆ ಪಾವತಿಸಿದರೆ ಪಕ್ಷ ದಿವಾಳಿಯಾಗುತ್ತದೆ. ನಮ್ಮ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡುವಂತೆ ತೆರಿಗೆ ನ್ಯಾಯಮಂಡಳಿ ನೀಡಿರುವ ಆದೇಶವು ಲೋಕಸಭೆ ಚುನಾವಣೆಯ ಸಮಯದಲ್ಲಿ ಪ್ರಜಾಪ್ರಭುತ್ವದ ಮೇಲೆ ನಡೆಸಿದ ದಾಳಿಯಾಗಿದೆ’ ಎಂದು ಹೇಳಿತ್ತು.