ಯುರೋಪ್‌ನಲ್ಲಿ ಭಾರತದ ಶೇ.93ರಷ್ಟು ರಫ್ತು ಇನ್ನು ಡ್ಯೂಟಿ ಫ್ರೀ

KannadaprabhaNewsNetwork |  
Published : Jan 28, 2026, 01:15 AM IST
27ಕೆಡಿವಿಜಿ8-ದಾವಣಗೆರೆ ತಾ. ಗುಮ್ಮನೂರು ಗ್ರಾಮದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹರೀಶ ಹಾಗೂ ಈತನಿಗೆ ತನ್ನ ಸೋದರಿ ಮಗಳನ್ನು ಮದುವೆ ಮಾಡಿಸಿದ್ದ ಆನೆಕೊಂಡದ ವಾಸಿ ರುದ್ರೇಶ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. | Kannada Prabha

ಸಾರಾಂಶ

ಭಾರತ ಮತ್ತು ಐರೋಪ್ಯ ಒಕ್ಕೂಟ ನಡುವಿನ ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ ಯುರೋಪಿಗೆ ರಫ್ತಾಗುವ ಭಾರತದ ಶೇ.93ರಷ್ಟು ಉತ್ಪನ್ನಗಳು ಡ್ಯೂಟಿ ಫ್ರೀ (ಸುಂಕ ರಹಿತ) ಆಗಲಿವೆ. ಅದೇ ರೀತಿ ಯುರೋಪ್‌ನಿಂದ ಆಮದಾಗುವ ದುಬಾರಿ ಐಷಾರಾಮಿ ಕಾರುಗಳು, ಔಷಧ, ವೈನ್‌, ಮದ್ಯ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ಗಣನೀಯವಾಗಿ ತಗ್ಗಲಿದೆ.

