ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್‌ಸಿಇ) ಮಂಡಳಿಯು ಪ್ರಸ್ತಕ ಸಾಲಿನ 10,12 ತರಗತಿಯ ಫಲಿತಾಂಶಗಳನ್ನು ಬುಧವಾರ ಪ್ರಕಟಿಸಿದೆ. ಈ ಬಾರಿ ಬಾಲಕರಿಗಿಂತ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ನವದೆಹಲಿ: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್‌ಸಿಇ) ಮಂಡಳಿಯು ಪ್ರಸ್ತಕ ಸಾಲಿನ 10,12 ತರಗತಿಯ ಫಲಿತಾಂಶಗಳನ್ನು ಬುಧವಾರ ಪ್ರಕಟಿಸಿದೆ. ಈ ಬಾರಿ ಬಾಲಕರಿಗಿಂತ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
10,12ನೇ ತರಗತಿ ಫಲಿತಾಂಶದಲ್ಲಿ ಶೇ.99.45ರಷ್ಟು ಬಾಲಕಿಯರು ತೇರ್ಗಡೆಯಾಗಿದ್ದರೆ, ಶೇ. 98.64 ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ. ಐಸಿಎಸ್‌ಇ 10 ನೇ ತರಗತಿ ಲಿಖಿತ ಪರೀಕ್ಷೆಯು 67 ವಿಷಯಗಳಲ್ಲಿ ನಡೆದಿತ್ತು. 12 ತರಗತಿ ಐಎಸ್‌ಸಿ ಪರೀಕ್ಷೆಯು ಒಟ್ಟು 47 ವಿಷಯಗಳಲ್ಲಿ ನಡೆಸಲಾಗಿತ್ತು. ಜುಲೈನಲ್ಲಿ ಸುಧಾರಣಾ ಪರೀಕ್ಷೆಗಳು ನಡೆಯಲಿದೆ.