ಪರೀಕ್ಷೇಲಿ ಚಾಟ್‌ಜಿಪಿಟಿ ಬಳಕೆ:ಐಐಟಿ ವಿದ್ಯಾರ್ಥಿ ಆತ್ಮಹತ್ಯೆ

KannadaprabhaNewsNetwork |  
Published : Sep 20, 2026, 02:45 AM IST
ಐಐಟಿ  | Kannada Prabha

ಸಾರಾಂಶ

ಪರೀಕ್ಷೆಯಲ್ಲಿ ಚಾಟ್‌ಜಿಪಿಟಿ ಬಳಸಿ ಸಿಕ್ಕಿಬಿದ್ದಿದ್ದಕ್ಕೆ ನೊಂದು ಬಾಂಬೆ ಐಐಟಿಯ 22 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಇದು ಕ್ಯಾಂಪಸ್‌ನಲ್ಲಿ ಕಳೆದ 6 ತಿಂಗಳಲ್ಲಿ ನಡೆದ 3ನೇ ಆತ್ಮಹತ್ಯೆ.

- ಬಾಂಬೆ ಐಐಟಿಯಲ್ಲಿ 6 ತಿಂಗಳಲ್ಲಿ 3ನೇ ಘಟನೆ

- ಇನ್ನೂ ಎಷ್ಟು ಸಾವಾಗ್ಬೇಕು?: ದೀಪ್ಕೆ ಕಿಡಿ

ಮುಂಬೈ: ಪರೀಕ್ಷೆಯಲ್ಲಿ ಚಾಟ್‌ಜಿಪಿಟಿ ಬಳಸಿ ಸಿಕ್ಕಿಬಿದ್ದಿದ್ದಕ್ಕೆ ನೊಂದು ಬಾಂಬೆ ಐಐಟಿಯ 22 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಇದು ಕ್ಯಾಂಪಸ್‌ನಲ್ಲಿ ಕಳೆದ 6 ತಿಂಗಳಲ್ಲಿ ನಡೆದ 3ನೇ ಆತ್ಮಹತ್ಯೆ.

ಮಹಾರಾಷ್ಟ್ರದ ಯವಾತ್ಮಲ್‌ ಜಿಲ್ಲೆಯ ಸಾಹಿಲ್ ರವೀಂದ್ರ ವಕೋಡ್ ಐಐಟಿಯ ಪೊವೈ ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್‌ನಲ್ಲಿ ಸೀಲಿಂಗ್‌ ಫ್ಯಾನಿಗೆ ನೇಣು ಬಿಗಿದು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದನು. ಸ್ನೇಹಿತರು ಕೊಠಡಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ವೇಳೆ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಈತ ಬಾಂಬೆ ಐಐಟಿಯ ಎರಡನೇ ವರ್ಷದ ಬಿಟೆಕ್‌ ವಿದ್ಯಾರ್ಥಿಯಾಗಿದ್ದು ಪರೀಕ್ಷೆ ಸಂದರ್ಭದಲ್ಲಿ ಸಾಹಿಲ್‌ ಉತ್ತರಗಳನ್ನು ಚಾಟ್‌ಜಿಪಿಟಿ ಬಳಸಿ ಅಪ್ಲೋಡ್‌ ಮಾಡುವಾಗ ಸಿಕ್ಕಿಬಿದ್ದಿದ್ದನು. ಇದರಿಂದ ನೊಂದು ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಸಾಹಿಲ್‌ ಪೋಷಕರ ದೂರಿನ ಮೇರೆಗೆ ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

6 ತಿಂಗಳಲ್ಲಿ 3ನೇ ಸೂಸೈಡ್‌

ಇದು ಕ್ಯಾಂಪಸ್‌ನಲ್ಲಿ 6 ತಿಂಗಳಲ್ಲಿ ನಡೆದ 3ನೇ ಆತ್ಮಹತ್ಯೆ ಪ್ರಕರಣವಾಗಿದೆ. ಇದೀಗ ಮತ್ತೊಂದು ಘಟನೆ ಮರುಕಳಿಸಿದ್ದು, ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣವಾಯಿತು. ಐಐಟಿ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟಿಸಿದ್ದು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ಐಐಟಿ ಪ್ರತಿಕ್ರಿಯಿಸಿದ್ದು, ‘ವಿದ್ಯಾರ್ಥಿ ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್‌ ಬಳಸಿ ಸಿಕ್ಕಿಬಿದ್ದಿದ್ದನು, ಆದರೆ ಅವನ ವಿರುದ್ಧ ಶಿಸ್ತು ಕ್ರಮ ಕೈಗೊಂಡಿರಲಿಲ್ಲ’ ಎಂದಿದೆ.

ಇನ್ನೂ ಎಷ್ಟು ಸಾವಾಗ್ಬೇಕು: ದೀಪ್ಕೆ

ಈ ಘಟನೆಗೆ ಸಿಜೆಪಿ ಮುಖ್ಯಸ್ಥ ಅಭಿಜಿತ್ ದೀಪ್ಕೆ ಎಕ್ಸ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಬುಡಕಟ್ಟು ಪ್ರದೇಶ, ಮುಂಬೈನಂತಹ ಪ್ರದೇಶಗಳಲ್ಲಿಯೂ ವಿದ್ಯಾರ್ಥಿಗಳು ಸಾಯುತ್ತಿದ್ದಾರೆ. ಅವರ ಜೀವನ ಆದ್ಯತೆಯಾಗುವ ಮೊದಲು ಇನ್ನು ಎಷ್ಟು ವಿದ್ಯಾರ್ಥಿಗಳು ಸಾಯಬೇಕು?’ ಎಂದು ಪ್ರಶ್ನಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಗ್ರೀನ್‌ಲ್ಯಾಂಡ್ ಅಮೆರಿಕ ವಶ ಸನ್ನಿಹಿತ
ಹರಿದ್ವಾರದಲ್ಲಿ ಸದಾರಾಮ್‌ ಎಂದು ಹೆಸರು ಬದಲಿಸಿ ಕೋಲಿ ವಾಸ