ಭಾರತದ ಕಾನೂನು ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯ: ಸಿಜೆಐ ಗವಾಯಿ

KannadaprabhaNewsNetwork |  
Published : Jul 13, 2025, 01:19 AM ISTUpdated : Jul 13, 2025, 04:21 AM IST
BR Gavai

ಸಾರಾಂಶ

  ಕೆಲ  ಪ್ರಕರಣಗಳು ದಶಕಗಳಾದರೂ ಮುಗಿಯುವುದಿಲ್ಲ. ವಿಚಾರಣಾಧೀನ ಕೈದಿಯೊಬ್ಬ ಜೈಲಿನಲ್ಲಿ ಹತ್ತಾರು ವರ್ಷ ಕಳೆದ ನಂತರ ಆತ ನಿರಪರಾಧಿ ಎಂಬ ತೀರ್ಪು ಬರುತ್ತದೆ. ಇಂಥ ಸವಾಲುಗಳನ್ನು ಪರಿಹರಿಸಬೇಕಿದೆ ಎಂದು  ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ತಿಳಿಸಿದ್ದಾರೆ.

 ಹೈದರಾಬಾದ್: ಭಾರತದ ಕಾನೂನು ವ್ಯವಸ್ಥೆ ವಿಭಿನ್ನ ಸವಾಲುಗಳನ್ನು ಎದುರಿಸುತ್ತಿವೆ. ಕೆಲವು ಪ್ರಕರಣಗಳು ದಶಕಗಳಾದರೂ ಮುಗಿಯುವುದಿಲ್ಲ. ವಿಚಾರಣಾಧೀನ ಕೈದಿಯೊಬ್ಬ ಜೈಲಿನಲ್ಲಿ ಹತ್ತಾರು ವರ್ಷ ಕಳೆದ ನಂತರ ಆತ ನಿರಪರಾಧಿ ಎಂಬ ತೀರ್ಪು ಬರುತ್ತದೆ. ಇಂಥ ಸವಾಲುಗಳನ್ನು ಪರಿಹರಿಸಬೇಕಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ತಿಳಿಸಿದ್ದಾರೆ.

ಹೈದರಾಬಾದ್‌ನ ನಲ್ಸರ್ ಕಾನೂನು ವಿವಿಯ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ‘ನಮ್ಮ ಕಾನೂನು ವ್ಯವಸ್ಥೆಯನ್ನು ಸರಿಪಡಿಸುವ ಅಗತ್ಯವಿದೆ. ವಿಚಾರಣಾಧೀನ ಕೈದಿಯಾಗಿ ವರ್ಷಗಳ ಕಾಲ ಜೈಲಿನಲ್ಲಿ ಕಳೆದ ನಂತರ ವ್ಯಕ್ತಿಯೊಬ್ಬ ನಿರಪರಾಧಿ ಎಂದು ಸಾಬೀತಾದ ಪ್ರಕರಣಗಳನ್ನು ನಾವು ನೋಡಿದ್ದೇವೆ. ನನ್ನ ಸಹವರ್ತಿ ನಾಗರಿಕರು ಇಂಥ ಸವಾಲುಗಳನ್ನು ಎದುರಿಸುತ್ತಾರೆ ಎಂಬ ಆಶಾವಾದದಲ್ಲಿ ನಾನಿರುತ್ತೇನೆ. 

ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಒಂದು ಉತ್ತಮ ಪ್ರತಿಭೆ ಸಹಾಯ ಮಾಡಬಹುದು’ ಎಂದರು. ಇದೇ ವೇಳೆ, ವಿದ್ಯಾರ್ಥಿವೇತನ ಪಡೆದು ವಿದೇಶಗಳಿಗೆ ಕಲಿಯಲು ಹೋಗಿ. ಅಪ್ಪ ಅಮ್ಮನ ಮೇಲೆ ಆರ್ಥಿಕ ಹೊರೆ ಹೊರಿಸಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ತೆಲಂಗಾಣ ಸಿಎಂ ರೇವಂತ ರೆಡ್ಡಿ, ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ಪಿ.ಎಸ್. ನರಸಿಂಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸಿದ್ದು ಆಪ್ತ 20 ಶಾಸಕರಿಗೆಜಾರಕಿಹೊಳಿ ಔತಣಕೂಟ : ಬೆಳಗಾವೀಲೂ ಗರಿಗೆದರಿದ ಬಣ ರಾಜಕೀಯ
ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