ನನ್ನ ಮಕ್ಕಳು ಐಎಎಸ್ ಅಧಿಕಾರಿಗಳಾಗುವುದು ಬೇಡ : ತುಕಾರಾಂ ಮುಂಢೆ

Published : Oct 24, 2026, 12:34 PM IST
Tukaram mundhe

ಸಾರಾಂಶ

ಆಹಾರ ಕಲಬೆರಕೆ ವಿರುದ್ಧ ಸಮರ ಸಾರಿ ಸುದ್ದಿಯಾಗಿರುವ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಆಯುಕ್ತರಾದ ತುಕಾರಾಮ ಮುಂಢೆ ಅವರು ತಮ್ಮ ಸ್ವಂತ ಮಕ್ಕಳ ವಿಚಾರದಲ್ಲಿ ಭಿನ್ನವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಮುಂಬೈ: ಅನೇಕ ಭಾರತೀಯ ಕುಟುಂಬಗಳಲ್ಲಿ ಐಎಎಸ್ ಅಧಿಕಾರಿಯಾಗುವುದೇ ವೃತ್ತಿಜೀವನದ ಅತ್ಯುನ್ನತ ಗುರಿಯಾಗಿರುತ್ತದೆ. ಆದರೆ ಇತ್ತೀಚೆಗೆ ಆಹಾರ ಕಲಬೆರಕೆ ವಿರುದ್ಧ ಸಮರ ಸಾರಿ ಸುದ್ದಿಯಾಗಿರುವ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಆಯುಕ್ತರಾದ ತುಕಾರಾಮ ಮುಂಢೆ ಅವರು ತಮ್ಮ ಸ್ವಂತ ಮಕ್ಕಳ ವಿಚಾರದಲ್ಲಿ ಭಿನ್ನವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಮಕ್ಕಳು ಸಿವಿಲ್ ಸೇವೆಯನ್ನು ಸೇರಬಾರದು ಎಂದು ಸಲಹೆ ನೀಡಿದ್ದಾರೆ.

‘ನನ್ನ ಮಕ್ಕಳು ಉದ್ಯಮಿಗಳಾಗಬೇಕು

ಜಾಗತಿಕ ಮರಾಠಾ ವ್ಯಾಪಾರ ಎಕ್ಸ್‌ಪೋದಲ್ಲಿ ಮಾತನಾಡಿದ ಅವರು, ‘ನನ್ನ ಮಕ್ಕಳು ಉದ್ಯಮಿಗಳಾಗಬೇಕು ಅಥವಾ ಸಾರ್ವಜನಿಕ ನಾಯಕರಾಗಬೇಕು ಎಂದು ನಾನು ಬಯಸುತ್ತೇನೆ. ಏಕೆಂದರೆ ಈ ಕ್ಷೇತ್ರಗಳಲ್ಲಿ ಹೆಚ್ಚಿನ ಸ್ವಾತಂತ್ರ್ಯದೊಂದಿಗೆ ಸಮಾಜಕ್ಕೆ ಕೊಡುಗೆ ನೀಡಲು ಅವಕಾಶವಿರುತ್ತದೆ’ ಎಂದಿದ್ದಾರೆ.

21 ವರ್ಷಗಳ ವೃತ್ತಿಜೀವನದಲ್ಲಿ 25 ಸಲ ವರ್ಗಾವಣೆ

2005ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಮುಂಢೆ, ತಮ್ಮ 21 ವರ್ಷಗಳ ವೃತ್ತಿಜೀವನದಲ್ಲಿ 25 ಸಲ ವರ್ಗಾವಣೆಯಾಗಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಜಿಯೋ ಐಪಿಒ ವಿಶ್ವ ದಾಖಲೆ! - ಷೇರುಗಳಿಗೆ 1.39 ಕೋಟಿ ಅರ್ಜಿ: ಇದೇ ಮೊದಲು
ಜ.1ರಿಂದ ವಾಟ್ಸಾಪ್‌, ಟೆಲಿಗ್ರಾಂಗೆ ಆ್ಯಕ್ಟಿವ್‌ ಸಿಮ್‌ ಕಡ್ಡಾಯ