ಇರಾನ್‌ನಿಂದ 10 ತೈಲ ಟ್ಯಾಂಕರ್‌ ಗಿಫ್ಟ್‌ : ಟ್ರಂಪ್‌

KannadaprabhaNewsNetwork |  
Published : Mar 27, 2026, 03:00 AM ISTUpdated : Mar 27, 2026, 03:47 AM IST
Donald Trump

ಸಾರಾಂಶ

ಇರಾನ್‌ ತಮಗೆ ಅತ್ಯಮೂಲ್ಯವಾದ ಉಡುಗೊರೆಯನ್ನು ಕಳಿಸಿಕೊಟ್ಟಿದೆ ಎಂದು ಬುಧವಾರ ಅಚ್ಚರಿಯ ಹೇಳಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್‌, ಅದು ತೈಲ ಹೊತ್ತ 10 ಹಡಗುಗಳು ಎಂಬ ಸಂಗತಿಯನ್ನು ಗುರುವಾರ ಬಹಿರಂಗಪಡಿಸಿದ್ದಾರೆ.  

 ವಾಷಿಂಗ್ಟನ್‌: ಇರಾನ್‌ ತಮಗೆ ಅತ್ಯಮೂಲ್ಯವಾದ ಉಡುಗೊರೆಯನ್ನು ಕಳಿಸಿಕೊಟ್ಟಿದೆ ಎಂದು ಬುಧವಾರ ಅಚ್ಚರಿಯ ಹೇಳಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್‌, ಅದು ತೈಲ ಹೊತ್ತ 10 ಹಡಗುಗಳು ಎಂಬ ಸಂಗತಿಯನ್ನು ಗುರುವಾರ ಬಹಿರಂಗಪಡಿಸಿದ್ದಾರೆ. ಜೊತೆಗೆ, ಉದ್ವಿಗ್ನತೆಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಇದು ಇರಾನ್‌ನಿಂದ ಬಂದ ಸೌಹಾರ್ದಯುತ ಬೆಳವಣಿಗೆ ಎಂದೂ ಹರ್ಷ ವ್ಯಕ್ತಪಡಿಸಿದ್ದಾರೆ.

ಶ್ವೇತಭವನದಲ್ಲಿ ನಡೆದ ಸಚಿವ ಸಂಪುಟ ಸಭೆ

ಶ್ವೇತಭವನದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ಸಂಘರ್ಷದ ಕುರಿತ ಮಾತುಕತೆಗಳ ನಡುವೆ ಸೌಹಾರ್ದತೆಯ ಸೂಚಕವಾಗಿ ಇರಾನ್ ಪಾಕಿಸ್ತಾನಿ ಧ್ವಜ ಹೊತ್ತ 10 ತೈಲ ಹಡಗುಗಳನ್ನು ಹೋರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿಸಿದೆ. ತಾವು ಆಡಿದ ಮಾತಿಗಾಗಿ ಇರಾನ್‌ ಕ್ಷಮೆ ಯಾಚಿಸಿತು. ನಂತರ ಇನ್ನೂ 2 ಹಡಗುಗಳನ್ನು ಕಳಿಸಿಕೊಡುತ್ತೇವೆ ಎಂದು ತಿಳಿಸಿತು. ಅದರಂತೆ ಒಟ್ಟು 10 ತೈಲ ಹಡಗುಗಳನ್ನು ಕಳಿಸಿತು’ ಎಂದು ತಿಳಿಸಿದ್ದಾರೆ.ಈ ಮಧ್ಯೆ, ಹಡಗಿನ ಮೇಲಿರುವ ಧ್ವಜ ಪಾಕಿಸ್ತಾನಿ ಧ್ವಜದಂತೆ ಕಾಣುತ್ತಿದೆ ಎಂದ ಟ್ರಂಪ್‌, ಪಾಕ್‌ ರಾಜತಾಂತ್ರಿಕ ವಿಷಯಗಳಲ್ಲಿ ಮಾತ್ರವಲ್ಲದೆ ಸರಕು ಪೂರೈಕೆಯಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ತಿಳಿಸುವ ಯತ್ನ ಮಾಡಿದರು.

ನನಗೆ ಇರಾನ್‌ ಸುಪ್ರೀಂ ಲೀಡರ್‌ ಆಗುವ ಆಹ್ವಾನ ಬಂದಿತ್ತು: ಟ್ರಂಪ್ 

ವಾಷಿಂಗ್ಟನ್: ‘ಇರಾನ್‌ನಿಗರು ನನ್ನನ್ನು ತಮ್ಮ ಸರ್ವೋಚ್ಚ ನಾಯಕನನ್ನಾಗಿ ಮಾಡಲು ಬಯಸುತ್ತಾರೆ. ಆದರೆ, ನಾನು ಆ ಸ್ಥಾನವನ್ನು ವಹಿಸಿಕೊಳ್ಳಲು ಆಸಕ್ತಿ ಹೊಂದಿಲ್ಲ ಎಂದು ನಿರಾಕರಿಸಿದ್ದೇನೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.ಬುಧವಾರ ರಾತ್ರಿ ನಡೆದ ರಿಪಬ್ಲಿಕನ್ ನಿಧಿಸಂಗ್ರಹಣೆ ಸಭೆಯಲ್ಲಿ ಮಾತನಾಡಿದ ಟ್ರಂಪ್‌, ‘ಅಮೆರಿಕ-ಇಸ್ರೇಲ್‌ ದಾಳಿಯಲ್ಲಿ ಅದರ ಅಯತೋಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ, ಇರಾನಿಗರು ನನ್ನನ್ನು ಮುಂದಿನ ಸರ್ವೋಚ್ಚ ನಾಯಕನಾಗಿ ಎಂದು ಕೇಳಿಕೊಂಡರು. ಆದರೆ, ನಾನು ಅದನ್ನು ತಿರಸ್ಕರಿಸಿದೆ. ಧನ್ಯವಾದಗಳು ಎಂದೆ’ ಎಂದು ಹೇಳಿಕೊಂಡರು.

''''ಇರಾನ್‌ನ ನಾಯಕರಾಗುವುದು ತುಂಬಾ ಕಷ್ಟಕರ ಮತ್ತು ಒತ್ತಡದ ಪಾತ್ರವಾದ್ದರಿಂದ ಯಾರೂ ಅದರ ನಾಯಕರಾಗಲು ಬಯಸುವುದಿಲ್ಲ. ಅದಕ್ಕೇ ನಾನು ‘ಧನ್ಯವಾದಗಳು. ನನಗೆ ಅದು ಬೇಡ ಎಂದೆ'''' ಎಂದರು.ಅಯತೋಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ ಇರಾನ್‌ ಅವರ ಪುತ್ರ ಮೊಜ್ತಾಬಾ ಖಮೇನಿ ಅವರನ್ನು ಇರನ್‌ ತನ್ನ ಮುಂದಿನ ಸರ್ವೋಚ್ಚ ನಾಯಕರನ್ನಾಗಿ ಮಾಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸಿಎಂಗಳ ಜತೆ ಇಂದು ಮೋದಿ ಸಭೆ - ಕೋವಿಡ್‌ ಟೈಮ್‌ ರೀತಿ ಪರಿಸ್ಥಿತಿ ಅವಲೋಕನ
ಭಾರತ ಸೇರಿ 5 ಮಿತ್ರ ದೇಶಗಳಿಗೆ ಹೊರ್ಮುಜ್ ಜಲಸಂಧಿ ಓಪನ್-ಭಾರತಕ್ಕೆ ತೈಲ, ಅನಿಲ ಆಗಮನ ಸುಗಮ