ಇಂಗ್ಲೆಂಡ್ ವಿರುದ್ಧ ರಾಜಕೋಟ್‌ನಲ್ಲಿ ನಡೆದ 3ನೇ ಟೆಸ್ಟ್‌ನಲ್ಲಿ ಭಾನುವಾರ ಭಾರಿ ಅಂತರದ ಗೆಲುವು ಸಾಧಿಸಿದ ಭಾರತ ತಂಡ, ದಾಖಲೆಗಳ ಸುರಿಮಳೆಯನ್ನೇ ಸುರಿಸಿದೆ.
ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರು ದ್ವಿಶತಕ ಸಿಡಿಸುವ ಜತೆಗೆ ಹಲವು ದಾಖಲೆಗಳನ್ನು ಸೃಷ್ಟಿಸಿ ಗಮನಸೆಳೆದಿದ್ದಾರೆ.
214 ರನ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ದ್ವಿಶತಕ ಚಚ್ಚಿದ ಜೈಸ್ವಾಲ್.
ಸರಣಿಯೊಂದರಲ್ಲಿ ವಿರಾಟ್ ಕೊಹ್ಲಿ ಬಳಿಕ ದ್ವಿಶತಕ ಗಳಿಸಿದ ಭಾರತದ 2ನೇ ಆಟಗಾರ
434 ರನ್: ಭಾರತದ ಜಯದ ಅಂತರ. ಭಾರತದ ಟೆಸ್ಟ್ ಇತಿಹಾಸದಲ್ಲೇ ಇದು ದಾಖಲೆ
28 ಸಿಕ್ಸರ್: ಟೆಸ್ಟ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿ ಭಾರತ ವಿಶ್ವದಾಖಲೆ
48 ಸಿಕ್ಸರ್: ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಸಿಕ್ಸ್ ಸಿಡಿಸಿದ ವಿಶ್ವದ ಮೊದಲ ಕ್ರಿಕೆಟ್ ತಂಡ
ಯಶಸ್ವಿ ಸಿಕ್ಸರ್ ಸುರಿಮಳೆ!
20 ಸಿಕ್ಸರ್: ಟೆಸ್ಟ್ ಸರಣಿಯೊಂದರಲ್ಲಿ 20 ಸಿಕ್ಸರ್ ಸಿಡಿಸಿದ ವಿಶ್ವದ ಮೊದಲ ಕ್ರಿಕೆಟ್ ಆಟಗಾರ
12 ಸಿಕ್ಸರ್: ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ್ದ ವಾಸೀಂ ಅಕ್ರಮ ದಾಖಲೆ ಸರಿಸಮ
10 ಸಿಕ್ಸರ್: ಇನ್ನಿಂಗ್ಸ್‌ನಲ್ಲಿ 10ಕ್ಕಿಂತ ಹೆಚ್ಚು ಸಿಕ್ಸರ್ ಬಾರಿಸಿದ ಭಾರತದ ಮೊದಲ ಆಟಗಾರ