ಅಮೆರಿಕದ ವಿರುದ್ಧ ಪ್ರತೀಕಾರ : ಇರಾನ್‌ ಎಚ್ಚರಿಕೆ

KannadaprabhaNewsNetwork |  
Published : Jun 22, 2025, 11:47 PM ISTUpdated : Jun 23, 2025, 04:07 AM IST
ಇರಾನ್  | Kannada Prabha

ಸಾರಾಂಶ

ಇಸ್ರೇಲ್‌ ಬಳಿಕ ಅಮೆರಿಕ ಕೂಡ ನಮ್ಮ ಮೇಲೆ ಅಪಾಯಕಾರಿ ಯುದ್ಧ ಘೋಷಿಸಿದೆ. ಈ ಮೂಲಕ ರಾಜತಾಂತ್ರಿಕ ಸಂಧಾನಕ್ಕೆ ಅಮೆರಿಕವೇ ತಿಲಾಂಜಲಿ ಇಟ್ಟಿದೆ. ಅಮೆರಿಕದ ಪ್ರಚೋದನೆಗೆ ತಕ್ಕ ಪ್ರತ್ಯುತ್ತರ ನೀಡುವ ಹಕ್ಕನ್ನು ನಾವು ಕಾಯ್ದಿಟ್ಟುಕೊಂಡಿದ್ದೇವೆ ಎಂದ ಇರಾನ್‌ 

ದುಬೈ: ಇಸ್ರೇಲ್‌ ಬಳಿಕ ಅಮೆರಿಕ ಕೂಡ ನಮ್ಮ ಮೇಲೆ ಅಪಾಯಕಾರಿ ಯುದ್ಧ ಘೋಷಿಸಿದೆ. ಈ ಮೂಲಕ ರಾಜತಾಂತ್ರಿಕ ಸಂಧಾನಕ್ಕೆ ಅಮೆರಿಕವೇ ತಿಲಾಂಜಲಿ ಇಟ್ಟಿದೆ. ಅಮೆರಿಕದ ಪ್ರಚೋದನೆಗೆ ತಕ್ಕ ಪ್ರತ್ಯುತ್ತರ ನೀಡುವ ಹಕ್ಕನ್ನು ನಾವು ಕಾಯ್ದಿಟ್ಟುಕೊಂಡಿದ್ದೇವೆ ಎಂದು ಇರಾನ್‌ನ ವಿದೇಶಾಂಗ ಸಚಿವಾಲಯ ಎಚ್ಚರಿಕೆ ನೀಡಿದೆ. ಈ ಮೂಲಕ ಪ್ರತೀಕಾರದ ಮಾತುಗಳನ್ನು ಆಡಿದೆ.

ತನ್ನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಶಕ್ತಿಶಾಲಿ ಬಂಕರ್‌ ಬಸ್ಟರ್‌ ಬಾಂಬ್‌ ಬಳಸಿ ನಡೆಸಿದ ದಾಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಇರಾನ್‌, ರಾಜತಾಂತ್ರಿಕ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲೇ ಅಮೆರಿಕ ನಡೆಸಿದ ದಾಳಿಯನ್ನು ಇಡೀ ವಿಶ್ವ ಮರೆಯಲ್ಲ. ಈ ಮೂಲಕ ಅಮೆರಿಕವು ಇಸ್ರೇಲ್‌ನ ಪ್ರಚೋದನೆಗೆ ಬೆಂಬಲ ನೀಡಿದಂತಾಗಿದೆ. ಇಸ್ರೇಲ್‌ ತನ್ನ ಅಪರಾಧದ ಸರಣಿ ಪೂರ್ಣಗೊಳಿಸಿದ ಬಳಿಕ ಇದೀಗ ಅಮೆರಿಕ ನಮ್ಮ ಮೇಲೆ ಅಪಾಯಕಾರಿ ಯುದ್ಧ ಘೋಷಿಸಿದೆ. ಅಮೆರಿಕದ ಪ್ರಚೋದನೆಯನ್ನು ತಡೆಯುವ ಮತ್ತು ಸೂಕ್ತ ಪ್ರತ್ಯುತ್ತರ ನೀಡುವ ಹಕ್ಕನ್ನು ನಾವು ಕಾಯ್ದಿರಿಸಿಕೊಂಡಿದ್ದೇವೆ. ದೇಶದ ಸಾರ್ವಭೌಮತ್ವ ಮತ್ತು ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿಕೊಂಡಿದೆ.

ಇದೇ ವೇಳೆ ಇರಾನ್‌ ರೆವಲ್ಯೂಷನರಿ ಗಾರ್ಡ್ಸ್‌ ಸೇನೆ ಕೂಡ ಅಮೆರಿಕದ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಟ್ರಂಪ್‌ ಮಾಡಿದ ಸದ್ದಿನಿಂದ ನಾವು ಬೆದರುವುದಿಲ್ಲ, ನಮ್ಮ ಪರಮಾಣು ಕಾರ್ಯಕ್ರಮವನ್ನು ನಿಲ್ಲಿಸುವುದಿಲ್ಲ ಎಂದು ತಿಳಿಸಿದೆ.

ದಾಳಿ, ರಾಜತಾಂತ್ರಿಕ ಸಂಧಾನಕ್ಕೆ ತಿಲಾಂಜಲಿ

ಅಮೆರಿಕಕ್ಕೆ ಪ್ರತ್ಯುತ್ತರ ನೀಡುವ ಹಕ್ಕು ನಮಗಿದೆ 

ಲಕ್ಷ್ಮಣರೇಖೆ ದಾಟಿದ್ದಾರೆಅಮೆರಿಕವು ದಾಟದ ಲಕ್ಷ್ಮಣ ರೇಖೆಯೇ ಇಲ್ಲ. ಆದರೆ ಅಮೆರಿಕ ತನ್ನ ಕೊನೆಯ ಮತ್ತು ಅತ್ಯಂತ ಅಪಾಯಕಾರಿ ಲಕ್ಷ್ಮಣರೇಖೆಯನ್ನು ಇರಾನ್‌ನ ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸುವ ಮೂಲಕ ದಾಟಿದೆ.- ಅಬ್ಬಾಸ್‌ ಅರ್ಘಾಜಿ, ಇರಾನ್‌ ವಿದೇಶಾಂಗ ಸಚಿವ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಅಮೆರಿಕಕ್ಕೆ ತಲೆನೋವಾದ ಇರಾನ್‌ ಅಗ್ಗದ ಅಸ್ತ್ರಗಳು
ನಾಯಕನಿಲ್ಲದ ಇರಾನ್‌ಗೆ ನೇತೃತ್ವ ಯಾರದ್ದು?