ಅಣ್ವಸ್ತ್ರ ಹೊತ್ತೊಯ್ಯಬಲ್ಲ ಅರಿದಮನ್‌ ಸೇನೆಗೆ

KannadaprabhaNewsNetwork |  
Published : Apr 04, 2026, 01:45 AM IST
ಅರಿದಮನ್‌  | Kannada Prabha

ಸಾರಾಂಶ

ಘಾತುಕ ಬ್ಯಾಲಿಸ್ಟಿಕ್‌ ಕ್ಷಿಪಣಿಗಳನ್ನು ಹೊತ್ತ ಅಣು ಚಾಲಿತ ಸ್ವದೇಶಿ ಜಲಾಂತರ್ಗಾಮಿ ನೌಕೆ ಐಎನ್‌ಎಸ್‌ ಅರಿದಮನ್‌ ಶುಕ್ರವಾರ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿದೆ. ಈ ಮೂಲಕ, ಭಾರತದ ಎಸ್‌ಎಸ್‌ಬಿಎನ್‌ ಯೋಜನೆಯಡಿ ಅರಿಹಂತ್‌(2026), ಅರಿಘಾತ್‌(2024) ಬಳಿಕ ಸೇನೆ ಸೇರಿದ ಈ ಮಾದರಿಯ 3ನೇ ನೌಕೆಯೆನಿಸಿಕೊಂಡಿದೆ.

ಸೇನೆಗೆ ಈ ಮಾದರಿಯ 3ನೇ ನೌಕೆ

3,500 ಕಿ.ಮೀ. ಸಾಗುವ ಕ್ಷಿಪಣಿ ಸಜ್ಜಿತ

ನವದೆಹಲಿ: ಘಾತುಕ ಬ್ಯಾಲಿಸ್ಟಿಕ್‌ ಕ್ಷಿಪಣಿಗಳನ್ನು ಹೊತ್ತ ಅಣು ಚಾಲಿತ ಸ್ವದೇಶಿ ಜಲಾಂತರ್ಗಾಮಿ ನೌಕೆ ಐಎನ್‌ಎಸ್‌ ಅರಿದಮನ್‌ ಶುಕ್ರವಾರ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿದೆ. ಈ ಮೂಲಕ, ಭಾರತದ ಎಸ್‌ಎಸ್‌ಬಿಎನ್‌ ಯೋಜನೆಯಡಿ ಅರಿಹಂತ್‌(2026), ಅರಿಘಾತ್‌(2024) ಬಳಿಕ ಸೇನೆ ಸೇರಿದ ಈ ಮಾದರಿಯ 3ನೇ ನೌಕೆಯೆನಿಸಿಕೊಂಡಿದೆ.

ಕೇರಳದ ನೌಕಾನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಸಮ್ಮುಖದಲ್ಲಿ ಈ ಸೇರ್ಪಡೆ ಆಗಿದ್ದು, ‘ಅರಿದಮನ್‌ ಎಂಬುದು ಬರೀ ಪದವಲ್ಲ, ಶಕ್ತಿ’ ಎಂದು ಅವರು ಪೋಸ್ಟ್‌ ಮಾಡಿದ್ದಾರೆ. ನೌಕಾಪಡೆಯ ಭಾಗವಾಗುವುದಕ್ಕೂ ಮುನ್ನ ಈ ಜಲಾಂತರ್ಗಾಮಿ ನೌಕೆಯು ಸಮುದ್ರಲ್ಲಿ ಹಲವು ಪರೀಕ್ಷೆಗಳಿಗೆ ಒಳಪಟ್ಟಿತ್ತು.

ಸದ್ಯ ಭಾರತ ಬಿಟ್ಟರೆ ಅಮೆರಿಕ, ರಷ್ಯಾ, ಬ್ರಿಟನ್‌, ಫ್ರಾನ್ಸ್‌, ಚೈನಾ ಬಳಿ ಮಾತ್ರವೇ ಇಂತಹ ಸಬ್‌ಮರೀನ್‌ಗಳಿವೆ.

ವಿಶೇಷತೆಯೇನು?:

7,000 ಟನ್‌ ತೂಗುವ ಅರಿದಮನ್‌ನ ಸಾಮರ್ಥ್ಯವು ಅರಿಹಂತ್‌ನ ಎರಡರಷ್ಟಿದೆ. ಇದರಲ್ಲಿ ಕ್ಷಿಪಣಿಗಳನ್ನು ಲಂಬವಾಗಿ ಉಡಾವಣೆ ಮಾಡಬಲ್ಲ 8 ಕೊಳವೆಗಳಿವೆ. ಇವುಗಳಿಂದಾಗಿ ಕ್ಷಿಪ್ರದಾಳಿ ಸಾಧ್ಯವಾಗುತ್ತದೆ. ಇದರಲ್ಲಿ 3,500 ಕಿ.ಮೀ. ಸಾಗಬಲ್ಲ 8 ಕೆ-4 ಕ್ಷಿಪಣಿಗಳು, 750 ಕಿ.ಮೀ. ಹಾರಬಲ್ಲ 24 ಕ-15 ಮಿಸೈಲ್‌ಗಳಿವೆ. ಇವುಗಳಿಂದ ಅಣ್ವಸ್ತ್ರವನ್ನು ಹೊತ್ತೊಯ್ಯಬಲ್ಲ ಕ್ಷಿಪಣಿ, ರಫೆಲ್‌, ಸುಖೋಯ್‌-30ಎಂಕೆಐ, ಮಿರಾಜ್ 2000ಗಳನ್ನೂ ಉಡಾವಣೆ ಮಾಡಬಹುದು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮಾಲ್ಡಾ ದಿಗ್ಬಂದನ ಸಂಚುಕೋರ ಬೆಂಗಳೂರಿಗೆ ಪರಾರಿ ವೇಳೆ ಸೆರೆ
ಯುದ್ಧದ ನಡುವೆ ಅಮೆರಿಕ ಸೇನೆಯಲ್ಲಿ ದಂಗೆ?