ಭಾರತೀಯರ ಜೀವಿತಾವಧಿ ಭಾರಿ ಏರಿಕೆ ಈಗ 67.7 ವರ್ಷ

KannadaprabhaNewsNetwork |  
Published : Mar 15, 2024, 01:15 AM ISTUpdated : Mar 15, 2024, 08:56 AM IST
ತಲಾದಾಯ | Kannada Prabha

ಸಾರಾಂಶ

ಭಾರತೀಯರ ಸರಾಸರಿ ಜೀವಿತಾವಧಿ ಹಾಗೂ ತಲಾದಾಯ ಏರಿಕೆಯ ಪ್ರಮಾಣ ‘ಅದ್ಭುತವಾಗಿದೆ’ ಎಂದು ವಿಶ್ವಸಂಸ್ಥೆಯ ಮಾನವಾಭಿವೃದ್ಧಿ ಸೂಚ್ಯಂಕ (ಎಚ್‌ಡಿಐ) ವರದಿ ಶ್ಲಾಘಿಸಿದೆ.

ನವದೆಹಲಿ: ಭಾರತೀಯರ ಸರಾಸರಿ ಜೀವಿತಾವಧಿ ಹಾಗೂ ತಲಾದಾಯ ಏರಿಕೆಯ ಪ್ರಮಾಣ ‘ಅದ್ಭುತವಾಗಿದೆ’ ಎಂದು ವಿಶ್ವಸಂಸ್ಥೆಯ ಮಾನವಾಭಿವೃದ್ಧಿ ಸೂಚ್ಯಂಕ (ಎಚ್‌ಡಿಐ) ವರದಿ ಶ್ಲಾಘಿಸಿದೆ.

2023ನೇ ಸಾಲಿನ ಎಚ್‌ಡಿಐ ವರದಿಯನ್ನು ವಿಶ್ವಸಂಸ್ಥೆ ಬಿಡುಗಡೆ ಮಾಡಿದ್ದು, ಅದರಲ್ಲಿ 2022ರಲ್ಲಿ ಉಂಟಾದ ಭಾರತದ ಪ್ರಗತಿಗೆ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದೆ.

2021ರಲ್ಲಿ ಭಾರತೀಯರ ಸರಾಸರಿ ಜೀವಿತಾವಧಿ 62.7 ವರ್ಷವಿತ್ತು. ಅದು ಒಂದೇ ವರ್ಷದಲ್ಲಿ 67.7ಕ್ಕೆ ಏರಿಕೆಯಾಗಿದೆ. ಹಾಗೆಯೇ, ಈ ಅವಧಿಯಲ್ಲಿ ಭಾರತೀಯರ ಸರಾಸರಿ ತಲಾದಾಯ ವರ್ಷಕ್ಕೆ 5.75 ಲಕ್ಷ ರು.ಗೆ ಏರಿಕೆಯಾಗಿದೆ. 

ಏರಿಕೆಯ ಪ್ರಮಾಣ ಶೇ.6.3ರಷ್ಟಿದೆ ಎಂದು ವರದಿಯಲ್ಲಿ ಹೇಳಲಾಗಿದೆ.ಒಟ್ಟಾರೆ ಎಚ್‌ಡಿಐ ಸೂಚ್ಯಂಕದಲ್ಲಿ ಜಗತ್ತಿನ 193 ದೇಶಗಳ ಪೈಕಿ ಭಾರತ 134ನೇ ಸ್ಥಾನದಲ್ಲಿದೆ. 

ಇದರ ಪ್ರಕಾರ ಭಾರತದ ಮಾನವಾಭಿವೃದ್ಧಿ ಸೂಚ್ಯಂಕವು ಮಧ್ಯಮ ಸ್ತರದಲ್ಲಿದೆ. ಅಂಕಿಅಂಶದ ದೃಷ್ಟಿಯಲ್ಲಿ ಭಾರತದ ಎಚ್‌ಡಿಐ ಸೂಚ್ಯಂಕ 0.644ರಷ್ಟಿದೆ ಎಂದು ವರದಿ ತಿಳಿಸಿದೆ.

‘2021ರಿಂದ 2022ರ ಅವಧಿಯಲ್ಲಿ ಭಾರತದ ಮಾನವಾಭಿವೃದ್ಧಿ ಸೂಚ್ಯಂಕ ಅದ್ಭುತವಾದ ಪ್ರಗತಿ ಸಾಧಿಸಿದೆ. 1990ರಿಂದ ಈವರೆಗೆ ಭಾರತೀಯರ ಜೀವಿತಾವಧಿ 9.1 ವರ್ಷದಷ್ಟು ಹೆಚ್ಚಾಗಿದೆ. 

ಭಾರತೀಯರು ಶಿಕ್ಷಣ ಪಡೆಯುವ ವರ್ಷಗಳ ಅವಧಿ 4.6 ವರ್ಷದಷ್ಟು ಹೆಚ್ಚಾಗಿದೆ. ಲಿಂಗಾನುಪಾತದ ಕೊರತೆಯನ್ನು ತುಂಬಿಕೊಳ್ಳುವಲ್ಲಿಯೂ ಭಾರತದ ಪ್ರಗತಿ ಜಾಗತಿಕ ಸರಾಸರಿಗಿಂತ ಉತ್ತಮವಾಗಿದೆ. 

ಹೆರಿಗೆ ಸಂಬಂಧಿ ಆರೋಗ್ಯ ಸೇವೆಗಳು ಭಾರತದಲ್ಲಿ ಜಾಗತಿಕ ಸರಾಸರಿಗಿಂತ ಉತ್ತಮವಾಗಿವೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ಕೇರಳದ 2 ರು. ಡಾಕ್ಟರ್ ನಿಧನ