- ಭಾರತದ ಸಾಗರ ಉತ್ಪನ್ನ, ಕೆಮಿಕಲ್ಸ್‌, ಆಭರಣಗಳಿಗೆ ಶೂನ್ಯ ಸುಂಕ- ಬೆನ್ಜ್‌, ಆಡಿ, ಬಿಎಂಡಬ್ಲ್ಯುನಂಥ ಯುರೋಪ್‌ ಕಾರುಗಳ ಸುಂಕ ಇಳಿಕೆನವದೆಹಲಿ: ಭಾರತ ಮತ್ತು ಐರೋಪ್ಯ ಒಕ್ಕೂಟ ನಡುವಿನ ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ ಯುರೋಪಿಗೆ ರಫ್ತಾಗುವ ಭಾರತದ ಶೇ.93ರಷ್ಟು ಉತ್ಪನ್ನಗಳು ಡ್ಯೂಟಿ ಫ್ರೀ (ಸುಂಕ ರಹಿತ) ಆಗಲಿವೆ. ಅದೇ ರೀತಿ ಯುರೋಪ್‌ನಿಂದ ಆಮದಾಗುವ ದುಬಾರಿ ಐಷಾರಾಮಿ ಕಾರುಗಳು, ಔಷಧ, ವೈನ್‌, ಮದ್ಯ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ಗಣನೀಯವಾಗಿ ತಗ್ಗಲಿದೆ.ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತ ಮತ್ತು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿರುವ ಐರೋಪ್ಯ ಒಕ್ಕೂಟದ ನಡುವೆ ಅಂತಿಮಗೊಂಡ ಮುಕ್ತವ್ಯಾಪಾರ ಒಪ್ಪಂದ ಜಾರಿಯಾದ ಬಳಿಕ ಎರಡೂ ದೇಶಗಳ ನಡುವಿನ ವ್ಯಾಪಾರ-ವಹಿವಾಟಿನಲ್ಲಿ ಭಾರೀ ಏರಿಕೆ ಕಾಣುವ ನಿರೀಕ್ಷೆ ಇದೆ.ಈ ಒಪ್ಪಂದದಿಂದಾಗಿ ಭಾರತದ ಶೇ.99 ವಸ್ತುಗಳ ರಫ್ತಿಗೆ ಯುರೋಪಿಯನ್‌ ಮಾರುಕಟ್ಟೆಯಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಈ ಒಪ್ಪಂದ ಜಾರಿಯಾದ ಬಳಿಕ ಆಟೋ ಮತ್ತು ಸ್ಟೀಲ್‌ ಹೊರತುಪಡಿಸಿ ಭಾರತದ ಶೇ.93ಕ್ಕಿಂತಲೂ ಹೆಚ್ಚಿನ ರಫ್ತು ಉತ್ಪನ್ನಗಳು ಶೂನ್ಯ ಸುಂಕದೊಂದಿಗೆ ಯುರೋಪಿಯನ್‌ ಮಾರುಕಟ್ಟೆ ಪ್ರವೇಶಿಸಬಹುದಾಗಿದೆ. ಉಳಿದ ಶೇ.6ಕ್ಕಿಂತಲೂ ಹೆಚ್ಚು ರಫ್ತು ಉತ್ಪನ್ನಗಳಿಗೆ ತೆರಿಗೆ ಕಡಿತ ಮತ್ತು ಕೋಟಾ ಆಧಾರಿತ ಸುಂಕ ವಿನಾಯ್ತಿಯ ಲಾಭ ಸಿಗಲಿದೆ ಎಂದು ವಾಣಿಜ್ಯ ಸಚಿವ ಪೀಯೂಷ್‌ ಗೋಯೆಲ್‌ ಹೇಳಿದ್ದಾರೆ.ಸರಾಸರಿ ತೆರಿಗೆ ಶೇ.0.1ಕ್ಕೆ ಇಳಿಕೆ: ಭಾರತದಿಂದ ಆಮದಾಗುವ ಉತ್ಪನ್ನಗಳ ಮೇಲೆ ಸದ್ಯ ಯುರೋಪಿಯನ್‌ ಯೂನಿಯನ್‌ ಸರಾಸರಿ ಶೇ.3.8ರಷ್ಟು ತೆರಿಗೆ ವಿಧಿಸುತ್ತಿದೆ. ಎಫ್‌ಟಿಎ ಬಳಿಕ ಇದು ಶೇ.0.1ಕ್ಕೆ ಇಳಿಯಲಿದೆ. ಭಾರತದಿಂದ ರಫ್ತಾಗುತ್ತಿರುವ ಕೆಲ ಉತ್ನನ್ನಗಳು ಮುಖ್ಯವಾಗಿ ಸಾಗರ ಉತ್ಪನ್ನಗಳು (ಶೇ.0-26), ರಾಸಾಯನಿಕಗಳು(ಶೇ.12.8ರ ವರೆಗೆ), ಪ್ಲ್ಯಾಸ್ಟಿಕ್‌ ಮತ್ತು ರಬ್ಬರ್‌(ಶೇ.6.5ರ ವರೆಗೆ), ಚರ್ಮ ಮತ್ತು ಚಪ್ಪಲಿಗಳು(ಶೇ.17ರ ವರೆಗೆ), ಬಟ್ಟೆ, ಜವುಳಿ(ಶೇ.12ರ ವರೆಗೆ), ರತ್ನ, ಆಭರಣಗಳು(ಶೇ.4ರ ವರೆಗೆ), ರೈಲ್ವೆ, ವಿಮಾನ, ಹಡಗುಗಳು, ಬೋಟ್‌(ಶೇ.7.7ರ ವರೆಗೆ), ಪೀಠೋಪಕರಣಗಳು, ಹಗುರ ಗ್ರಾಹಕ ಉತ್ಪನ್ನಗಳು(ಶೇ.10.5ರ ವರೆಗೆ), ಆಟಿಕೆಗಳು(ಶೇ.4.7ರ ವರೆಗೆ) ಮತ್ತು ಕ್ರೀಡಾ ಉತ್ಪನ್ನಗಳ(ಶೇ.4.7ರ ವರೆಗೆ) ಮೇಲೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದೆ. ಆದರೆ, ಈ ಒಪ್ಪಂದದ ಬಳಿಕ ಇವುಗಳಿಗೆ ಡ್ಯೂಟಿ ಫ್ರೀ ಆಗಿ ಯುರೋಪಿಯನ್‌ ಮಾರುಕಟ್ಟೆ ಪ್ರವೇಶಿಸಬಹುದಾಗಿದೆ. ಇದಕ್ಕೆ ಪ್ರತಿಫಲವಾಗಿ ಯುರೋಪಿಯನ್‌ ಯೂನಿಯನ್‌ನ ಶೇ.90ರಷ್ಟು ಉತ್ಪನ್ನಗಳ ಆಮದು 10 ವರ್ಷಗಳ ಅವಧಿಯಲ್ಲಿ ಸುಂಕ ಮುಕ್ತವಾಗಲಿವೆ. ಒಪ್ಪಂದ ಜಾರಿಯಾದ ಮೊದಲ ದಿನ ಯುರೋಪಿಯನ್‌ ಯೂನಿಯನ್‌ನ ಶೇ.30ರಷ್ಟು ಉತ್ಪನ್ನಗಳ ಮೇಲಿನ ಸುಂಕವನ್ನಷ್ಟೇ ಭಾರತ ಕಡಿತ ಮಾಡಲಿದೆ.