ಪ. ಬಂಗಾಳದ ಪ್ರಥಮ ಬಿಜೆಪಿ ಸಿಎಂ ಆಗಿ ಸುವೇಂದು ಪ್ರಮಾಣ

KannadaprabhaNewsNetwork |  
Published : May 10, 2026, 01:45 AM ISTUpdated : May 10, 2026, 04:34 AM IST
Suvendu Adhikari

ಸಾರಾಂಶ

ಪಶ್ಚಿಮ ಬಂಗಾಳದಲ್ಲಿ ಶನಿವಾರ ಕಾಂಗ್ರೆಸ್, ಟಿಎಂಸಿ ಹಾಗೂ ಎಡರಂಗಗಳ ಬಳಿಕ ಕೇಸರಿ ಯುಗ ಆರಂಭವಾಗಿದೆ. ಕೋಲ್ಕತಾದ ಐತಿಹಾಸಿಕ ಬ್ರಿಗೇಡ್‌ ಪರೇಡ್‌ ಮೈದಾನದಲ್ಲಿ, ರಾಜ್ಯದ ಮೊಟ್ಟಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು.

 ಕೋಲ್ಕತಾ :  ಪಶ್ಚಿಮ ಬಂಗಾಳದಲ್ಲಿ ಶನಿವಾರ ಕಾಂಗ್ರೆಸ್, ಟಿಎಂಸಿ ಹಾಗೂ ಎಡರಂಗಗಳ ಬಳಿಕ ಕೇಸರಿ ಯುಗ ಆರಂಭವಾಗಿದೆ. ಕೋಲ್ಕತಾದ ಐತಿಹಾಸಿಕ ಬ್ರಿಗೇಡ್‌ ಪರೇಡ್‌ ಮೈದಾನದಲ್ಲಿ, ರಾಜ್ಯದ ಮೊಟ್ಟಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. 

ಈ ಮೂಲಕ ರಾಜ್ಯದಲ್ಲಿ ಮಮತಾ ಬ್ಯಾನರ್ಜಿಯವರ ಟಿಎಂಸಿ ಯುಗ ಅಂತ್ಯವಾಗಿ, ಸ್ವಾತಂತ್ರ್ಯೋತ್ತರ ಭಾರತದಲ್ಲೇ ಮೊದಲ ಬಾರಿ ಬಿಜೆಪಿ ಆಡಳಿತ ಆರಂಭವಾಯಿತು.

ಇದೇ ವೇಳೆ, ಶಾಸಕರಾದ ದಿಲೀಪ್‌ ಘೋಷ್‌, ಅಗ್ನಿಮಿತ್ರಾ ಪೌಲ್, ಅಶೋಕ್‌ ಕೀರ್ತನೀಯ, ಕ್ಷುದಿರಾಂ ತುಡು, ನಿಶಿತ್‌ ಪ್ರಾಮಾಣಿಕ್‌ ಅವರು ಸಚಿವರಾಗಿ ಶಪಥ ಸ್ವೀಕರಿಸಿದರು. ಇವರಿಗೆಲ್ಲ ರಾಜ್ಯಪಾಲ ಆರ್‌.ಎನ್‌. ರವಿ ಅಧಿಕಾರಿಗೆ ಪ್ರಮಾಣ ವಚನ ಬೋಧಿಸಿದರು.

ಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೇಂದ್ರದ ಹಲವು ನಾಯಕರು, ಎನ್‌ಡಿಎ ಅಧಿಕಾರದಲ್ಲಿರುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಸೇರಿದಂತೆ ಹಲವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. 

ಸಂಪುಟದಲ್ಲಿ ಸಾಮಾಜಿಕ ಪ್ರಾತಿನಿಧ್ಯ: 

 ಶನಿವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 6 ಮಂದಿಗೆ ಸಾಮಾಜಿಕ ಮತ್ತು ಪ್ರಾದೇಶಿಕ ಪ್ರಾತಿನಿಧ್ಯವನ್ನು ಗಮನದಲ್ಲಿಟ್ಟುಕೊಂಡು ಅಧಿಕಾರ ನೀಡಲಾಗಿದೆ. ಅಧಿಕಾರಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದರೆ, ಘೋಷ್‌ ಒಬಿಸಿ, ಪೌಲ್‌ ಕಾಯಸ್ಥ, ಕೀರ್ತನೀಯ ಮಥುವಾ, ತುಡು ಬುಡಕಟ್ಟು ಹಾಗೂ ಪ್ರಾಮಾಣಿಕ್‌ ರಾಜವಂಶಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರಲ್ಲಿ ಇಬ್ಬರು ಉತ್ತರ ಬಂಗಾಳದವರಾದರೆ, ಮೂವರು ದಕ್ಷಿಣ ಬಂಗಾಳದವರು. 

