ಕೋವಿಡ್ ನಂತರ ಒಂದರ ಹಿಂದೆ ಒಂದರಂತೆ ಸವಾಲು140 ಕೋಟಿ ಭಾರತೀಯರ ಒಗ್ಗಟ್ಟಿನ ಯತ್ನದಿಂದ ಯಶನವದೆಹಲಿ: ‘ಇಂದು ಜಗತ್ತು ಎದುರಿಸುತ್ತಿರುವ ಗಂಭೀರ ಪರಿಸ್ಥಿತಿಗಳು ಅತ್ಯಂತ ಚಿಂತಾಜನಕವಾಗಿವೆ. ಆದರೆ 140 ಕೋಟಿ ಭಾರತೀಯರ ಒಗ್ಗಟ್ಟಿನ ಪ್ರಯತ್ನದಿಂದ, ದೇಶ ಪ್ರತಿಯೊಂದು ವಿಪತ್ತನ್ನು ಎದುರಿಸುತ್ತಾ ಮುಂದೆ ಸಾಗುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ನುಡಿದಿದ್ದಾರೆ.
‘ನಾವು ಯಾರ ಪರವಾಗಿದ್ದೇವೆಂದು ಜನ ಕೇಳುತ್ತಾರೆ. ನನ್ನ ಉತ್ತರವೆಂದರೆ, ನಾವು ಭಾರತದ ಪರವಾಗಿ, ಭಾರತದ ಹಿತಾಸಕ್ತಿಗಳ ಪರವಾಗಿ ಮತ್ತು ಶಾಂತಿಯ ಪರವಾಗಿ ನಿಲ್ಲುತ್ತೇವೆ. ಜಗತ್ತು ಯುದ್ಧದಿಂದ ಛಿದ್ರಗೊಂಡಿರುವ ಸಮಯದಲ್ಲಿ, ಭಾರತವು ಕೊಲ್ಲಿಯಿಂದ ಜಾಗತಿಕ ಪಶ್ಚಿಮಕ್ಕೆ, ಜಾಗತಿಕ ದಕ್ಷಿಣದಿಂದ ತನ್ನ ನೆರೆಹೊರೆಯವರೆಗೆ ಅಸಾಧಾರಣ ಸೇತುವೆಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದೆ. ಇಂದು ಭಾರತ ಎಲ್ಲರಿಗೂ ವಿಶ್ವಾಸಾರ್ಹ ಪಾಲುದಾರನಾಗಿ ನಿಂತಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.
==ಅಧಿಕಾರಿ ಆತ್ಮಹತ್ಯೆ ಕೇಸ್: ಪಂಜಾಬ್ ಮಾಜಿ ಸಚಿವ ಭುಲ್ಲರ್ ಬಂಧನ
ಚಂಡೀಗಢ: ಪಂಜಾಬ್‌ನಲ್ಲಿ ಆಪ್ ಶಾಸಕನ ಕಿರುಕುಳಕ್ಕೆ ಸರ್ಕಾರಿ ಅಧಿಕಾರಿ ಗನದೀಪ್ ಸಿಂಗ್ ರಂಧಾವಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪ ಹೊತ್ತಿದ್ದ ಆಪ್ ನಾಯಕ, ಮಾಜಿ ಸಚಿವ ಲಾಲ್ಜಿತ್ ಸಿಂಗ್ ಭುಲ್ಲರ್ ಅವರನ್ನು ಸೋಮವಾರ ಬಂಧಿಸಿದ್ದಾರೆ,ರಾಜ್ಯ ಉಗ್ರಾಣ ನಿಗಮದ ಅಧಿಕಾರಿ ರಂಧಾವಾ ವಿಡಿಯೋ ‘ತಮ್ಮ ಸಾವಿಗೆ ಭುಲ್ಲರ್ ಕಾರಣ’ ಎಂದು ಆರೋಪಿಸಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಭುಲ್ಲರ್ ಸೇರಿ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
