ಸಿಕ್ಕ ವಾಹನ ಏರಿಇರಾನ್‌ ದೇಶಬಿಡಿ : ಭಾರತೀಯರಿಗೆಸರ್ಕಾರ ಸೂಚನೆ

KannadaprabhaNewsNetwork |  
Published : Feb 24, 2026, 03:00 AM IST
Iran

ಸಾರಾಂಶ

‘ಇರಾನ್ ಹಾಗೂ ಅಮೆರಿಕ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ ಅಲ್ಲಿರುವ ಭಾರತೀಯರು ಭದ್ರತೆ ದೃಷ್ಟಿಯಿಂದ ಲಭ್ಯವಿರುವ ಸಾರಿಗೆ ಮಾರ್ಗಗಳನ್ನು ಬಳಸಿಕೊಂಡು ದೇಶ ತೊರೆಯಬೇಕು’ ಭಾರತೀಯ ರಾಯಭಾರಿ ಕಚೇರಿ ಸೂಚಿಸಿದೆ.

 ನವದೆಹಲಿ :  ‘ಇರಾನ್ ಹಾಗೂ ಅಮೆರಿಕ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ ಅಲ್ಲಿರುವ ಭಾರತೀಯರು ಭದ್ರತೆ ದೃಷ್ಟಿಯಿಂದ ಲಭ್ಯವಿರುವ ಸಾರಿಗೆ ಮಾರ್ಗಗಳನ್ನು ಬಳಸಿಕೊಂಡು ದೇಶ ತೊರೆಯಬೇಕು’ ಭಾರತೀಯ ರಾಯಭಾರಿ ಕಚೇರಿ ಸೂಚಿಸಿದೆ.

ಜ.5ರಂದು ಇರಾನ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಾಗ ಎಚ್ಚರಿಕೆ

ಜ.5ರಂದು ಇರಾನ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಾಗ ಭಾರತೀಯರಿಗೆ ರಾಯಭಾರಿ ಕಚೇರಿ, ಪ್ರಯಾಣ ಎಚ್ಚರಿಕೆ ನೀಡಿತ್ತು. ಇದೀಗ ಇರಾನ್‌ ಮೇಲೆ ಅಮೆರಿಕ ಯುದ್ಧ ಸಾರುವ ಭೀತಿ ಸೃಷ್ಟಿ ಆಗಿರುವ ಕಾರಣ ಹೊಸ ಸಲಹಾವಳಿ ಬಿಡುಗಡೆ ಮಾಡಿದೆ. ಸದ್ಯ ಇರಾನ್‌ನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 10,000 ಭಾರತೀಯರಿದ್ದಾರೆ.

‘ಇರಾನ್‌ನಲ್ಲಿನ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಲ್ಲಿರುವ ಭಾರತೀಯ ಪ್ರಜೆಗಳು ವಾಣಿಜ್ಯ ವಿಮಾನ ಸೇರಿದಂತೆ ಲಭ್ಯವಿರುವ ಸಾರಿಗೆ ವಿಧಾನಗಳ ಮೂಲಕ ಇರಾನ್‌ ಬಿಟ್ಟು ತೆರಳಬೇಕು. ಪ್ರತಿಭಟನೆ ನಡೆಯುತ್ತಿರುವ ಸ್ಥಳಗಳಿಂದ ದೂರವಿರಬೇಕು. ಪಾಸ್‌ಪೋರ್ಟ್‌, ಗುರುತಿನ ಚೀಟಿ ಸೇರಿದಂತೆ ಪ್ರಯಾಣ ಮತ್ತು ವಲಸೆ ದಾಖಲೆಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕದಲ್ಲಿರಬೇಕು’ ಎಂದು ಅದು ಸೂಚಿಸಿದೆ.

ಲೆಬನಾನ್‌ನಲ್ಲಿನ ಅಮೆರಿಕ ಸಿಬ್ಬಂದಿ ತೆರವು:

ಇರಾನ್‌ ಮೇಲೆ ದಾಳಿ ಸಾಧ್ಯತೆ ಬೆನ್ನಲ್ಲೇ ಅಮೆರಿಕವು ಪಕ್ಕದ ಲೆಬನಾನ್‌ನಲ್ಲಿನ ತನ್ನ ರಾಯಭಾರ ಕಚೇರಿ ಸಿಬ್ಬಂದಿಯನ್ನು ಅಮೆರಿಕ ತೆರವು ಮಾಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

26ಕ್ಕೆ ರಶ್ಮಿಕಾ-ವಿಜಯ್‌ ವಿವಾಹ : ಉದಯಪುರಕ್ಕೆ ಆಗಮನ
ದೇಶದ ಮೊದಲ ಉಗ್ರ ವಿರೋಧಿ ನೀತಿ ಪ್ರಹಾರ್‌ ಬಿಡುಗಡೆ