ರಾಷ್ಟ್ರಪತಿ ಭವನದ ಲೂಟನ್ಸ್‌ ಮೂರ್ತಿಯ ಜಾಗಕ್ಕೆ ರಾಜಾಜಿ

KannadaprabhaNewsNetwork |  
Published : Feb 24, 2026, 03:00 AM IST
Rajaji

ಸಾರಾಂಶ

ರಾಷ್ಟ್ರಪತಿ ಭವನದಲ್ಲಿದ್ದ ಬ್ರಿಟಿಷ್‌ ವಾಸ್ತುಶಿಲ್ಪಿ ಎಡ್ವಿನ್ ಲೂಟನ್ಸ್‌ ಅವರ ಪ್ರತಿಮೆಯ ಜಾಗದಲ್ಲಿ, ಭಾರತದ ಏಕೈಕ ಗವರ್ನರ್‌ ಜನರಲ್‌ ಆಗಿದ್ದ ರಾಜಗೋಪಾಲಾಚಾರಿ (ರಾಜಾಜಿ) ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಅದನ್ನು ಸೋಮವಾರ ರಾಷ್ಟ್ರಪ್ರತಿ ದ್ರೌಪದಿ ಮುರ್ಮು ಅವರು ಅನಾವರಣಗೊಳಿಸಿದರು.

ನವದೆಹಲಿ: ರಾಷ್ಟ್ರಪತಿ ಭವನದಲ್ಲಿದ್ದ ಬ್ರಿಟಿಷ್‌ ವಾಸ್ತುಶಿಲ್ಪಿ ಎಡ್ವಿನ್ ಲೂಟನ್ಸ್‌ ಅವರ ಪ್ರತಿಮೆಯ ಜಾಗದಲ್ಲಿ, ಭಾರತದ ಏಕೈಕ ಗವರ್ನರ್‌ ಜನರಲ್‌ ಆಗಿದ್ದ ರಾಜಗೋಪಾಲಾಚಾರಿ (ರಾಜಾಜಿ) ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಅದನ್ನು ಸೋಮವಾರ ರಾಷ್ಟ್ರಪ್ರತಿ ದ್ರೌಪದಿ ಮುರ್ಮು ಅವರು ಅನಾವರಣಗೊಳಿಸಿದರು.

ವಸಾಹತುಶಾಹಿ ಕುರುಹುಗಳನ್ನು ತೆಗೆದುಹಾಕುವ ಉದ್ದೇಶ

ವಸಾಹತುಶಾಹಿ ಕುರುಹುಗಳನ್ನು ತೆಗೆದುಹಾಕುವ ಉದ್ದೇಶದಿಂದ, ಬ್ರಿಟಿಷರಾಗಿದ್ದ ಲೂಟನ್ಸ್ ಅವರ ಪ್ರತಿಮೆಯನ್ನು ತೆರವುಗೊಳಿಸಲಾಗಿದೆ. ಭಾರತದ ಸಂಸ್ಕೃತಿ, ಪರಂಪರೆ, ಕಾಲಾತೀತ ಸಂಪ್ರದಾಯಗಳ ಶ್ರೀಮಂತಿಕೆಯನ್ನು ಹೆಮ್ಮೆಯಿಂದ ಅಪ್ಪಿಕೊಳ್ಳುವುದು ಮತ್ತು ದೇಶಕ್ಕೆ ಅಸಾಧಾರಣ ಕೊಡುಗೆ ನೀಡಿದವರನ್ನು ಗೌರವಿಸುವ ಸಲುವಾಗಿ ರಾಜಾಜಿಯವರ ಪ್ರತಿಮೆಗೆ ಸ್ಥಾನ ನೀಡಲಾಗಿದೆ.

ಪ್ರಸಿದ್ಧ ಬ್ರಿಟಿಷ್ ವಾಸ್ತುಶಿಲ್ಪಿ ಮತ್ತು ಪಟ್ಟಣ ಯೋಜಕ

ಪ್ರಸಿದ್ಧ ಬ್ರಿಟಿಷ್ ವಾಸ್ತುಶಿಲ್ಪಿ ಮತ್ತು ಪಟ್ಟಣ ಯೋಜಕರಾಗಿದ್ದ ಲೂಟನ್ಸ್ ಅವರು ದೆಹಲಿಯ ಪ್ರಮುಖ ಸ್ಮಾರಕ ಕಟ್ಟಡಗಳ ನಿರ್ಮಾತೃ.

ಲೂಟನ್ಸ್ ಮರಿಮೊಮ್ಮಗ ಬೇಸರ: ಈ ಬೆಳವಣಿಗೆಗೆ ಲೂಟನ್ಸ್ ಅವರ ಮರಿಮೊಮ್ಮಗ ಮ್ಯಾಟ್ ರಿಡ್ಲಿ ಪ್ರತಿಕ್ರಿಯಿಸಿದ್ದು, ‘ನನ್ನ ಮುತ್ತಜ್ಜನ ವಿನ್ಯಾಸಗೊಳಿಸಿದ ದೆಹಲಿಯ ರಾಷ್ಟ್ರಪತಿ ಭವನದಿಂದ ಅವರ ಪ್ರತಿಮೆಯನ್ನು ತೆಗೆದುಹಾಕಲಾಗುತ್ತಿದೆ ಎಂದು ತಿಳಿದು ದುಃಖವಾಯಿತು. ಕಳೆದ ವರ್ಷವಷ್ಟೇ ನಾನು ಅದನ್ನು ನೋಡಿದ್ದೆ’ ಎಂದು ಬೇಸರಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

26ಕ್ಕೆ ರಶ್ಮಿಕಾ-ವಿಜಯ್‌ ವಿವಾಹ : ಉದಯಪುರಕ್ಕೆ ಆಗಮನ
ದೇಶದ ಮೊದಲ ಉಗ್ರ ವಿರೋಧಿ ನೀತಿ ಪ್ರಹಾರ್‌ ಬಿಡುಗಡೆ