ಸದ್ಯ ಯುರೋಪಿನ ಜತೆಗೆ ಭಾರತದ ದ್ವಿಪಕ್ಷೀಯ ವ್ಯಾಪಾರವು 2024-25ನೇ ಸಾಲಿನಲ್ಲಿ 12 ಲಕ್ಷ ಕೋಟಿ ರು. ಆಗಿದೆ. ಈ ಮೂಲಕ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿ ಇಯು ಹೊರಹೊಮ್ಮಿದೆ. ಭಾರತದ ಒಟ್ಟು ಶೇ.17ರಷ್ಟು ರಫ್ತು ಯುರೋಪಿನ ಜತೆ ನಡೆಯುತ್ತಿದೆ. ಇದೀಗ ಮುಕ್ತ ಒಪ್ಪಂದದಿಂದಾಗಿ 2032ರ ಹೊತ್ತಿಗೆ ಭಾರತಕ್ಕೆ ಯುರೋಪಿಯನ್‌ ರಾಷ್ಟ್ರಗಳ ರಫ್ತು ದ್ವಿಗುಣಗೊಳ್ಳುವ ನಿರೀಕ್ಷೆ ಇದ್ದು, ತೆರಿಗೆಯ ಮೂಲಕ ಹೋಗುತ್ತಿದ್ದ 43,572 ಕೋಟಿ ರು.ನಷ್ಟು ಹಣ ಉಳಿತಾಯ ಆಗಲಿದೆ ಎಂದು ಹೇಳಲಾಗಿದೆ.-----ಯಾವ್ಯಾವ ಯುರೋಪ್ ವಸ್ತುಗಳ ಆಮದು ಡ್ಯೂಟಿ ಫ್ರೀ?- ಆಟೋಮೊಬೈಲ್‌, ವೈನ್‌, ಸ್ಪಿರಿಟ್‌, ಬಿಯರ್‌, ಆಲಿವ್‌ ಆಯಿಲ್‌, ಕಿವಿ, ಪಿಯರ್ಸ್‌ ಹಣ್ಣು, ಫ್ರೂಟ್‌ ಜ್ಯೂಸ್‌, ಸಂಸ್ಕರಿತ ಆಹಾರಗಳಾದ ಬ್ರೆಡ್‌, ಪೇಸ್ಟ್ರೀಸ್‌, ಬಿಸ್ಕತ್ತುಗಳು, ಪಾಸ್ತಾ, ಚಾಕೊಲೆಟ್‌, ಸಾಕು ಪ್ರಾಣಿ ಆಹಾರ, ಕುರಿ ಮಾಂಸ, ಸಾಸ್‌ಗಳು ಮತ್ತು ಇತರೆ ಮಾಂಸ ಸಿದ್ಧಪಡಿಸುವ ಉತ್ಪನ್ನಗಳು.- ಸದ್ಯ ಈ ಉತ್ಪನ್ನಗಳ ಆಮದಿನ ಮೇಲೆ ಶೇ.33ರಿಂದ ಶೇ.150ರ ವರೆಗೆ ತೆರಿಗೆ ವಿಧಿಸಲಾಗುತ್ತಿದೆ. - ಯುರೋಪಿನ ಬಿಎಂಡಬ್ಲ್ಯು, ಮರ್ಸಿಡಿಸ್‌, ಲ್ಯಾಂಬೋರ್ಗಿನಿ, ಪೋರ್ಶೆ ಮತ್ತು ಆಡಿ ಕಂಪನಿಯ ಪ್ರೀಮಿಯಂ ಲಕ್ಸುರಿ ಕಾರುಗಳ ಬೆಲೆ ಇನ್ನು ಭಾರತದ ಮಾರುಕಟ್ಟೆಯಲ್ಲಿ ಇಳಿಯಲಿವೆ. ಭಾರತವು ಕೋಟಾ ಆಧಾರಿತವಾಗಿ ಯುರೋಪಿಯನ್‌ ಕಾರುಗಳಿಗೆ ಸುಂಕ ವಿನಾಯ್ತಿ ನೀಡಲಿದೆ. ಕಾರಿನ ಮೇಲಿನ ತೆರಿಗೆಯನ್ನು ಭಾರತ ಹಂತಹಂತವಾಗಿ ಶೇ.10ಕ್ಕೆ ಇಳಿಸಲಿದೆ. ವರ್ಷಕ್ಕೆ 2.5 ಲಕ್ಷ ಕಾರುಗಳಿಗೆ ಮಾತ್ರ ಇದರ ಲಾಭ ಸಿಗಲಿದೆ.- ಯಂತ್ರಗಳು, ಎಲೆಕ್ಟ್ರಿಕಲ್‌ ಉಪಕರಣಗಳು, ವಿಮಾನ ಮತ್ತು ಗಗನನೌಕೆ, ಆಫ್ಟಿಕಲ್‌, ಮೆಡಿಕಲ್‌, ಸರ್ಜಿಕಲ್‌ ಉಪಕರಣಗಳು, ಪ್ಲಾಸ್ಟಿಕ್‌ಗಳು, ರಸಾಯನಿಕಗಳು, ಕಬ್ಬಿಣ, ಸ್ಟೀಲ್‌, ಫಾರ್ಮಾ ಉತ್ಪನ್ನಗಳು ಸುಂಕಮುಕ್ತವಾಗಿ ಭಾರತ ಪ್ರವೇಶಿಸಲಿವೆ.- ಆಟೋಮೊಬೈಲ್‌ ವಿಚಾರದಲ್ಲಿ ಭಾರತ ಜಾಗರೂಕವಾಗಿ ಕೋಟಾ ಆಧಾರಿತ ಸುಂಕ ವಿನಾಯ್ತಿ ಪ್ಯಾಕೇಜ್‌ ನೀಡಲು ನಿರ್ಧರಿಸಿದೆ. ಇದು ಯುರೋಪಿನ ಕಾರು ಉತ್ಪಾದಕರಿಗೆ ಐಷಾರಾಮಿ ಕಾರುಗಳನ್ನು ಭಾರತದಲ್ಲಿ ಪರಿಚಯಿಸಲು ಅವಕಾಶ ನೀಡುವುದಲ್ಲದೆ, ಮೇಕ್‌ ಇನ್ ಇಂಡಿಯಾ ಮತ್ತು ಭವಿಷ್ಯದಲ್ಲಿ ಭಾರತದಿಂದಲೇ ರಫ್ತಿಗೂ ಅವಕಾಶ ಮಾಡಿಕೊಡಲಿದೆ ಎಂದು ವಾಣಿಜ್ಯ ಸಚಿವಾಲಯ ವಿಶ್ವಾಸ ವ್ಯಕ್ತಪಡಿಸಿದೆ.