==
5,000 ನಾವಿಕರ ತುಕಡಿ ನಿಯೋಜನೆ
ವಾಷಿಂಗ್ಟನ್: ಕೊಲ್ಲಿಯ ತನ್ನ ಮಿತ್ರರಾಷ್ಟ್ರಗಳ ಮೇಲೆ ಇರಾನ್ ಭೀಕರ ದಾಳಿ ಮುಂದುವರಿಸುತ್ತಿರುವ ನಡುವೆಯೇ, ಅಮೆರಿಕವು ಮಧ್ಯಪ್ರಾಚ್ಯ ಸಮುದ್ರದಲ್ಲಿ ಸುಮಾರು 5,000 ನಾವಿಕರನ್ನೊಳಗೊಂಡ ನೌಕಾ ತುಕಡಿಯ ನಿಯೋಜನೆಗೆ ಮುಂದಾಗಿದೆ ಎಂದು ವರದಿಯಾಗಿದೆ.ವಾಣಿಜ್ಯ ಹಡಗುಗಳ ಸಂಚಾರಕ್ಕೆ ಹೋರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಟ್ರಂಪ್ ಹಾಗೂ ಇರಾನ್ ನಡುವೆ ತೀವ್ರ ಜಟಾಪಟಿ ನಡುಯುತ್ತಿರುವ ಮಧ್ಯೆ ಈ ವಿದ್ಯಮಾನ ನಡೆದಿದೆ.
==
ಕ್ಷಿಪಣಿಯ ಭಾಗ ಬಿದ್ದು ಅಬುಧಾಬಿ ನಿವಾಸಿ ಭಾರತೀಯಗೆ ಗಾಯದುಬೈ: ಇರಾನ್ ಕಡೆಯಿಂದ ಹಾರಿಬರುತ್ತಿರುವ ಕ್ಷಿಪಣಿಗಳಿಗೆ ಪ್ರತಿರೋಧ ಒಡ್ಡುವಲ್ಲಿ ಸೌದಿ ಅರೇಬಿಯಾದ ವಾಯುರಕ್ಷಣಾ ವ್ಯವಸ್ಥೆ ಯಶಸ್ವಿಯಾಗುತ್ತಿದ್ದರೂ, ಅದು ಹೊರೆಡುರುಳಿಸುತ್ತಿರುವ ಮಿಸೈಲ್‌ಗಳ ಭಾಗಗಳು ಬಿದ್ದು ಆಗುವ ಅನಾಹುತಗಳು ಮುಂದುವರೆದಿವೆ. ಸೋಮವಾರ ಅಲ್ ಶವಾಮೇಖ್ ಎಂಬಲ್ಲಿ ಬಿದ್ದ ಕ್ಷಿಪಣಿಯ ಭಾಗಗಳಿಂದಾಗಿ ಓರ್ವ ಭಾರತೀಯ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ರಕ್ಷಣಾ ತಂಡ ಆಗಮಿಸಿದ್ದು, ಅವಶೇಷಗಳನ್ನು ತೆರವುಗೊಳಿಸಿದೆ.ಫೆ.28ರಂದು ಯುದ್ಧ ಶುರುವಾದಾಗಿನಿಂದ ಇಂತಹ ಅವಘಡದಿಂದಾಗಿ ಅಬುಧಾಬಿಯಲ್ಲಿ ನೆಲೆಸಿರುವ ವಿವಿಧ ದೇಶಗಳ 161 ಜನ ಗಾಯಗೊಂಡಿದ್ದಾರೆ. ಕ್ಷಿಪಣಿಯ ಭಾಗಗಳು ಜನವಸತಿ ಪ್ರದೇಶಗಳ ಮೇಲೆ ಬೀಳುತ್ತಿರುವ ಕಾರಣ ಈ ಸಂಖ್ಯೆ ಅಧಿಕವಾಗಿದೆ.