ತ್ರಿಭಾಷಾ ಸೂತ್ರಕ್ಕೆ ನನ್ನ ಬೆಂಬಲ ಇದೆ : ಕರ್ನಾಟಕದ ರಾಜ್ಯಸಭೆ ಸದಸ್ಯೆ ಸುಧಾ ಮೂರ್ತಿ

ಸಾರಾಂಶ

ದೇಶದಲ್ಲಿ ತ್ರಿಭಾಷಾ ಸೂತ್ರ ಕಾನೂನು ಅಳವಡಿಕೆ ಬಗ್ಗೆ ಪರ- ವಿರೋಧದ ಬಗ್ಗೆ ಚರ್ಚೆಯಾಗುತ್ತಿರುವ ನಡುವೆಯೇ ಕರ್ನಾಟಕದ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ‘ಒಬ್ಬರು ಹಲವು ಭಾಷೆಗಳನ್ನು ಕಲಿಯಬೇಕು’ ಎಂದಿದ್ದಾರೆ.

ನವದೆಹಲಿ: ದೇಶದಲ್ಲಿ ತ್ರಿಭಾಷಾ ಸೂತ್ರ ಕಾನೂನು ಅಳವಡಿಕೆ ಬಗ್ಗೆ ಪರ- ವಿರೋಧದ ಬಗ್ಗೆ ಚರ್ಚೆಯಾಗುತ್ತಿರುವ ನಡುವೆಯೇ ಕರ್ನಾಟಕದ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ‘ಒಬ್ಬರು ಹಲವು ಭಾಷೆಗಳನ್ನು ಕಲಿಯಬೇಕು’ ಎಂದಿದ್ದಾರೆ. 

ಬುಧವಾರ ಸಂಸತ್ತಿನ ಹೊರಗೆ ಸುದ್ದಿಗಾರರ ಜತೆ ಮಾತನಾಡಿದ ಸುಧಾ ಮೂರ್ತಿ, ‘ಒಬ್ಬರು ಬಹು ಭಾಷೆಗಳನ್ನು ಕಲಿಯಬೇಕು ಎಂಬುದು ನನ್ನ ನಿಲುವು. ನನಗೂ 7-8 ಭಾಷೆಗಳು ಗೊತ್ತು. ನಾನು ಕಲಿಯುವುದನ್ನು ಖುಷಿ ಪಡುತ್ತೇನೆ. ತ್ರಿಭಾಷಾ ಸೂತ್ರದಿಂದ ವಿದ್ಯಾರ್ಥಿಗಳು ಕೂಡ ಸಾಕಷ್ಟು ಕಲಿಯಬಹುದು’ ಎಂದರು. 

ತಮಿಳುನಾಡು ಸೇರಿ ಹಲವು ಭಾಷೆಗಳಲ್ಲಿ ಹಿಂದಿ ಹೇರಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದು, ದ್ವಿಭಾಷಾ ಸೂತ್ರಕ್ಕೆ ಕೂಗು ಕೇಳಿಬಂದಿದೆ. ಅದರ ನಡುವೆಯೇ ಸುಧಾ ಈ ಹೇಳಿಕೆ ನೀಡಿದ್ದಾರೆ.

Share this article