ಗುರುಗ್ರಾಮ: ಹೋಟೆಲೊಂದರಲ್ಲಿ ಮೌತ್ ಫ್ರೆಷ್ನರ್ ತಿಂದು ಐದು ಜನರು ರಕ್ತವಾಂತಿ ಮಾಡಿಕೊಂಡು ಘಟನೆಗೆ ಸಂಬಂಧಿಸಿದಂತೆ ಹರ್ಯಾಣ ಪೊಲೀಸರು ಹೋಟೆಲಿನ ಮ್ಯಾನೇಜರ್‌ನನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಆಕಸ್ಮಿಕವಾಗಿ ಮೌತ್‌ಪ್ರೆಶ್ನರ್ ಜೊತೆ ಡ್ರೈಐಸ್ ಸೇರಿ ಎಡವಟ್ಟಾಗಿದೆ.
ಇದರಲ್ಲಿ ಯಾವುದೇ ಉದ್ದೇಶಪೂರ್ವ ಕೃತ್ಯ ಇಲ್ಲ ಎಂದು ಮ್ಯಾನೇಜರ್ ಹೇಳಿದ್ದಾನೆ ಎನ್ನಲಾಗಿದೆ.
ಸೋಮವಾರ ಇಲ್ಲಿನ ಲೊಫೆರೆಸ್ಟಾ ಹೋಟೆಲಿಗೆ ಅಂಕಿತ್ ಕುಮಾರ್ ಮತ್ತು ಸ್ನೇಹಿತರು ಬಂದಿದ್ದರು.
ಈ ವೇಳೆ ಮೌತ್ ಫ್ರೆಷ್ನರ್ ತಿಂದು ರಕ್ತ ವಾಂತಿ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಘಟನೆ ಬಳಿಕ ನಾಪತ್ತೆಯಾಗಿರುವ ರೆಸ್ಟೋರೆಂಟ್ ಮಾಲೀಕರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
Subscribe to get breaking news alertsSubscribe Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.