ಉಳಿದ ಸಚಿವರು ಸೋಮವಾರ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೊಸ ಸಚಿವ ಸಂಪುಟದ ಮೊದಲ ಸಭೆಯೂ ಅದೇ ದಿನ ನಡೆಯುವ ಸಾಧ್ಯತೆಯಿದೆ. ಸಚಿವರ ಖಾತೆಗಳನ್ನು ಇನ್ನೂ ಘೋಷಿಸಲಾಗಿಲ್ಲ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ, 294 ಸ್ಥಾನಗಳ ಪೈಕಿ ಬಿಜೆಪಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ ಅಭೂತಪೂರ್ವ ಗೆಲುವು ಸಾಧಿಸಿತ್ತು. 15 ವರ್ಷಗಳಿಂದ ಆಡಳಿತದಲ್ಲಿದ್ದ ಟಿಎಂಸಿ ಅಧಿಕಾರ ಕಳೆದುಕೊಂಡಿದೆ.

ಡಬಲ್‌ ಎಂಜಿನ್‌ ಯುಗದ ಆರಂಭ

ಇಂದು ದಶಕಗಳ ದುರಾಡಳಿತ ಅಂತ್ಯವಾಗಿದ್ದು, ಅಭಿವೃದ್ಧಿ, ಶಾಂತಿ ಮತ್ತು ಸಮೃದ್ಧಿಯ ಡಬಲ್-ಎಂಜಿನ್ ಯುಗ ಆರಂಭವಾಗಿದೆ. ‘ಸುವರ್ಣ ಬಾಂಗ್ಲಾ’ ಯುಗವು ಅಧಿಕೃತವಾಗಿ ಪ್ರಾರಂಭವಾಗಿದೆ. ಸ್ವಾತಂತ್ರ್ಯಾನಂತರ ಮೊದಲ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಶುರುವಾಗಿದೆ. ನಮ್ಮ ಪಕ್ಷದ ಸ್ಥಾಪಕ ಪಿತಾಮಹರ ಕನಸುಗಳನ್ನು ನಾವು ನನಸು ಮಾಡುತ್ತೇವೆ.-ಸುವೇಂದು ಅಧಿಕಾರಿ, ಪ. ಬಂಗಾಳ ಮುಖ್ಯಮಂತ್ರಿ==

ಸುವೇಂದು ಆಡಳಿತ ಫಲಪ್ರದ ಆಗಲಿ

ಪ. ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸುವೇಂದು ಅಧಿಕಾರಿ ಅವರಿಗೆ ಅಭಿನಂದನೆಗಳು. ಜನರೊಂದಿಗೆ ಆಳವಾದ ಸಂಪರ್ಕ ಹೊಂದಿದ್ದ ಮತ್ತು ಅವರ ಆಕಾಂಕ್ಷೆಗಳನ್ನು ಹತ್ತಿರದಿಂದ ಅರ್ಥಮಾಡಿಕೊಂಡ ನಾಯಕರಾಗಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಮುಂದಿನ ಅಧಿಕಾರಾವಧಿ ಫಲಪ್ರದವಾಗಲಿ ಎಂದು ಆಶಿಸುತ್ತೇನೆ. -ನರೇಂದ್ರ ಮೋದಿ, ಪ್ರಧಾನಿ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪ್ರೀತಿಗೆ ಅಡ್ಡಿ: ಟ್ರೆಕ್‌ಗೆ ಹೋದಾಗ 400 ಅಡಿ ಕಂದಕಕ್ಕೆ ತಳ್ಳಿ ಭಾವಿ ಪತಿ ಕೊಲೆ
ಸಿಂದೂರದಲ್ಲಿ ಪಾಕ್‌ ಬಳಸಿದ್ದಚೀನಾ ನಿರ್ಮಿತ ಜೆ-10 ಜೆಟ್‌ಗೆಖರೀದಿಗೆ ಬಾಂಗ್ಲಾ ನಿರ್ಧಾರ