ತಿರುಪತಿ ದೇಗುಲ ಟ್ರಸ್ಟಿಂದ ಮಂಗಳ ಸೂತ್ರ ಮಾರಾಟ!

KannadaprabhaNewsNetwork |  
Published : Jan 31, 2024, 02:17 AM ISTUpdated : Jan 31, 2024, 08:24 AM IST
Mangala Suthra

ಸಾರಾಂಶ

ವೆಂಕಟೇಶ್ವರನ ದರ್ಶನ ಪಡೆಯಲು ಬರುವ ನವದಂಪತಿಗಳಿಗೆ ಮಂಗಳ ಸೂತ್ರಗಳನ್ನು ಮಾರಲು ತಿರುಪತಿ ತಿರುಮಲ ದೇಗುಲ ಮಂಡಳಿ (ಟಿಟಿಡಿ) ನಿರ್ಧರಿಸಿದೆ.

ತಿರುಮಲ: ವೆಂಕಟೇಶ್ವರನ ದರ್ಶನ ಪಡೆಯಲು ಬರುವ ನವದಂಪತಿಗಳಿಗೆ ಮಂಗಳ ಸೂತ್ರಗಳನ್ನು ಮಾರಲು ತಿರುಪತಿ ತಿರುಮಲ ದೇಗುಲ ಮಂಡಳಿ (ಟಿಟಿಡಿ) ನಿರ್ಧರಿಸಿದೆ.

‘ಮಂಗಳ ಸೂತ್ರಗಳನ್ನು 5 ಮತ್ತು 10 ಗ್ರಾಂ ತೂಕದಲ್ಲಿ 4 ರಿಂದ 5 ವಿನ್ಯಾಸಗಳೊಂದಿಗೆ ತಯಾರಿಸಲಾಗುವುದು. ಇವುಗಳನ್ನು ನವದಂಪತಿಗಳು ದೇವರ ಆಶೀರ್ವಾದ ಪಡೆದ ನಂತರ ಅವರಿಗೆ ಮಾರಲು ನಿರ್ಣಯ ತೆಗೆದುಕೊಳ್ಳಲಾಗಿದೆ. 

ಆಯಾ ಸಮಯಕ್ಕೆ ಹಾಗೂ ತೂಕಕ್ಕೆ ಅನುಗುಣವಾಗಿ ದರ ನಿಗದಿಯಾಗುತ್ತದೆ’ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮಾರೆಡ್ಡಿ ತಿಳಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ, ‘ಅನೇಕ ವರ್ಷಗಳಿಂದ ಈವರೆಗೆ ಕಲ್ಯಾಣಮಸ್ತು ಕಾರ್ಯಕ್ರಮದ ಮೂಲಕ 32 ಸಾವಿರ ಬಡ ದಂಪತಿಗಳಿಗೆ ವಿವಾಹ ಮಾಡಿಸಲಾಗದೆ. ಆಗ ಅವರಿಗಷ್ಟೇ ಮಂಗಳಸೂತ್ರ ವಿತರಿಸಲಾಗಿತ್ತು. 

ಇವರು 17 ವರ್ಷಗಳಿಂದ ಮತಾಂತರಗೊಂಡಿಲ್ಲ. ಈಗ ಮಂಗಳ ಸೂತ್ರವನ್ನು ಮಾರುವ ಮೂಲಕ ಸನಾತನ ಧರ್ಮದ ಸಂಸ್ಕೃತಿಯನ್ನು ದಂಪತಿಗಳಲ್ಲಿ ಮತ್ತಷ್ಟು ಬಲಪಡಿಸಲು ತೀರ್ಮಾನಿಸಲಾಗಿದೆ’ ಎಂದು ತಿಳಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !