ನವದೆಹಲಿ: ಕೌಟುಂಬಿಕ ಕಲಹ ತಾರಕಕ್ಕೇರಿದ ಕಾರಣ ಪತ್ನಿಯನ್ನು ಕೊಂದು ತನ್ನನ್ನು ಪೊಲೀಸರಿಗೆ ಒಪ್ಪಿಸುವಂತೆ ಸ್ವತಃ ಪತಿ ಕೂಗಾಡಿಕೊಂಡ ಘಟನೆ ಗಾಜಿಯಾಬಾದ್‌ನ ಫ್ಲಾಟ್‌ವೊಂದರಲ್ಲಿ ನಡೆದಿದೆ.
ಶವ ದುರ್ವಾಸನೆ ಬೀರಲು ಪ್ರಾರಂಭವಾದ ಬಳಿಕ ಮನೆಯ ಹೊರಗೆ ಬಂದು ಪತ್ನಿಯನ್ನು ತಾನೇ ಕೊಂದಿದ್ದು, ಪೊಲೀಸರಿಗೊಪ್ಪಿಸುವಂತೆ ಕಿರುಚಾಡಿದ್ದಾನೆ.
ಬಳಿಕ ಪೊಲೀಸರು ಬಂದು ಆತನನ್ನು ಬಂಧಿಸಿ ಕರೆದೊಯ್ದಿದ್ದಾರೆ. ಬಳಿಕ ಪತ್ನಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಆಕೆಯ ಪೋಷಕರಿಗೆ ಒಪ್ಪಿಸಿದ್ದಾರೆ.