ನವದೆಹಲಿ: ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆ ವಿಚಾರವಾಗಿ ಭಾರತ ಕೆನಡಾ ಸಂಬಂಧ ಹಳಸಿದ ನಡುವೆಯೇ ಕೇಂದ್ರ ಗೃಹ ಸಚಿವಾಲಯವು ಕೆನಡಾ ಮೂಲದ ಮತ್ತೊಬ್ಬ ಖಲಿಸ್ತಾನಿಗೆ ಉಗ್ರಪಟ್ಟ ಕಟ್ಟಿದೆ. ಗ್ಯಾಂಗ್‌ಸ್ಟರ್ ಲಖ್ಬಿರ್ ಸಿಂಗ್ ಲಂಡಾನನ್ನು ಭಯೋತ್ಪಾದಕ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ಜೊತೆಗೆ ಪಂಜಾಬ್‌ನ ಪೊಲೀಸ್ ಠಾಣೆ ಮೇಲಿನ ದಾಳಿಯಲ್ಲಿಯೂ ಆರೋಪಿಯಾಗಿದ್ದ. ಜೊತೆಗೆ ಭಾರತದ ನಾನಾ ಭಾಗಗಳಲ್ಲಿ ಉಗ್ರ ಕಾರ್ಯ ನಡೆಸುತ್ತಿದ್ದ. ಇದರೊಂದಿಗೆ ವಿದೇಶಗಳಿಂದ ಅತ್ಯಾಧುನಿಕ ಶಸ್ತ್ರಗಳ ಪೂರೈಕೆ, ದರೋಡೆ, ಸುಲಿಗೆ, ಕೊಲೆ, ಮಾದಕ ವಸ್ತುಗಳ ಸಾಗಾಟ ಸೇರಿ ಹಲವು ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದ.
ಇವನ ಪಂಜಾಬ್ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆಗಸ್ಟ್‌ನಲ್ಲಿ ಎನ್‌ಐಎ ವಿಶೇಷ ನ್ಯಾಯಾಲಯ ಆದೇಶಿಸಿತ್ತು.