ಪುದುಚೇರಿಯ ವಿಶ್ವ ರಾಜಕುಮಾರ್ ಎಂಬ 20 ವರ್ಷದ ಭಾರತೀಯ ವಿದ್ಯಾರ್ಥಿ ಮೆಮೊರಿ ಲೀಗ್ ವಿಶ್ವ ಚಾಂಪಿಯನ್ಶಿಪ್ ಜಯಿಸಿದ್ದು 5,000 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ನವದೆಹಲಿ: ಪುದುಚೇರಿಯ ವಿಶ್ವ ರಾಜಕುಮಾರ್ ಎಂಬ 20 ವರ್ಷದ ಭಾರತೀಯ ವಿದ್ಯಾರ್ಥಿ ಮೆಮೊರಿ ಲೀಗ್ ವಿಶ್ವ ಚಾಂಪಿಯನ್ಶಿಪ್ ಜಯಿಸಿದ್ದು 5,000 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು ಪುದುಚೇರಿ ಮೂಲದ ಮಣಕುಲ ವಿನಾಯಕರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಯಾಗಿದ್ದಾರೆ. ಈ ಸಾಧನೆ ಮೂಲಕ ಯುವಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ.
ವಿಶ್ವ ರಾಜಕುಮಾರ್ 13.50 ಸೆಕೆಂಡ್‌ಗಳಲ್ಲಿ 80 ಸಂಖ್ಯೆಗಳನ್ನು ಮತ್ತು 8.40 ಸೆಕೆಂಡ್‌ಗಳಲ್ಲಿ 30 ಚಿತ್ರಗಳನ್ನು ನೆನಪಿಸಿಕೊಂಡು ಹೇಳುವ ಮೂಲಕ ಈ ಸಾಧನೆಗೈದಿದ್ದಾರೆ.
ಏನಿದು ಸ್ಪರ್ಧೆ?:ಮೆಮೊರಿ ಲೀಗ್ ವಿಶ್ವ ಚಾಂಪಿಯನ್ ಆನ್‌ಲೈನ್‌ನಲ್ಲಿ ನಡೆದಿದ್ದು, ಪರಸ್ಪರ ಇಬ್ಬರ ನಡುವೆ ಸ್ಪರ್ಧೆ ನಡೆಯುತ್ತದೆ. ಸ್ಪರ್ಧಾಳುಗಳಿಗೆ ಹಲವು ವಿಚಾರಗಳನ್ನು ನೆನಪಿಸಿಕೊಳ್ಳುವ ಸವಾಲುಗಳನ್ನು ನೀಡಲಾಗುತ್ತದೆ.
ಸ್ಕ್ರೀನ್ನಲ್ಲಿ 80 ಸಂಖ್ಯೆಗಳನ್ನು ಯಾದೃಚ್ಛಿಕ (ರ್‍ಯಾಂಡಂ) ಕ್ರಮದಲ್ಲಿ ಬರೆದು ನಿಗದಿತ ಸೆಕೆಂಡ್‌ಗಳಲ್ಲಿ ಥಟ್ಟನೆ ಮಾಯ ಮಾಡಲಾಗುತ್ತದೆ. ಸ್ಪರ್ಧಿಗಳಿಗೆ ಸ್ಕ್ರೀನ್ನಲ್ಲಿ ಮೂಡಿದ ಸಂಖ್ಯೆಗಳನ್ನು ಅದೇ ಕ್ರಮದಲ್ಲಿ ತಪ್ಪಿಲ್ಲದೆ ಹೇಳುವ ಸವಾಲು ನೀಡಲಾಗುತ್ತದೆ. ಇದೇ ರೀತಿ ಚಿತ್ರಗಳನ್ನೂ ನೀಡಲಾಗುತ್ತದೆ. ಯಾವ ಸ್ಪರ್ಧಿ ಎಷ್ಟು ಕಡಿಮೆ ಸಮಯದಲ್ಲಿ ಸ್ಕ್ರೀನ್ನಲ್ಲಿ ನೋಡಿದ್ದನ್ನು ಸರಿಯಾಗಿ ನೆನಪಿಟ್ಟುಕೊಂಡು ಹೇಳುತ್ತಾನೆ ಎಂಬುದರ ಮೇಲೆ ಗೆಲುವು ನಿರ್ಧಾರವಾಗುತ್ತದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.