ಜಾರ್ಖಂಡ್‌ ರ್‍ಯಾಲಿಯಲ್ಲಿ ಹೇಮಂತ್, ಕೇಜ್ರಿಗೆ ಖಾಲಿ ಕುರ್ಚಿ ಇಟ್ಟು ಗೌರವ

ಸಾರಾಂಶ

ಇಂಡಿಯಾ ಕೂಟದ ಉಲ್ಗುಲಾನ್‌ ನ್ಯಾಯ್‌ ಮಹಾರ್‍ಯಾಲಿಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ಬಂಧಿತರಾಗಿರುವ ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಖಾಲಿ ಕುರ್ಚಿಗಳನ್ನು ಇಟ್ಟು ಗೌರವ ಸೂಚಿಸಲಾಗಿದೆ.

 ರಾಂಚಿ: ಆಡಳಿತಾರೂಢ ಜೆಎಂಎಂ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಇಂಡಿಯಾ ಕೂಟದ ಉಲ್ಗುಲಾನ್‌ ನ್ಯಾಯ್‌ ಮಹಾರ್‍ಯಾಲಿಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ಬಂಧಿತರಾಗಿರುವ ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಖಾಲಿ ಕುರ್ಚಿಗಳನ್ನು ಇಟ್ಟು ಗೌರವ ಸೂಚಿಸಲಾಗಿದೆ.

ಇದೇ ವೇಳೆ ವೇದಿಕೆಯಲ್ಲಿ ಹೇಮಂತ್‌ ಪತ್ನಿ ಕಲ್ಪನಾ ಮತ್ತು ಕೇಜ್ರಿವಾಲ್‌ ಪತ್ನಿ ಸುನಿತಾ ಅವರಿಗೆ ಅವಕಾಶ ಕಲ್ಪಿಸಲಾಗಿತ್ತು. ಇದರ ಜೊತೆಗೆ ಜಮ್ಮು ಕಾಶ್ಮೀರದ ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಫಾರೂಖ್‌ ಅಬ್ದುಲ್ಲಾ, ಜಾರ್ಖಂಡ್‌ ಮುಖ್ಯಮಂತ್ರಿ ಶಿಬು ಸೊರೇನ್‌, ಸಮಾಜವಾದಿ ಪಕ್ಷದ ಅಖಿಲೇಶ್‌, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ವೇದಿಕೆಯನ್ನು ಅಲಂಕರಿಸಿದ್ದರು.

ಸಾವಿರಾರು ಕಾರ್ಯಕರ್ತರು ಹೇಮಂತ್‌ ಸೋರೆನ್‌ ಅವರ ಮುಖವಾಡವನ್ನು ಧರಿಸಿ ಜಾರ್ಖಂಡ್‌ ಝಕೇಗಾ ನಹಿ (ಜಾರ್ಖಂಡ್‌ ತಲೆ ಬಾಗುವುದಿಲ್ಲ) ಎಂದು ಘೋಷಣೆ ಕೂಗುತ್ತಿದ್ದುದು ಗಮನ ಸೆಳೆಯಿತು.

Share this article