ಯೋಧರ ಸುರಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಲು ನೆರವಾಗಬಲ್ಲ ವಿಶೇಷ ಶೂ ಒಂದನ್ನು ಇಂದೋರ್‌ನ ಐಐಟಿ ತಜ್ಞರ ತಂಡ ಅಭಿವೃದ್ಧಿಪಡಿಸಿದೆ.
ಇಂದೋರ್: ಯೋಧರ ಸುರಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಲು ನೆರವಾಗಬಲ್ಲ ವಿಶೇಷ ಶೂ ಒಂದನ್ನು ಇಂದೋರ್‌ನ ಐಐಟಿ ತಜ್ಞರ ತಂಡ ಅಭಿವೃದ್ಧಿಪಡಿಸಿದೆ. ಈ ಶೂ ಸ್ವಯಂ ವಿದ್ಯುತ್ ಶಕ್ತಿ ಉತ್ಪಾದಿಸುವುದರ ಜೊತೆಗೆ ಅವರಿರುವ ಸ್ಥಳವನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ.
ಪ್ರೊ.ಐ.ಎ ಪಳಿನಿ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಲಾಗಿರುವ ಈ ಮಾದರಿಯ ಹತ್ತು ಜೊತೆ ಶೂಗಳನ್ನು ಈಗಾಗಲೇ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ ಕಳುಹಿಸಲಾಗಿದೆ. ಪಾದರಕ್ಷೆಯ ಅಡಿಭಾಗದಲ್ಲಿ ಅಳವಡಿಸಲಾಗಿರುವ ಉಪಕರಣವು, ಯೋಧರು ಸೇರಿದಂತೆ ಯಾವುದೆ ವ್ಯಕ್ತಿ ಪ್ರತಿ ಹೆಜ್ಜೆ ಇಟ್ಟಾಗಲು ವಿದ್ಯುತ್ ಉತ್ಪಾದಿಸಬಲ್ಲದು. ಹೀಗೆ ಉತ್ಪಾದಿಸಿದ ವಿದ್ಯುತ್‌ನಿಂದ ಸಣ್ಣ ಉಪಕರಣಗಳನ್ನು ಬಳಸಬಹುದು. ಜೊತೆಗೆ ಜಿಪಿಎಸ್ ಮತ್ತು ರೇಡಿಯೋ ತರಂಗಾಂತರ ಗುರುತಿಸುವಿಕೆಯಿಂದ (ಆರ್‌ಎಫ್‌ಐಡಿ) ಅಗತ್ಯವಿರುವಾಗ ಅವರಿರುವ ಸ್ಥಳವನ್ನು ಪತ್ತೆ ಮಾಡಬಹುದು ಎಂದು ಐಐಟಿ ತಜ್ಞರ ತಂಡ ಹೇಳಿದೆ.
ಇದು ಯೋಧರಿಗೆ ಮಾತ್ರವಲ್ಲದೇ, ಮೆದುಳು ಸಂಬಂಧಿ ಕಾಯಿಲೆಗಳಿಂದ ಬಳಲುವ ವೃದ್ಧರು, ವಿದ್ಯಾರ್ಥಿಗಳು ಮತ್ತು ಪರ್ವತಾರೋಹಿಗಳಿರುವ ಸ್ಥಳವನ್ನು ಪತ್ತೆ ಮಾಡಬಹುದಾಗಿದ್ದು, ಕ್ರೀಡಾಪಟುಗಳ, ಕಾರ್ಖಾನೆಗಳಲ್ಲಿ ಕೆಲಸಗಾರರ ಹಾಜರಾತಿ ಮತ್ತು ಕೆಲಸವನ್ನು ಪರಿಶೀಲಿಸಲು ಸಹಕಾರಿಯಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.