ಜಾರ್ಖಂಡ್‌ನ 14ನೇ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ 4ನೇ ಭಾರಿ ಹೇಮಂತ್‌ ಸೊರೇನ್‌ ಪ್ರಮಾಣ

KannadaprabhaNewsNetwork |  
Published : Nov 29, 2024, 01:00 AM ISTUpdated : Nov 29, 2024, 04:53 AM IST
hemanth soren

ಸಾರಾಂಶ

ಜಾರ್ಖಂಡ್‌ನ 14ನೇ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ಗುರುವಾರ ಪ್ರಮಾಣ ಸ್ವೀಕರಿಸಿದರು. ಇಲ್ಲಿನ ಮೊರಹಾಬಾದಿ ಮೈಧಾನದಲ್ಲಿ ಅವರಿಗೆ ರಾಜ್ಯಪಾಲ ಸಂತೋಷ್‌ ಕುಮಾರ್‌ ಗಂಗ್ವಾರ್‌ ಗೋಪ್ಯತೆಯ ಪ್ರಮಾಣವಚನ ಬೋಧಿಸಿದ್ದಾರೆ. ಇದರೊಂದಿಗೆ ಸೊರೇನ್‌ 4ನೇ ಭಾರಿ ಸಿಎಂ ಪಟ್ಟವನ್ನಲಂಕರಿಸಿದ್ದಾರೆ.

ರಾಂಚಿ: ಜಾರ್ಖಂಡ್‌ನ 14ನೇ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ಗುರುವಾರ ಪ್ರಮಾಣ ಸ್ವೀಕರಿಸಿದರು. ಇಲ್ಲಿನ ಮೊರಹಾಬಾದಿ ಮೈಧಾನದಲ್ಲಿ ಅವರಿಗೆ ರಾಜ್ಯಪಾಲ ಸಂತೋಷ್‌ ಕುಮಾರ್‌ ಗಂಗ್ವಾರ್‌ ಗೋಪ್ಯತೆಯ ಪ್ರಮಾಣವಚನ ಬೋಧಿಸಿದ್ದಾರೆ. ಇದರೊಂದಿಗೆ ಸೊರೇನ್‌ 4ನೇ ಭಾರಿ ಸಿಎಂ ಪಟ್ಟವನ್ನಲಂಕರಿಸಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜೆಎಂಎಂ ಒಳಗೊಂಡ ಮೈತ್ರಿಕೂಟ 81ರ ಪೈಕಿ 56 ಸ್ಥಾನಗಳನ್ನು ಗೆದ್ದಿತ್ತು. ಬಹರೈತ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸೊರೇನ್‌ 39,791 ಮತಗಳ ಅಂತರದಿಂದ ವಿಜಯಿಯಾಗಿದ್ದರು.

ಇಂಡಿಕೂಟದ ಶಕ್ತಿ ಪ್ರದರ್ಶನ 

ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ದೆಹಲಿಯ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ಪಂಜಾಬ್‌ ಸಿಎಂ ಭಗವಂತ್‌ ಮಾನ್‌, ಸಿಪಿಎಂ ಪ್ರಧಾನ ಕಾರ್ಯದರ್ಶಿ ದೀಪಂಕರ್‌ ಭಟ್ಟಾಚಾರ್ಯ, ಎಸ್‌ಪಿಯ ಅಖಿಲೇಶ್‌ ಯಾದವ್‌, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಸೇರಿದಂತೆ ಇಂಡಿಯಾ ಕೂಟದ ಪ್ರಮುಖ ನಾಯಕರು ಉಪಸ್ಥಿತರಿದ್ದರು. ಪ್ರಮಾಣ ಸ್ವೀಕಾರದ ಮುನ್ನ ಕುರ್ತಾ ಪೈಜಾಮಾ ಹಾಗೂ ನೆಹರು ಜಾಕೆಟ್‌ನಲ್ಲಿ ಕಂಗೊಳಿಸಿದ ಹೇಮಂತ್‌, ತಮ್ಮ ತಂದೆ ಹಾಗೂ ಜೆಎಂಎಂ ಅಧ್ಯಕ್ಷ ಶಿಬು ಸೊರೇನ್‌ ಅವರನ್ನು ಭೇಟಿಯಾದರು.

ನಮ್ಮ ಒಗ್ಗಟ್ಟೇ ನಮಗೆ ಆಯುಧ. 

ನಮ್ಮನ್ನು ವಿಭಜಿಸಲು ಅಥವಾ ಸುಮ್ಮನಾಗಿಸಲು ಸಾಧ್ಯವಿಲ್ಲ. ಅವರು ಹಿಂದೆಳೆದರೆ ನಾವು ಮುನ್ನುಗ್ಗುತ್ತೇವೆ. ಸುಮ್ಮನಾಗಿಸಲು ಪ್ರಯತ್ನಿಸಿದರೆ ನಮ್ಮ ಕ್ರಾಂತಿಕಾರಿ ಧ್ವನಿ ಜೋರಾಗಿ ಮೊಳಗುತ್ತದೆ’ ಎಂದರು. ಅಂತೆಯೇ, ಶಪಥದ ದಿನವನ್ನು ಐತಿಹಾಸಿಕ ಎಂದ ಸೊರೇನ್‌, ನಮ್ಮ ಸಾಮೂಹಿಕ ಹೋರಾಟ, ಪ್ರೀತಿ, ಭ್ರಾತೃತ್ವ ಹಾಗೂ ನ್ಯಾಯದ ಪ್ರತಿ ಜಾರ್ಖಂಡ್‌ ಜನತೆಯ ಬದ್ಧತೆ ಅಧಿಕವಾಗುತ್ತದೆ.

ಹೇಮಂತ್ ಸೊರೇನ್‌, ಜಾರ್ಖಂಡ್‌ ಸಿಎಂ

PREV

Recommended Stories

ಕೃಷಿ ತ್ಯಾಜ್ಯ ಸುಡುವ ರೈತರನ್ನುಬಂಧಿಸಿ ಪಾಠ ಕಲಿಸಿ: ಸುಪ್ರೀಂ
ಸಂಸತ್‌, ತಾಜ್‌ ದಾಳಿ ಹಿಂದೆ ಅಜರ್‌: ಜೈಷ್‌ ಕಮಾಂಡರ್‌