ಹಿರಿಯ ಟಿಎಂಸಿ ನಾಯಕ ಮುಕುಲ್‌ ರಾಯ್‌ ಇನ್ನಿಲ್ಲ

KannadaprabhaNewsNetwork |  
Published : Feb 24, 2026, 03:00 AM IST
Mukul Roy

ಸಾರಾಂಶ

ಟಿಎಂಸಿ ಪಕ್ಷದ ಸ್ಥಾಪಕ ಸದಸ್ಯರಾಗಿದ್ದ ಮಾಜಿ ರೈಲ್ವೆ ಸಚಿವ ಮುಕುಲ್‌ ರಾಯ್‌ (71) ಅವರು ಸೋಮವಾರ ನಸುಕಿನಲ್ಲಿ ನಿಧನರಾದರು.ಈ ಬಗ್ಗೆ ರಾಯ್‌ ಅವರ ಪುತ್ರ ಮಾಹಿತಿ ನೀಡಿದ್ದು, ‘ಕಳೆದ ಕೆಲ ದಿನಗಳಿಂದ ಕೋಮಾದಲ್ಲಿದ್ದ ಮುಕುಲ್‌ ಅವರನ್ನು ಕೋಲ್ಕತಾದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು.

 ಕೋಲ್ಕತಾ :  ಟಿಎಂಸಿ ಪಕ್ಷದ ಸ್ಥಾಪಕ ಸದಸ್ಯರಾಗಿದ್ದ ಮಾಜಿ ರೈಲ್ವೆ ಸಚಿವ ಮುಕುಲ್‌ ರಾಯ್‌ (71) ಅವರು ಸೋಮವಾರ ನಸುಕಿನಲ್ಲಿ ನಿಧನರಾದರು.

ಈ ಬಗ್ಗೆ ರಾಯ್‌ ಅವರ ಪುತ್ರ ಮಾಹಿತಿ ನೀಡಿದ್ದು, ‘ಕಳೆದ ಕೆಲ ದಿನಗಳಿಂದ ಕೋಮಾದಲ್ಲಿದ್ದ ಮುಕುಲ್‌ ಅವರನ್ನು ಕೋಲ್ಕತಾದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಅಲ್ಲಿ ಸೋಮವಾರ ನಸುಕಿನ 1:30ರ ಸುಮಾರಿಗೆ ಹೃದಯ ಸ್ತಂಭನದಿಂದ ವಿಧಿವಶರಾದರು’ ಎಂದು ತಿಳಿಸಿದ್ದಾರೆ.

ರಾಜಕೀಯ ಚಾಣಕ್ಯ:

1998ರಲ್ಲಿ ಟಿಎಂಸಿ ಪಕ್ಷ ಸ್ಥಾಪನೆಯಾದಾಗ ಅದರ ಭಾಗವಾಗಿದ್ದ ರಾಯ್‌, ಯುಪಿಎ ಸರ್ಕಾರದ ಅವಧಿಯಲ್ಲಿ 2011ರಲ್ಲಿ ರೈಲ್ವೆ ಸಚಿವರಾಗಿದ್ದರು. ಪಶ್ಚಿಮ ಬಂಗಾಳದಿಂದ 2 ಬಾರಿ ರಾಜ್ಯಸಭೆಗೂ ಆಯ್ಕೆಯಾಗಿದ್ದರು.

ನಂ.2 ಟಿಎಂಸಿ ನಾಯಕ

ರಾಜಕೀಯ ಚಾಣಕ್ಯ ಎಂದೇ ಎಂದೇ ಖ್ಯಾತಿ ಪಡೆದಿದ್ದ ಅವರು, ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿ ಅವರ ನಂತರದ ನಂ.2 ಟಿಎಂಸಿ ನಾಯಕ ಎನ್ನಿಸಿಕೊಂಡಿದ್ದರು.

ಆದರೆ ದೀದಿ ಜತೆ ಮುನಿಸಿಕೊಂಡು 2017ರಲ್ಲಿ ಬಿಜೆಪಿ ಸೇರಿದ ರಾಯ್‌, 2021ರಲ್ಲಿ ಪಶ್ಚಿಮ ಬಂಗಾಳದ ಕೃಷ್ಣಾನಗರ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿದ್ದರು. ಆದರೆ, ಚುನಾವಣೆ ಬಳಿಕ ಬಿಜೆಪಿ ಜತೆ ಮುನಿಸಿಕೊಂಡು ಮತ್ತೆ ಟಿಎಂಸಿಗೆ ಮರಳಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

26ಕ್ಕೆ ರಶ್ಮಿಕಾ-ವಿಜಯ್‌ ವಿವಾಹ : ಉದಯಪುರಕ್ಕೆ ಆಗಮನ
ದೇಶದ ಮೊದಲ ಉಗ್ರ ವಿರೋಧಿ ನೀತಿ ಪ್ರಹಾರ್‌ ಬಿಡುಗಡೆ