ಬಿಹಾರ ದಾಖಲೆ ಮತದಾನ ಎನ್‌ಡಿಎ ಜಯ ಸಂಕೇತ: ಮೋದಿ

KannadaprabhaNewsNetwork |  
Published : Nov 08, 2025, 01:45 AM ISTUpdated : Nov 08, 2025, 05:03 AM IST
PM Modi

ಸಾರಾಂಶ

‘ಬಿಹಾರದ ಮತದಾರರು ಹಳೆಯ ದಾಖಲೆಗಳನ್ನು ಮುರಿದು, ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿದ್ದಾರೆ. ಜನರು ನರೇಂದ್ರ ಮತ್ತು ನಿತೀಶರ ಕೆಲಸಗಳ ಮೇಲೆ ತಮ್ಮ ನಂಬಿಕೆಯನ್ನು ಮರುಸ್ಥಾಪಿಸಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 ಔರಂಗಾಬಾದ್‌/ಭಭುವಾ :  ‘ಬಿಹಾರದ ಮತದಾರರು ಹಳೆಯ ದಾಖಲೆಗಳನ್ನು ಮುರಿದು, ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿದ್ದಾರೆ. ಜನರು ನರೇಂದ್ರ ಮತ್ತು ನಿತೀಶರ ಕೆಲಸಗಳ ಮೇಲೆ ತಮ್ಮ ನಂಬಿಕೆಯನ್ನು ಮರುಸ್ಥಾಪಿಸಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

2ನೇ ಹಂತದ ವಿಧಾನಸಭೆ ಚುನಾವಣೆ ಎದುರಿಸಲಿರುವ ಔರಂಗಾಬಾದ್‌, ಭಭುವಾ ಕ್ಷೇತ್ರಗಳಲ್ಲಿ ಶುಕ್ರವಾರ ರ್‍ಯಾಲಿ ನಡೆಸಿದ ಅವರು, ಈ ಬಾರಿಯೂ ಬಿಜೆಪಿ-ಜೆಡಿಯು ಮೈತ್ರಿಕೂಟ ಗೆಲುವು ಸಾಧಿಸುವ ಕುರಿತು ವಿಶ್ವಾಸ ವ್ಯಕ್ತಪಡಿಸಿದರು. ಮತದಾರರು ಭಾರಿ ಪ್ರಮಾಣದಲ್ಲಿ ಮತ ಚಲಾಯಿಸಿ ವಿಪಕ್ಷಗಳ ಅಪಪ್ರಚಾರಕ್ಕೆ ತಿರುಗೇಟು ನೀಡಿದ್ದಾರೆ ಎಂದರು. 

ಬಿಹಾರದ ಮತದಾರರು ಎಲ್ಲಾ ದಾಖಲೆಗಳನ್ನು ಮುರಿದರು

 ‘ನಿನ್ನೆ, ಬಿಹಾರದ ಮತದಾರರು ಎಲ್ಲಾ ದಾಖಲೆಗಳನ್ನು ಮುರಿದರು. ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಇಷ್ಟೊಂದು ಹೆಚ್ಚಿನ ಪ್ರಮಾಣದ ಮತದಾನ ನಡೆದಿರಲಿಲ್ಲ. ಹೆಚ್ಚಿನ ಶ್ರೇಯಸ್ಸು ತಾಯಂದಿರು ಮತ್ತು ಸಹೋದರಿಯರಿಗೆ ಸಲ್ಲುತ್ತದೆ. ಅವರು ಅಪಾರ ಸಂಖ್ಯೆಯಲ್ಲಿ ಬಂದು ಮತದಾನವನ್ನು ಶೇ.65ಕ್ಕೆ ಹೆಚ್ಚಿಸಿದರು. ಅವರೆಲ್ಲರೂ ನರೇಂದ್ರ ಮೋದಿ-ನಿತೀಶ್ ಕುಮಾರ್‌ ಅವರ ದಾಖಲೆಯ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿದೆ’ ಎಂದರು.

ಬಿಜೆಪಿಗರಿಂದ ದಿಲ್ಲೀಲೂ ಮತ, ಬಿಹಾರದಲ್ಲೂ ಮತ: ರಾಗಾ 

ಬಂಕಾ (ಬಿಹಾರ) :  ಮತಗಳ್ಳತನ ಪ್ರಸ್ತಾಪಿಸಿ ಈಗಾಗಲೇ ಬಿಜೆಪಿ ಮೇಲೆ ಮುಗಿಬಿದ್ದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ದೆಹಲಿಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ ಬಿಜೆಪಿ ನಾಯಕರು ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲೂ ಮತ ಚಲಾಯಿಸಿದ್ದಾರೆ’ ಎಂದು ಶುಕ್ರವಾರ ಆರೋಪಿಸಿದ್ದಾರೆ.ಬಂಕಾದಲ್ಲಿ ನಡೆದ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡಿದ ಗಾಂಧಿ, ‘ಹರ್ಯಾಣದಲ್ಲಿ 25 ಲಕ್ಷ ಮತ ಕದಿಯಲಾಗಿದೆ ಎಂಬ ಬಗ್ಗೆ ನಾನು ಪುರಾವೆ ಒದಗಿಸಿದ್ದೇನೆ. ಚುನಾವಣಾ ಆಯೋಗವು ಆರೋಪಗಳನ್ನು ನಿರಾಕರಿಸಲು ಸಾಧ್ಯವಿಲ್ಲ. ಬಿಜೆಪಿ ಹಾಗೂ ಮೋದಿ ಸಗಟು ಮತಗಳ್ಳತನದಲ್ಲಿ ತೊಡಗಿದೆ. ಇದನ್ನೇ ಬಿಹಾರದಲ್ಲಿ ಪುನರಾವರ್ತಿಸುವ ಯತ್ನ ನಡೆದಿದೆ. ಆದರೆ, ಬಿಹಾರದ ಜನರು ಇದು ಸಂಭವಿಸಲು ಬಿಡುವುದಿಲ್ಲ ಎಂದು ನನಗೆ ಖಚಿತವಾಗಿದೆ’ ಎಂದರು.

‘ದೆಹಲಿಯಲ್ಲಿ ಮತ ಚಲಾಯಿಸಿದ ಬಿಜೆಪಿ ನಾಯಕರು ಗುರುವಾರ ಬಿಹಾರ ಚುನಾವಣೆಯ ಮೊದಲ ಹಂತದಲ್ಲಿಯೂ ಮತ ಚಲಾಯಿಸಿದ್ದಾರೆ ಎಂದು ನನಗೆ ನಿನ್ನೆ ತಿಳಿಯಿತು’ ಕಿಡಿಕಾರಿದರು.ಇದೇ ವೇಳೆ, ‘ಮೋದಿ ಮುಖವನ್ನು 24 ಗಂಟೆಗಳ ಕಾಲ ತೋರಿಸಲು ಟೀವಿ ಚಾನೆಲ್‌ಗಳಿಗೆ ಬಿಜೆಪಿ ಹಣ ನೀಡುತ್ತದೆ’ ಎಂದು ರಾಹುಲ್‌ ಆರೋಪಿಸಿದರು.

PREV
Read more Articles on

Recommended Stories

ಸೂಕ್ತ ಸಮಯದಲ್ಲಿ ಸರಿಯಾದ ಹೆಜ್ಜೆ : ರಾಜನಾಥ್‌
ಇಂಡೋನೇಷ್ಯಾ ಮಸೀದಿಯಲ್ಲಿ ಸ್ಫೋಟ: 54 ಜನರಿಗೆ ಗಾಯ