==ಡೈರಿ, ಧಾನ್ಯಗಳು ಒಪ್ಪಂದದಿಂದ ಹೊರಕ್ಕೆಭಾರತವು ಡೈರಿ ಉತ್ಪನ್ನಗಳು, ಸೋಯಾ ಮೀಲ್‌ ಮತ್ತು ಧಾನ್ಯಗಳ ಕ್ಷೇತ್ರಗಳನ್ನು ಒಪ್ಪಂದದಿಂದ ಹೊರಗಿಟ್ಟಿದೆ. ಯುರೋಪಿಯನ್‌ ಯೂನಿಯನ್‌ ಕೂಡ ಸಕ್ಕರೆ, ಬೀಫ್‌, ಮಾಂಸ ಮತ್ತು ಪೌಲ್ಟ್ರಿ ಕ್ಷೇತ್ರಗಳನ್ನು ಸುಂಕ ವಿನಾಯ್ತಿಯಿಂದ ದೂರವಿರಿಸಿದೆ.

--- ಯುರೋಪಿಯನ್‌ ಒಕ್ಕೂಟದ ಪ್ರಮುಖ ದೇಶಗಳು

ಫ್ರಾನ್ಸ್‌, ಜರ್ಮನಿ, ಸ್ಪೇನ್‌, ಇಟಲಿ, ಆಸ್ಟ್ರಿಯಾ, ಬೆಲ್ಜಿಯಂ, ಬಲ್ಗೇರಿಯಾ, ಫಿನ್ಲೆಂಡ್‌, ಹಂಗೇರಿ, ಐಲ್ಯಾಂಡ್‌, ನೆದರ್‌ಲ್ಯಾಂಡ್‌, ಪೋರ್ಚುಗಲ್‌, ಪೋಲೆಂಡ್‌, ಡೆನ್ಮಾರ್ಕ್‌ ಮತ್ತು ಸ್ಪೀಡನ್‌

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಯುಜಿಸಿಯ ತಾರತಮ್ಯ ತಡೆ ಸಮಿತಿ: ಜನರಲ್‌ ವರ್ಗ ಕಿಡಿ
ಟ್ರಂಪ್ ವಿರುದ್ಧವೇ ಟ್ರಂಪ್‌ ಕಾರ್ಡ್‌