ಆಕ್ರೋ​ಶದ ಕಾರಣ ಕೇರ​ಳ ರೈಲು ಚಾಲ​ಕ​ರಿ​ಗೆ ಸಾಫ್ಟ್ ಡ್ರಿಂಕ್ ಸೇವನೆ ನಿಷೇ​ಧ ಆದೇಶ ವಾಪ​ಸ್‌

KannadaprabhaNewsNetwork |  
Published : Feb 22, 2025, 12:48 AM ISTUpdated : Feb 22, 2025, 06:50 AM IST
ಸಾಫ್ಟ್ ಡ್ರಿಂಕ್ಸ್ | Kannada Prabha

ಸಾರಾಂಶ

ರೈಲು ಚಾಲ​ಕ​ರಿ​ಗೆ ಸಾಫ್ಟ್ ಡ್ರಿಂಕ್ ನಿಷೇ​ಧ ಆದೇಶವನ್ನು ದಕ್ಷಿಣ ರೈಲ್ವೆಯ ತಿರು​ವ​ನಂತ​ಪುರ ವಿಭಾ​ಗ ವಾಪ​ಸ್‌ ಪಡೆ​ದಿದೆ.

ತಿರು​ವ​ನಂತ​ಪು​ರ: ರೈಲು ಚಾಲ​ಕ​ರಿ​ಗೆ ಸಾಫ್ಟ್ ಡ್ರಿಂಕ್ ನಿಷೇ​ಧ ಆದೇಶವನ್ನು ದಕ್ಷಿಣ ರೈಲ್ವೆಯ ತಿರು​ವ​ನಂತ​ಪುರ ವಿಭಾ​ಗ ವಾಪ​ಸ್‌ ಪಡೆ​ದಿದೆ. ದೋಷ​ಪೂ​ರಿತ ಬ್ರೀತ್‌ ಅನ​ಲೈ​ಸರ್‌ ಯಂತ್ರ​ಗಳು ಸಾಫ್ಟ್ ಡ್ರಿಂಕ್ ಕುಡಿ​ದರೂ ಮದ್ಯ ಕುಡಿ​ದಿ​ದ್ದಾರೆ ಎಂದು ತೋರಿ​ಸು​ತ್ತಿ​ದ್ದವು. ಹೀಗಾಗಿ ಚಾಲ​ಕ​ರಿಗೆ ಸಾಫ್ಟ್ ಡ್ರಿಂಕ್ ನಿಷೇ​ಧಿ​ಸ​ಲಾ​ಗಿತ್ತು. ಆದರೆ ಚಾಲ​ಕರ ಆಕ್ರೋ​ಶದ ಕಾರಣ ಆದೇಶ ಹಿಂಪ​ಡೆ​ಯ​ಲಾ​ಗಿ​ದೆ.

4ನೇ ಬಾರಿ ಕುಂಭದಲ್ಲಿ ಅಗ್ನಿ ಅವಘಡ: ಸಾವು ನೋವಿಲ್ಲ

ಪ್ರಯಾಗರಾಜ್‌: ಇಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ 4 ಬಾರಿ ಅಗ್ನಿ ಅವಘಡ ಸಂಭವಿಸಿದೆ. ಸುದೈವವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ.ಶುಕ್ರವಾರ ಸಂಜೆ 4 ಗಂಟೆ ಹೊತ್ತಿಗೆ ಇಲ್ಲಿನ ಸೆಕ್ಟರ್‌ 25ರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 2 ಟೆಂಟ್‌ಗಳು ಭಸ್ಮವಾಗಿವೆ. ಕೂಡಲೇ ಎಚ್ಚೆತ್ತ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಗೆ ಕಾರಣ ಇನ್ನು ತಿಳಿದುಬಂದಿಲ್ಲ.

ಜ.19ರಂದು ಸೆಕ್ಟರ್‌ 19ರಲ್ಲಿ ಸಿಲಿಂಡರ್‌ ಸ್ಫೋಟದಿಂದಾಗಿ ಬೆಂಕಿ ಕಾಣಿಸಿಕೊಂಡಿತ್ತು. ಜ.25ರಂದು ಶಾರ್ಟ್‌ ಸರ್ಕಿಟ್‌ನಿಂದಾಗಿ 2 ಕಾರುಗಳು ಬೆಂಕಿಗಾಹುತಿಯಾಗಿದ್ದವು. ಫೆ.7ರಂದು ಇಸ್ಕಾನ್‌ ಶಿಬಿರದಲ್ಲಿ ಬೆಂಕಿ ಕಾಣಿಸಿಕೊಂಡು 12ಕ್ಕೂ ಹೆಚ್ಚು ಟೆಂಟ್‌ಗಳು ಭಸ್ಮವಾಗಿದ್ದವು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅಸ್ಸಾಂನಲ್ಲಿ ಇನ್ನು 18 ವರ್ಷ ಮೇಲಿನವರಿಗೆ ಆಧಾರ್‌ ಇಲ್ಲ
ಪರೀಕ್ಷಾ ಅಕ್ರಮ ವಿರುದ್ಧ 17ರಿಂದ ಕೈ ದೇಶವ್ಯಾಪಿ ಆಂದೋಲನ