ಜಿಯೋ ಐಪಿಒ ವಿಶ್ವ ದಾಖಲೆ! - ಷೇರುಗಳಿಗೆ 1.39 ಕೋಟಿ ಅರ್ಜಿ: ಇದೇ ಮೊದಲು

Published : Oct 24, 2026, 07:23 AM IST
Jio IPO world record

ಸಾರಾಂಶ

ರಿಲಯನ್ಸ್‌ ಕಂಪನಿಯ ಜಿಯೋ ಪ್ಲಾಟ್‌ಫಾರ್ಮ್‌ನ ಮೆಗಾ ಐಪಿಒ ಇದೀಗ ಹೊಸ ಇತಿಹಾಸ ಬರೆದಿದ್ದು, ವಿಶ್ವದಲ್ಲೇ ಅತೀ ಹೆಚ್ಚು ಮಂದಿ ಬಿಡ್‌ ಮಾಡಿರುವ ಐಪಿಒ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1.39 ಕೋಟಿಗೂ ಹೆಚ್ಚು ಮಂದಿ ಈ ಐಪಿಒಗೆ ಬಿಡ್‌ ಮಾಡಿದ್ದಾರೆ.

ನವದೆಹಲಿ : ರಿಲಯನ್ಸ್‌ ಕಂಪನಿಯ ಜಿಯೋ ಪ್ಲಾಟ್‌ಫಾರ್ಮ್‌ನ ಮೆಗಾ ಐಪಿಒ ಇದೀಗ ಹೊಸ ಇತಿಹಾಸ ಬರೆದಿದ್ದು, ವಿಶ್ವದಲ್ಲೇ ಅತೀ ಹೆಚ್ಚು ಮಂದಿ ಬಿಡ್‌ ಮಾಡಿರುವ ಐಪಿಒ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1.39 ಕೋಟಿಗೂ ಹೆಚ್ಚು ಮಂದಿ ಈ ಐಪಿಒಗೆ ಬಿಡ್‌ ಮಾಡಿದ್ದಾರೆ. ಇಷ್ಟೊಂದು ಮಂದಿ ಕಂಪನಿಯೊಂದರ ಐಪಿಒ ಖರೀದಿಗೆ ಬಿಡ್‌ ಸಲ್ಲಿಸಿದ್ದು, ವಿಶ್ವದಲ್ಲೇ ಇದೇ ಮೊದಲು.

ಈ ಮೂಲಕ 30,213 ಕೋಟಿ ರು. ಮೌಲ್ಯದ ಈ ಐಪಿಒಗೆ 7.4 ಲಕ್ಷ ಕೋಟಿ ರು.ಗೂ ಹೆಚ್ಚಿನ ಬಿಡ್‌ ಸಲ್ಲಿಕೆಯಾಗಿದೆ.

ಈ ಹಿಂದೆ ವಾರೀ ಎನರ್ಜಿ ಐಪಿಒಗೆ 97 ಲಕ್ಷ ಅರ್ಜಿ ಸಲ್ಲಿಸಲಾಗಿತ್ತು. ಇದು ಈವರೆಗೆ ದಾಖಲೆಯಾಗಿತ್ತು. ಬಜಾಜ್‌ ಹೌಸಿಂಗ್‌ ಫೈನಾನ್ಸ್‌ ಐಪಿಒಗೆ 87 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು.

22.19 ಪಟ್ಟು ಹೆಚ್ಚು ಬಿಡ್‌:

ಈ ₹30,213 ಕೋಟಿ ಮೌಲ್ಯದ ಐಪಿಒ ಬುಧವಾರ ಆರಂಭವಾಗಿದ್ದು, ಶುಕ್ರವಾರ ಸಂಜೆ 7 ಗಂಟೆಯ ಹೊತ್ತಿಗೆ ಹೂಡಿಕೆದಾರರು 19.75 ಕೋಟಿ ಷೇರುಗಳಿಗೆ ಬದಲಾಗಿ 438.3 ಕೋಟಿ ಷೇರುಗಳಿಗೆ ಬಿಡ್ ಮಾಡಿದ್ದಾರೆ. ಅಂದರೆ 22.19 ಪಟ್ಟು ಬಿಡ್‌ ಸಲ್ಲಿಕೆಯಾಗಿವೆ.

ಅರ್ಹತೆ ಪಡೆದ ಸಾಂಸ್ಥಿಕ ಹೂಡಿಕೆದಾರರ (ಕ್ಯುಐಬಿ) ವಿಭಾಗದಲ್ಲಿ 55.96 ಪಟ್ಟು ಬಿಡ್‌ ಸಲ್ಲಿಕೆಯಾಗಿದ್ದರೆ, ಸಾಂಸ್ಥಿಕವಲ್ಲದ ಹೂಡಿಕೆದಾರರು (ಎನ್‌ಐಐ) 13.86 ಪಟ್ಟು, ಷೇರುದಾರರು 7.49 ಪಟ್ಟು, ಉದ್ಯೋಗಿಗಳು 2.86 ಪಟ್ಟು ಮತ್ತು ಚಿಲ್ಲರೆ ಹೂಡಿಕೆದಾರರಿಂದ 2.64 ಪಟ್ಟು ಬಿಡ್‌ ಸಲ್ಲಿಕೆಯಾಗಿದೆ.

28ಕ್ಕೆ ಷೇರು ವಿತರಣೆ:

ಬಿಡ್ಡಿಂಗ್‌ ಪ್ರಕ್ರಿಯೆ ಬುಧವಾರ ಶುಕ್ರವಾರದವರೆಗೆ ತೆರೆದಿದ್ದು, ಅ.26ರಂದು ಯಶಸ್ವಿ ಬಿಡ್‌ದಾರರಿಗೆ ಷೇರುಗಳ ವಿತರಣೆ ನಡೆಯಲಿದ್ದು, ಅ.28ರಂದು ಈ ಐಪಿಒ ಅಧಿಕೃತವಾಗಿ ಷೇರು ಮಾರುಕಟ್ಟೆಗೆ ಕಾಲಿಡಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಜ.1ರಿಂದ ವಾಟ್ಸಾಪ್‌, ಟೆಲಿಗ್ರಾಂಗೆ ಆ್ಯಕ್ಟಿವ್‌ ಸಿಮ್‌ ಕಡ್ಡಾಯ
ಪ್ರಿಯಾಂಕಾ ಪುತ್ರನ ಚಿತ್ರ ಪ್ರದರ್ಶನಕ್ಕೆ ಕೇರಳಂಗೆ ಆಹ್ವಾನ: ಬಿಜೆಪಿ ಆಕ್ರೋಶ