ಮಕ್ಕಳೆದುರು ಸೆಕ್ಸ್‌ ಮಾಡುವುದು ಲೈಂಗಿಕ ಕಿರುಕುಳಕ್ಕೆ ಸಮ : ಹೈಕೋರ್ಟ್‌ ಅಭಿಪ್ರಾಯ

KannadaprabhaNewsNetwork |  
Published : Oct 17, 2024, 01:36 AM ISTUpdated : Oct 17, 2024, 08:26 AM IST
kerala Highcourt

ಸಾರಾಂಶ

‘ಮಕ್ಕಳ ಎದುರು ಲೈಂಗಿಕ ಕ್ರಿಯೆ ಮಾಡುವುದು, ಬೆತ್ತಲಾಗಿ ನಿಲ್ಲುವುದು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದಂತೆ’ ಎಂದು ಕೇರಳ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಕೊಚ್ಚಿ: ‘ಮಕ್ಕಳ ಎದುರು ಲೈಂಗಿಕ ಕ್ರಿಯೆ ಮಾಡುವುದು, ಬೆತ್ತಲಾಗಿ ನಿಲ್ಲುವುದು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದಂತೆ’ ಎಂದು ಕೇರಳ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ವ್ಯಕ್ತಿಯೋರ್ವ ತನ್ನ ವಿರುದ್ಧ ದಾಖಲಾಗಿದ್ದ ಪೋಕ್ಸೋ ಕೇಸ್‌ ಮತ್ತು ಬಾಲಾಪರಾಧಿ ಕಾಯ್ದೆ ಕೇಸ್‌ ರದ್ದುಗೊಳಿಸುವಂತೆ ಕೋರಿದ್ದ ಅರ್ಜಿ ವಿಚಾರಣೇ ನಡೆಸಿದ ಪೀಠ,‘ಕೋಣೆ ಬಾಗಿಲು ಹಾಕಿಕೊಳ್ಳದೆ, ಬೆತ್ತಲಾಗಿ ಲೈಂಗಿಕ ಕ್ರಿಯೆ ಮಾಡುವಾಗ ಮಕ್ಕಳು ಒಳಗೆ ಬಂದರೆ ಅದು ಮಕ್ಕಳ ತಪ್ಪಲ್ಲ. 

ಮಕ್ಕಳ ಎದುರು ಬೆತ್ತಲಾಗಿ ನಿಲ್ಲುವುದು ಸಹ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದಂತೆ. ಹೀಗಾಗಿ ಅವು ಪೋಕ್ಸೋ, ಕಾಯ್ದೆ ಅಡಿ ಶಿಕ್ಷಾರ್ಹ ಅಪರಾಧವಾಗಲಿದೆ’ ಎಂದು ಅಭಿಪ್ರಾಯಪಟ್ಟಿತು. ಜೊತೆಗೆ ಪೋಕ್ಸೋ ಪ್ರಕರಣದಲ್ಲಿ ತನಿಖೆಗೆ ಒಳಪಡುವಂತೆ ಆದೇಶಿಸಿತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

₹1.1 ಕೋಟಿ ಇನಾಮು ಇದ್ದ ಟಾಪ್ ನಕ್ಸಲ್‌ ಹತ್ಯೆ
3500 ಕಿ.ಮೀ ಸಾಗಬಲ್ಲ ಕೆ - 4ಬ್ಯಾಲಿಸ್ಟಿಕ್‌ ಕ್ಷಿಪಣಿ ಯಶಸ್ವಿ