3500 ಕಿ.ಮೀ ದೂರದವರೆಗೆ ತಲುಪಬಲ್ಲ ಸಾಮರ್ಥ್ಯದ ಕೆ-4 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಭಾರತ ಗುರುವಾರ ಯಶಸ್ವಿಯಾಗಿ ಪ್ರಯೋಗಿಸಿದೆ. ಬಂಗಾಳಕೊಲ್ಲಿಯಲ್ಲಿ ಬೀಡುಬಿಟ್ಟಿರುವ 6000 ಟನ್ ತೂಕದ ಐಎನ್‌ಎಸ್ ಅರಿಘಾತ್ ಸಬ್‌ಮರೀನ್‌ನಿಂದ ಇದು ಕ್ಷಿಪಣಿಯ 2ನೇ ಪರೀಕ್ಷೆಯಾಗಿದೆ.
ನವದೆಹಲಿ: 3500 ಕಿ.ಮೀ ದೂರದವರೆಗೆ ತಲುಪಬಲ್ಲ ಸಾಮರ್ಥ್ಯದ ಕೆ-4 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಭಾರತ ಗುರುವಾರ ಯಶಸ್ವಿಯಾಗಿ ಪ್ರಯೋಗಿಸಿದೆ. ಬಂಗಾಳಕೊಲ್ಲಿಯಲ್ಲಿ ಬೀಡುಬಿಟ್ಟಿರುವ 6000 ಟನ್ ತೂಕದ ಐಎನ್‌ಎಸ್ ಅರಿಘಾತ್ ಸಬ್‌ಮರೀನ್‌ನಿಂದ ಇದು ಕ್ಷಿಪಣಿಯ 2ನೇ ಪರೀಕ್ಷೆಯಾಗಿದೆ.
ಐಎನ್‌ಎಸ್ ಅರಿಘಾತ್‌ನಿಂದ ಕೆ-4 ಬ್ಯಾಲಿಸ್ಟಿಕ್ ಕ್ಷಿಪಣಿ ( ಎಸ್‌ಎಲ್‌ಬಿಎಂ) ಪರೀಕ್ಷೆ
ಬಂಗಾಳಕೊಲ್ಲಿಯಲ್ಲಿರುವ ಪರಮಾಣು ಚಾಲಿತ ಜಲಾಂತರ್ಗಾಮಿ ಐಎನ್‌ಎಸ್ ಅರಿಘಾತ್‌ನಿಂದ ಕೆ-4 ಬ್ಯಾಲಿಸ್ಟಿಕ್ ಕ್ಷಿಪಣಿ ( ಎಸ್‌ಎಲ್‌ಬಿಎಂ) ಪರೀಕ್ಷೆ ನಡೆಸಲಾಗಿದೆ. ಇದನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ. ಇದನ್ನು ಇನ್ನಷ್ಟು ಪರೀಕ್ಷೆಗೆ ಒಳಪಡಿಸಿದ ಬಳಿಕ ಸೇನೆಗೆ ಹಸ್ತಾಂತರಿಸಲಾಗುವುದು.
5000 ಕಿ.ಮೀಗಿಂತ ಎಸ್‌ಎಲ್‌ಬಿಎಗಳನ್ನು ಹೊಂದಿದೆ
ಅಮೆರಿಕ, ರಷ್ಯಾ ಮತ್ತು ಚೀನಾ ಸೇರಿದಂತೆ ಕೆಲ ದೇಶಗಳು ಈಗಾಗಲೇ 5000 ಕಿ.ಮೀಗಿಂತ ಎಸ್‌ಎಲ್‌ಬಿಎಗಳನ್ನು ಹೊಂದಿದೆ. ಇದೀಗ ಭಾರತ ಪರೀಕ್ಷಿಸಿರುವ ಈ ಕೆ- 4 ಜಾಗತಿಕ ಸಾಮರ್ಥ್ಯ ಪಡಿಸುವಲ್ಲಿ ನಿರ್ಣಾಯಕ ಎಂದೇ ವಿಶ್ಲೇಷಿಸಲಾಗುತ್ತಿದೆ.