ಜೈಪುರ: ಮಧುಚಂದ್ರಕ್ಕೆ ತೆರಳಿದ್ದ ವೇಳೆ ಪತಿ ರಾಜಾ ರಘುವಂಶಿಯನ್ನು ಪತ್ನಿ ಸೋನಂ ಭೀಕರವಾಗಿ ಹತ್ಯೆಗೈದ ಪ್ರಕರಣ ಮಾಸುವ ಮುನ್ನವೇ, ಮದುವೆಯಾದ ಮೂರೇ ತಿಂಗಳಿಗೆ ಪ್ರಿಯಕರನ ಜೊತೆ ಸೇರಿ, ಪತ್ನಿ ಪತಿಯನ್ನು ಹತ್ಯೆಗೈದು ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಅಂಜು ಮತ್ತು ಆಶಿಷ್ 3 ತಿಂಗಳ ಹಿಂದೆ ವಿವಾಹವಾಗಿದ್ದರು. ಆದರೆ ಅಂಜುವಿಗೆ ಸಂಜು ಎಂಬಾತನ ಜೊತೆ ಪ್ರೇಮವಿತ್ತು. ಹಾಗಾಗಿ ಮದುವೆಯ ಕೆಲ ದಿನಗಳಲ್ಲೇ ಗಂಡನ ಮನೆ ಬಿಟ್ಟು ತವರಿಗೆ ಹೋಗಿದ್ದಳು. ಅಲ್ಲಿ ಮತ್ತೆ ಸಂಜುವಿನ ಸಂಪರ್ಕ ಶುರುವಾಗಿತ್ತು. ಅಲ್ಲಿ ಇಬ್ಬರೂ ಆಶಿಷ್ ಹತ್ಯೆ ಸಂಚು ರೂಪಿಸಿದ್ದರು. ಅದರ ಭಾಗವಾಗಿ ಅಂಜು ಪುನಃ ಪತಿಯ ಮನೆಗೆ ಬಂದಿದ್ದೂ. ಜ.30ರ ರಾತ್ರಿ ಇಬ್ಬರೂ ವಾಕಿಂಗ್‌ಗೆ ಹೋಗಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಆಶಿಶ್ ಸಾವನ್ನಪ್ಪಿದ್ದರೆ, ಅಂಜು ಪ್ರಜ್ಞೆ ತಪ್ಪಿಬಿದ್ದಿದ್ದಳು.
ಆಕೆಯ ಮೇಮೈಲಿದ್ದ ಆಭರಣ ದೋಚಸಲಾಗಿತ್ತು.ಮೊದಲಿಗೆ ಇದೊಂದು ಆಕಸ್ಮಿಕ ಅಪಘಾತ ಎಂದೇ ಪರಿಗಣಿಸಲಾಗಿತ್ತು. ಆದರೆ ಅನುಮಾನದಲ್ಲಿ ವಿಚಾರಣೆ ನಡೆಸಿದಾಗ ಅಂಜು ನಡೆಸಿದ ಸಂಚು ಬೆಳಕಿಗೆ ಬಂದು, ಇದೀಗ ಅಂಜು ಮತ್ತು ಆಕೆಯನ ಪ್ರಿಯಕರನನ್ನು ಬಂಧಿಸಲಾಗಿದೆ.