ಬೆಂಗಳೂರಿನಲ್ಲಿ ತಯಾರಾಗಲಿದೆ ಎಲೆಕ್ಟ್ರಿಕ್‌ ಹಂಸ ತರಬೇತಿ ವಿಮಾನ

KannadaprabhaNewsNetwork |  
Published : May 29, 2025, 02:02 AM ISTUpdated : May 29, 2025, 04:31 AM IST
ಹಂಸ | Kannada Prabha

ಸಾರಾಂಶ

ಸ್ವದೇಶಿ ನಿರ್ಮಾಣ ಪರಿಕಲ್ಪನೆಯಲ್ಲಿ ಭಾರತವು ಪ್ರಮುಖ ಹೆಜ್ಜೆಯೊಂದನ್ನು ಇಡಲು ಮುಂದಾಗಿದ್ದು, ಮುಂದಿನ ಪೀಳಿಗೆಯ ಎಲೆಕ್ಟ್ರಿಕ್ ಮಾದರಿಯ 2 ಆಸನಗಳ ಹಂಸ ತರಬೇತಿ ವಿಮಾನವನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆ

ನವದೆಹಲಿ: ಸ್ವದೇಶಿ ನಿರ್ಮಾಣ ಪರಿಕಲ್ಪನೆಯಲ್ಲಿ ಭಾರತವು ಪ್ರಮುಖ ಹೆಜ್ಜೆಯೊಂದನ್ನು ಇಡಲು ಮುಂದಾಗಿದ್ದು, ಮುಂದಿನ ಪೀಳಿಗೆಯ ಎಲೆಕ್ಟ್ರಿಕ್ ಮಾದರಿಯ 2 ಆಸನಗಳ ಹಂಸ ತರಬೇತಿ ವಿಮಾನವನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆ. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಏರೋಸ್ಪೇಸ್‌ ಪ್ರಯೋಗಾಲಯ, ದೇಶಿಯವಾಗಿ ಈ ವಿಮಾನ ಅಭಿವೃದ್ಧಿಪಡಿಸಲಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಇ- ಹಂಸ ತರಬೇತಿ ವಿಮಾನ ತಯಾರಿಕೆಯ ಬಗ್ಗೆ ಘೋಷಿಸಲಾಗಿದೆ. ಈ ತರಬೇತಿ ವಿಮಾನವು ಹಂಸ-3 ತರಬೇತುದಾರ ವಿಮಾನ ಕಾರ್ಯಕ್ರಮದ ಭಾಗವಾಗಿದ್ದು, ಇದನ್ನು ಭಾರತದಲ್ಲಿ ಸ್ವದೇಶಿಯಾಗಿ ಪೈಲಟ್‌ ತರಬೇತಿಗಾಗಿ ಬಳಸಲಾಗುತ್ತದೆ. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಏರೋಸ್ಪೇಸ್‌ ಪ್ರಯೋಗಾಲಯ ಅಭಿವೃದ್ಧಿ ಪಡಿಸಲಿರುವ ಈ ವಿಮಾನ ಪರಿಣಾಮಕಾರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಇದು ವಿದೇಶದಿಂದ ಆಮದು ಮಾಡಿಕೊಳ್ಳುವ ತರಬೇತಿ ವಿಮಾನದ ಸರಿ ಸುಮಾರು ಅರ್ಧದಷ್ಟು ಬೆಲೆಗೆ ತಯಾರಾಗಲಿದೆ.

ಸುಮಾರು ಎರಡು ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗಲಿರುವ ಈ ಎರಡು ಆಸನಗಳ ಎಲೆಕ್ಟ್ರಿಕ್ ತರಬೇತಿ ವಿಮಾನ ಆಮದು ಮಾಡಿಕೊಳ್ಳುವ ವಿಮಾನಗಳಿಗಿಂತ ಶೇ.50ರಷ್ಟು ಅಗ್ಗ. ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ತರಬೇತಿಗೆ ಕೈಗೆಟಕುವ ದರದಲ್ಲಿ ಸಿಗುವ ಈ ವಿಮಾನ ಪರಿಸರ ಸ್ನೇಹಿಯಾಗಿರಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಭಾರತಕ್ಕೀಗ ಮೆಕ್ಸಿಕೋ ಶೇ.50 ತೆರಿಗೆ ಹೊಡೆತ
ಮೋದಿ-ಪುಟಿನ್‌ ಸೆಲ್ಫಿ ತೋರಿಸಿ ಟ್ರಂಪ್‌ ವಿರುದ್ಧ ಸಂಸದೆಯ ಕಿಡಿ