₹64000 ಕೋಟಿ ವೆಚ್ಚದಲ್ಲಿ ಮತ್ತೆ26 ರಫೇಲ್‌ ವಿಮಾನ ಖರೀದಿ

KannadaprabhaNewsNetwork |  
Published : Apr 28, 2025, 11:50 PM ISTUpdated : Apr 29, 2025, 07:16 AM IST
ರಫೆಲ್  | Kannada Prabha

ಸಾರಾಂಶ

: 64000 ಕೋಟಿ ರು. ವೆಚ್ಚದಲ್ಲಿ ನೌಕಾಪಡೆಗೆ 26 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಲು ಭಾರತ ನಿರ್ಧರಿಸಿದೆ. ಈ ಕುರಿತ ಖರೀದಿ ಒಪ್ಪಂದಕ್ಕೆ ಭಾರತ ಮತ್ತು ಫ್ರಾನ್ಸ್ ಸೋಮವಾರ ಸಹಿ ಹಾಕಿವೆ.

ನವದೆಹಲಿ: 64000 ಕೋಟಿ ರು. ವೆಚ್ಚದಲ್ಲಿ ನೌಕಾಪಡೆಗೆ 26 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಲು ಭಾರತ ನಿರ್ಧರಿಸಿದೆ. ಈ ಕುರಿತ ಖರೀದಿ ಒಪ್ಪಂದಕ್ಕೆ ಭಾರತ ಮತ್ತು ಫ್ರಾನ್ಸ್ ಸೋಮವಾರ ಸಹಿ ಹಾಕಿವೆ.

ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ನಿಂದ ಭಾರತವು ನೌಕಾಪಡೆಗಾಗಿ ಈ ವಿಮಾನ ಖರೀದಿಸಲಿದ್ದು, ಕಾರವಾರ ಬಂದರಿನಲ್ಲಿರುವ ಐಎನ್‌ಎಸ್‌ ವಿಕ್ರಾಂತ್‌ ಹಾಗೂ ಐಎನ್‌ಎಸ್‌ ವಿಕ್ರಮಾದಿತ್ಯ ಯುದ್ಧನೌಕೆಯಲ್ಲಿ ಈ ವಿಮಾನಗಳನ್ನು ನಿಯೋಜಿಸಲಾಗುವುದು.

ಮೂರು ವಾರಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಭದ್ರತೆಗೆ ಸಂಬಂಧಿಸಿದ ಸಂಪುಟ ಸಭೆಯಲ್ಲಿ ಈ ಖರೀದಿ ಪ್ರಕ್ರಿಯೆಗೆ ಅನುಮೋದನೆ ನೀಡಲಾಗಿತ್ತು.

ಈ ಯುದ್ಧ ವಿಮಾನದ ಪೂರೈಕೆಯು 2029ರ ಅಂತ್ಯದಲ್ಲಿ ಆರಂಭವಾಗಲಿದ್ದು, 2031ರೊಳಗೆ ಪೂರ್ಣಗೊಳ್ಳಲಿದೆ. ವಿಶ್ವದಲ್ಲಿ ನೌಕಾಸೇನೆಗಳು ಬಳಸುತ್ತಿರುವ ಅತ್ಯಾಧುನಿಕ ವಿಮಾನಗಳಲ್ಲಿ ರಫೇಲ್‌ ಎಂ. ಕೂಡ ಒಂದು. ಸದ್ಯ ಇದು ಫ್ರಾನ್ಸ್‌ನ ನೌಕಾಸೇನೆಯಲ್ಲಿ ಮಾತ್ರ ಸೇವೆ ಸಲ್ಲಿಸುತ್ತಿದೆ. ಈ ರಫೇಲ್‌ ಎಂ. ಯುದ್ಧ ವಿಮಾನಗಳು ಭಾರತದ ನೌಕಾಸೇನೆಯ ಬಲ ಹೆಚ್ಚಿಸಲಿವೆ. ಈ ವಿಮಾನಗಳಿಗೆ ದೇಶೀಯವಾಗಿ ನಿರ್ಮಿತ ಅಸ್ತ್ರ ಮತ್ತು ರುದ್ರಂ ಕ್ಷಿಪಣಿಗಳನ್ನು ಅಳವಡಿಸುವ ಉದ್ದೇಶ ಭಾರತಕ್ಕಿದೆ. ಕೆಲ ವರ್ಷಗಳ ಹಿಂದೆ ನಡೆದ ಒಪ್ಪಂದದಂತೆ ಭಾರತದ ವಾಯುಸೇನೆಗೆ ಈಗಾಗಲೇ ರಫೇಲ್‌-ಸಿ ಯುದ್ಧ ವಿಮಾನಗಳು ಸೇರ್ಪಡೆಯಾಗಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