2024ರಲ್ಲಿ ಭಾರತದ ಉತ್ತಮ ಆರ್ಥಿಕ ಪ್ರಗತಿ: ಐಎಂಎಫ್‌

KannadaprabhaNewsNetwork |  
Published : Jan 31, 2024, 02:18 AM ISTUpdated : Jan 31, 2024, 08:44 AM IST
ಐಎಂಎಫ್‌ | Kannada Prabha

ಸಾರಾಂಶ

2024ನೇ ವರ್ಷದಲ್ಲಿ ಆರ್ಥಿಕ ಪ್ರಗತಿಯನ್ನು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಅಂದಾಜಿಸಿದ್ದು, ಭಾರತದ ಆರ್ಥಿಕ ಪ್ರಗತಿ ದರ ಉತ್ತಮ ಎನ್ನಬಹುದಾದ ಶೇ.6.7ರಷ್ಟು ಇರಲಿದೆ

ನವದೆಹಲಿ: 2024ನೇ ವರ್ಷದಲ್ಲಿ ಆರ್ಥಿಕ ಪ್ರಗತಿಯನ್ನು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಅಂದಾಜಿಸಿದ್ದು, ಭಾರತದ ಆರ್ಥಿಕ ಪ್ರಗತಿ ದರ ಉತ್ತಮ ಎನ್ನಬಹುದಾದ ಶೇ.6.7ರಷ್ಟು ಇರಲಿದೆ ಎಂದು ಹೇಳಿದೆ.

ಇತರ ಎಲ್ಲಾ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕ ಪ್ರಗತಿ ಪ್ರಕಾಶಿಸುತ್ತಿದೆ. ಅಕ್ಟೋಬರ್‌ನಲ್ಲಿ ಶೇ.6.5ರ ಪ್ರಗತಿ ಅಂದಾಜಿಸಲಾಗಿತ್ತು. ಅದು ಈಗ ಶೇ.0.2ರಷ್ಟು ಹೆಚ್ಚಿದ್ದು, ಶೇ.6.7ರದ ದರದಲ್ಲಿ ಪ್ರಗತಿ ಕಾಣಬಹುದು. 

ಇದೇ ವೇಳೆ, ಜಾಗತಿಕ ಆರ್ಥಿಕ ಪ್ರಗತಿ ದರ ಸಹ ಶೇ.3.1ರಷ್ಟು ಇರಲಿದೆ ಎಂದು ಐಎಂಎಫ್‌ ಹೇಳಿದೆ. ಪ್ರಸ್ತುತ ಹಣದುಬ್ಬರ ಪ್ರಮಾಣ ಕಡಿಮೆ ಇರುವುದರಿಂದ ಆರ್ಥಿಕ ಪ್ರಗತಿ ದರ ಅಧಿಕವಾಗಿದೆ. 

ಅಮೆರಿಕ, ರಷ್ಯಾ, ಚೀನಾ ಮತ್ತು ಯುರೋಪಿಯನ್‌ ದೇಶಗಳಲ್ಲೂ ಸಹ ಆರ್ಥಿಕ ಪ್ರಗತಿಯಾಗಲಿದೆ ಎಂದು ಹೇಳಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೈಸೂರು ಸ್ಯಾಂಡಲ್ ಸೋಪು ಉತ್ಪನ್ನ : ದಾಖಲೆ ಬರೆದ ಕೆಎಸ್‌ಡಿಎಲ್‌
ಮೇಘಾಲಯ ಮೇಲಿಲ್ಲ ಬಾಂಗ್ಲಾ ಸಂಘರ್ಷ ಪರಿಣಾಮ : ವಿಜಯ್‌