ರಷ್ಯಾದಿಂದ 4ನೇ ಸುದರ್ಶನ ಚಕ್ರ ವಾಯುರಕ್ಷಣಾ ವ್ಯವಸ್ಥೆ

KannadaprabhaNewsNetwork |  
Published : Jun 05, 2026, 01:15 AM IST
S - 400

ಸಾರಾಂಶ

ಶತ್ರು ದೇಶದ ವಾಯುದಾಳಿಯಿಂದ ದೇಶವನ್ನು ರಕ್ಷಿಸಲು ನೆರವಾಗಬಲ್ಲ ರಷ್ಯಾ ನಿರ್ಮಿತ ಮತ್ತೊಂದು ಅತ್ಯಾಧುನಿಕ ಸುದರ್ಶನ ಚಕ್ರ ವಾಯುರಕ್ಷಣಾ ವ್ಯವಸ್ಥೆ ಭಾರತಕ್ಕೆ ಬಂದು ಸೇರಿದೆ. ಇದರೊಂದಿಗೆ ಮಿತ್ರ ದೇಶದಿಂದ ಭಾರತ ಖರೀದಿ ಮಾಡಿದ್ದ ಒಟ್ಟು 5 ಸುದರ್ಶನದ ಚಕ್ರದ ಪೈಕಿ 4 ಆಗಮನವಾದಂತಾಗಿದ್ದು, ಇನ್ನೊಂದರ ಪೂರೈಕೆ ಬಾಕಿ ಇದೆ.

 ನವದೆಹಲಿ: ಶತ್ರು ದೇಶದ ವಾಯುದಾಳಿಯಿಂದ ದೇಶವನ್ನು ರಕ್ಷಿಸಲು ನೆರವಾಗಬಲ್ಲ ರಷ್ಯಾ ನಿರ್ಮಿತ ಮತ್ತೊಂದು ಅತ್ಯಾಧುನಿಕ ಸುದರ್ಶನ ಚಕ್ರ ವಾಯುರಕ್ಷಣಾ ವ್ಯವಸ್ಥೆ ಭಾರತಕ್ಕೆ ಬಂದು ಸೇರಿದೆ. ಇದರೊಂದಿಗೆ ಮಿತ್ರ ದೇಶದಿಂದ ಭಾರತ ಖರೀದಿ ಮಾಡಿದ್ದ ಒಟ್ಟು 5 ಸುದರ್ಶನದ ಚಕ್ರದ ಪೈಕಿ 4 ಆಗಮನವಾದಂತಾಗಿದ್ದು, ಇನ್ನೊಂದರ ಪೂರೈಕೆ ಬಾಕಿ ಇದೆ.

ಎಸ್‌ 400 ಟ್ರಯಂಫ್‌ ಹೆಸರಿನ ಈ ವಾಯುರಕ್ಷಣಾ ವ್ಯವಸ್ಥೆ

ಎಸ್‌ 400 ಟ್ರಯಂಫ್‌ ಹೆಸರಿನ ಈ ವಾಯುರಕ್ಷಣಾ ವ್ಯವಸ್ಥೆಯ, ಏಕಕಾಲಕ್ಕೆ 80-100 ಗುರಿಗಳನ್ನು ಪತ್ತೆ ಹಚ್ಚಿ ಅವುಗಳ ಮೇಲೆ ದಾಳಿ ನಡೆಸಲ್ಲ ಸಾಮರ್ಥ್ಯ ಹೊಂದಿದೆ. ಅಷ್ಟು ಮಾತ್ರವಲ್ಲ ತೂರಿ ಬರುತ್ತಿರುವ ಶತ್ರು ದೇಶದ ಡ್ರೋನ್‌, ಕ್ಷಿಪಣಿ, ವಿಮಾನಗಳನ್ನು 400 ಕಿ.ಮೀ ದೂರದಲ್ಲೇ ಪತ್ತೆ ಹಚ್ಚಿ ಅದನ್ನು ಧ್ವಂಸ ಮಾಡಬಲ್ಲದು. ಇತ್ತೀಚಿನ ಪಾಕ್‌ ವಿರುದ್ಧ ಆಪರೇಷನ್‌ ಸಿಂದೂರದ ವೇಳೆ ಈ ವ್ಯವಸ್ಥೆ ಭಾರತೀಯ ಸೇನೆಗೆ ಅಮೂಲ್ಯ ಕೊಡುಗೆ ನೀಡಿತ್ತು.

5 ಸುದರ್ಶನ ಚಕ್ರ ವಾಯುರಕ್ಷಣಾ ವ್ಯವಸ್ಥೆ ಖರೀದಿಗೆ ಒಪ್ಪಂದ

2018ರಲ್ಲಿ ಭಾರತ ಸರ್ಕಾರ, 37000 ಕೋಟಿ ರು. ವೆಚ್ಚದಲ್ಲಿ ರಷ್ಯಾದಿಂದ 5 ಸುದರ್ಶನ ಚಕ್ರ ವಾಯುರಕ್ಷಣಾ ವ್ಯವಸ್ಥೆ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ಪೈಕಿ 3 ಈಗಾಗಲೇ ಪೂರೈಕೆಗೊಂಡಿದ್ದು, ಅದನ್ನು ಆಯಕಟ್ಟಿನ ಗಡಿ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಆದರೆ ಬಳಿಕ ರಷ್ಯಾ- ಉಕ್ರೇನ್‌ ಯುದ್ಧದ ಹಿನ್ನೆಲೆಯಲ್ಲಿ ಉಳಿದ 2 ವ್ಯವಸ್ಥೆ ಪೂರೈಕೆಗೆ ಅಡ್ಡಿಯಾಗಿತ್ತು. ಇದೀಗ 1 ಪೂರೈಕೆಯಾಗಿದ್ದು, ಇನ್ನೊಂದು ಬಾಕಿ ಉಳಿದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಆರ್‌ಎಸ್‌ಎಸ್‌ ಮುಖ್ಯಸ್ಥ ಭಾಗ್ವತ್‌ ಸಂಚರಿಸುತ್ತಿದ್ದ ರೈಲಿನ ಮೇಲೆ ಕಲ್ಲೆಸೆತ
ಟಿಎಂಸಿಯಿಂದ ಮಮತಾ ಔಟ್‌?